ಇನ್ನು ಇಷ್ಟು ವಷ೯ ಹೊರಬರಲ್ಲ, ದಶ೯ನ್ ಬೇಲ್ ಬಗ್ಗೆ ಕೋಡಿಶ್ರೀ ಬೆಚ್ಚಿಬೀಳಿಸುವ ಹೇಳಿಕೆ
Oct 17, 2024, 19:04 IST
ಕೊಲೆಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಬೆಳಗಿನ ಜಾವ 6 ಗಂಟೆ 55 ನಿಮಿಷದಲ್ಲಿ ನಗರದ ಜೆಸಿಆರ್ ಬಡಾವಣೆಯಲ್ಲಿರುವ ಕೀರ್ತಿ ಆಸ್ಪತ್ರೆಯಲ್ಲಿ ಸಹನಾ ಮಗುವಿಗೆ ಜನ್ಮ ನೀಡಿದರು.ನಿಗದಿತ ದಿನಾಂಕಕ್ಕಿಂತ ಒಂದು ವಾರ ಮೊದಲೇ ಮಗು ಜನನ ಹಿನ್ನೆಲೆ , ವೈದ್ಯಾಧಿಕಾರಿಗಳು ಮಗುವನ್ನು ನಿಗಾವಹಿಸಲು ಅಬ್ಸರ್ವೇಶನ್‌ನಲ್ಲಿ ಇಟ್ಟಿದ್ದಾರೆ. ಮೃತ ರೇಣುಕಾ ಸ್ವಾಮಿ ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.
ಮೃತ ರೇಣುಕಾಸ್ವಾಮಿ ಮನೆಗೆ ಮೊಮ್ಮಗನ ಆಗಮನ ಹಿನ್ನೆಲೆಯಲ್ಲಿ ಕುಟುಂಬಸ್ಥರಲ್ಲಿ ಸಂಭ್ರಮ, ಸಂತಸ ಮನೆ ಮಾಡಿದೆ. ಮೊಮ್ಮಗ ಜನ್ಮ ಸಂಭ್ರಮದ ವೇಳೆ ಮಾಧ್ಯಮಗಳ ಮುಂದೆ ಮೊದಲ ಬಾರಿಗೆ ಕಾಶೀನಾಥ ಶಿವನಗೌಡ್ರ ನಗೆ ಬೀರಿದ್ದಾರೆ.
ಮೊಮ್ಮಗ ಜನನವಾದ ಬಳಿಕ ತಾತ ಕಾಶೀನಾಥ ಶಿವನಗೌಡ್ರ ಮಾತನಾಡಿ ನಮ್ಮ ಮಗನೇ ಹುಟ್ಟಿ ಬಂದಷ್ಟು ಸಂತೋಷವಾಗಿದೆ ಎಂದು, ಮಗನನ್ನು ನೆನೆದ ಕಾಶೀನಾಥ ಶಿವನಗೌಡ್ರ ಮಗನನ್ನು ನೆನೆದು ಕಣ್ಣೀರಿಟ್ಟರು.
<a href=https://youtube.com/embed/dkRnv0sfWIo?autoplay=1&mute=1><img src=https://img.youtube.com/vi/dkRnv0sfWIo/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತುಂಬಾ ಕಾಳಜಿ ವಹಿಸಿದ್ದಾರೆ. ನಾನು ವೈದ್ಯರು ಹಾಗೂ ಸಿಬ್ಬಂದಿಗೆ ಚಿರರುಣಿ ಎಂದು ಚಿತ್ರದುರ್ಗದಲ್ಲಿ ಮೃತ ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರ ಹೇಳಿದರು.ನಟಿ ಪವಿತ್ರಾ ಗೌಡಗೆ ಮೃತ ರೇಣುಕಾ ಸ್ವಾಮಿ ಅಶ್ಲೀಲ ಮೆಸೇಜ್ ಮಾಡಿದ ಆರೋಪದಲ್ಲಿ ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಕರೆದೊಯ್ದು ಕೊಲೆ ಮಾಡಲಾಗಿತ್ತು. ಈ ಸಂಬಂಧ ನಟ ದರ್ಶನ್ ಮತ್ತು ಗ್ಯಾಂಗ್ ಜೈಲು ಸೇರಿದ್ದಾರೆ. ಅಲ್ಲದೆ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ರದ್ದು ಮಾಡಿದೆ.
ರೇಣುಕಾಸ್ವಾಮಿ ದರ್ಶನ್ ಗ್ಯಾಂಗ್ ನಿಂದ ಹಲ್ಲೆಗೊಳಗಾದಾಗ ತನ್ನ ಪತ್ನಿ ಗರ್ಭಿಣಿ ತನ್ನನ್ನು ಬಿಟ್ಟು ಬಿಡಿ ಎಂದು ಅಂಗಲಾಚಿ ಬೇಡಿದ್ದ ಎಂದು ಹೇಳಲಾಗಿತ್ತು. ಅಲ್ಲದೆ ರೇಣುಕಾಸ್ವಾಮಿ ಕೊಲೆ ನಡೆದಾಗ ಸಹನಾ ಐದು ತಿಂಗಳ ಗರ್ಭಿಣಿಯಾಗಿದ್ದರು.ಪತಿಯ ಸಾವಿನ ಬಳಿಕ ಮಾನಸಿಕವಾಗಿ ಸಹನಾ ಕುಗ್ಗಿ ಹೋಗಿದ್ದರು.
ಕುಟುಂಬಸ್ಥರು ಅವರಿಗೆ ಸಾಂತ್ವಾನ ತಿಳಿಸಿದ್ದರು. ಇದೀಗ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಅವರು ಗಂಡು ಮಗುವಿಗೆ ಜನನ ನೀಡಿದ್ದಾರೆ. ರೇಣುಕಾಸ್ವಾಮಿ ಮಗನ ರೂಪದಲ್ಲಿ ಮತ್ತೆ ಹುಟ್ಟಿಬಂದ ಎಂದು ಕುಟುಂಬಸ್ಥರು ಸಮಾಧಾನ ಮಾಡಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.