ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ‌ಬಳಿಕ‌ ನಿವೇದಿತಾ ಅವತಾರವೇ ಬದಲಾಯಿತು

 

ಗಾಯಕ, ಸಂಗೀತ ಸಂಯೋಜಕ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರು ಕಾನೂನಿನ ಪ್ರಕಾರ ವಿಚ್ಛೇದನ ಪಡೆದಿದ್ದಾರೆ. ಇವರಿಬ್ಬರು ಈಗ ಮಾಧ್ಯಮದ ಮುಂದೆ ಬಂದು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಜೋಡಿಯ ವಿಚ್ಛೇದನದ ಬಗ್ಗೆ ಒಂದಷ್ಟು ವದಂತಿಗಳು ಕೇಳಿ ಬಂದಿತ್ತು. ಈ ಬಗ್ಗೆ ಕೂಡ ಈ ಜೋಡಿ ಮಾಧ್ಯಮದ ಮುಂದೆ ಬಂದು ನೇರವಾಗಿ ಉತ್ತರ ನೀಡಿದೆ. 

ನಾನು ಬೆಳೆದ ಜೀವನ, ಜೀವನ ಶೈಲಿ, ಯೋಚನೆಗಳು, ವಿಚಾರಧಾರೆಗಳು ಬೇರೆ ಇದೆ. ಕೆಲ ವರ್ಷಗಳಿಂದ ನಾವಿಬ್ಬರೂ ಇದನ್ನು ಬಗೆಹರಿಸಿಕೊಂಡು ಬದುಕೋಣ ಅಂತ ಪ್ರಯತ್ನಪಟ್ಟೆವು. ನಮ್ಮಿಬ್ಬರಿಗೂ ಬೇರೆ ಬೇರೆ ಇದ್ದರೆ ಚೆನ್ನಾಗಿ ಇರಬಹುದು ಅಂತ ಅನಿಸಿತು. ಹೀಗಾಗಿ ನಾವಿಬ್ಬರೂ ಒಮ್ಮತದಿಂದ ಬೇರೆ ಬೇರೆ ಆಗಿದ್ದೇವೆ, ನಮಗೆ ವಿಚ್ಛೇದನ ಸಿಕ್ಕಿದೆ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

https://youtube.com/shorts/0iBuoihcrTk?si=gHSMEKGtg6SLvjHl

ನಿವೇದಿತಾ ಅವರು ಕೋಟ್ಯಾಂತರ ರೂಪಾಯಿ ಜೀವನಾಂಶ ಪಡೆದಿದ್ದಾರೆ ಎನ್ನೋದು ಸುಳ್ಳು. ನಾನು ಯಾವುದೇ ರೀತಿಯ ಜೀವನಾಂಶವನ್ನೂ ಕೊಟ್ಟಿಲ್ಲ ಎಂದು ಕೂಡಾ ಚಂದನ್ ಶೆಟ್ಟಿ ಹೇಳಿದ್ದಾರೆ. ಅಲ್ಲದೆ ನಾನು ಮಗು ಬೇಕು ಅಂತ ಹೇಳಿದೆ, ನಿವೇದಿತಾ ಒಪ್ಪಲಿಲ್ಲ ಎನ್ನುವ ಮಾತು ಇದೆ. ಇದು ಕೂಡ ಸುಳ್ಳು. ನಾವಿಬ್ಬರೂ ಚಿತ್ರರಂಗದಲ್ಲಿದ್ದೇವೆ, ನಮ್ಮಿಬ್ಬರಿಗೂ ಕರಿಯರ್ ಇದೆ. ನಿವೇದಿತಾ ಕೂಡ ಒಳ್ಳೆಯ ಸಂಪಾದನೆ ಮಾಡುತ್ತಿದ್ದಾರೆ, ಅವರ ಜೀವನವನ್ನು ಅವರೇ ನಿಭಾಯಿಸುತ್ತಿದ್ದಾರೆ. 

ನಿವೇದಿತಾ ಗೌಡ ಅವರಿಗೆ ಸಂಬಂಧಪಟ್ಟಂತೆ ಮೂರನೇ ವ್ಯಕ್ತಿಯನ್ನು ಸೇರಿಸಿ ಮಾತಾಡೋದು ಸರಿ ಅಲ್ಲ. ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಇರಲಿಲ್ಲ, ಹೀಗಾಗಿ ನಮ್ಮಿಬ್ಬರ ಮಧ್ಯೆ ಆಗಾಗ ಸಂಘರ್ಷ ಆಗ್ತಿತ್ತು.ನಾವು ಕಾನೂನಿನ ಪ್ರಕಾರವಾಗಿ ವಿಚ್ಛೇದನ ಪಡೆದಿದ್ದೇವೆ. ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ. ಸುಮ್ಮನೆ ಇಲ್ಲದಿದ್ದನ್ನು ಸೃಷ್ಟಿ ಮಾಡಬೇಡಿ. ನಮ್ಮ ಖಾಸಗಿ ವಿಚಾರವನ್ನು ನಮ್ಮಲ್ಲೇ ಇರಲು ಬಿಡಿ,ಎಂದು ಹೇಳಿದ್ದಾರೆ.