ದ ರ್ಶನ್ ತಲೆಯ ನಕಲಿ ಕೂದಲು ಬಿಚ್ಚಿಸಿದ ಅಧಿಕಾರಿಗಳು; ಪವಿತ್ರ ಗೌಡ ಶಾ ಕ್
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ವಿಚಾರಣೆ ನಡೆಯುತ್ತಿದೆ. ಸದ್ಯ ಮೆಡಿಕಲ್ ಚೆಕಪ್ಗಾಗಿ ಎಲ್ಲ ಆರೋಪಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ನಟ ದರ್ಶನ್ ಅವರು ತಲೆಗೆ ಹಾಕಿದ್ದ ವಿಗ್ ಅನ್ನು ಪೊಲೀಸರು ತೆಗೆಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಅತ್ಯಂತ ಚುರುಕಿನಿಂದ ನಡೆಯುತ್ತಿದೆ. ನಾಳೆ ಎಲ್ಲ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ತನಿಖೆಗಾಗಿ ಕೂದಲಿನ ಮಾದರಿ ಸಂಗ್ರಹಿಸಲು ನಟ ದರ್ಶನ್ ಧರಿಸಿದ್ದ ವಿಗ್ ಅನ್ನು ಪೊಲೀಸರು ತೆಗೆಸಿದ್ದಾರೆ.
ಪ್ರಕರಣ ಸಂಬಂಧ ಡಿಎನ್ಎ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದಾರೆ.ಆರೋಪಿ ದರ್ಶನ್ ಅವರ ರಕ್ತ ಹಾಗೂ ಕೂದಲಿನ ಸ್ಯಾಂಪಲ್ ಅನ್ನು ಪೊಲೀಸರು ಪಡೆದಿದ್ದಾರೆ. ಕೊಲೆ ನಡೆದ ಜಾಗದಲ್ಲಿ ಪತ್ತೆಯಾದ ಕೂದಲು, ರಕ್ತ ಹೊಂದಾಣಿಕೆ ಮಾಡಲು ಸ್ಯಾಂಪಲ್ ಪಡೆಯಲಾಗಿದೆ. ದರ್ಶನ್ ಅವರು ಧರಿಸಿದ್ದ ವಿಗ್ ಅನ್ನು ತೆಗೆಸಿ ಕೂದಲಿನ ಸ್ಯಾಂಪಲ್ ಅನ್ನು ವೈದ್ಯರು ಪಡೆದುಕೊಂಡಿದ್ದಾರೆ.
ಕಳೆದ ಒಂಬತ್ತು ದಿನಗಳಿಂದ ಪೊಲೀಸರ ಕಸ್ಟಡಿಯಲ್ಲಿರುವ ಎಲ್ಲಾ ಆರೋಪಿಗಳನ್ನು ನಾಳೆ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಎ-೧ ಆರೋಪಿ ಪವಿತ್ರಾ ಗೌಡ, ಎ-೨ ಆರೋಪಿ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರೋಗ್ಯ ತಪಾಸಣೆಗೆ ಕರೆದುಕೊಂಡು ಹೋಗಲಾಗಿದೆ.
ಈ ವೇಳೆ ಉಳಿದ ಆರೋಪಿಗಳಂತೆ ದರ್ಶನ್ ಕೂದಲಿನ ಮಾದರಿ ಸಂಗ್ರಹಿಸಲು ಪೊಲೀಸರು ದರ್ಶನ್ ಧರಿಸಿದ್ದ ವಿಗ್‌ಅನ್ನು ತೆಗೆಸಿದ್ದಾರೆ ಇದು ಕ್ರಾಂತಿ ಸಿನಿಮಾದ ಚಿತ್ರೀಕರಣದ ವೇಳೆ ಧರಿಸಿದ ದುಬಾರಿ ವಿಗ್ ಅಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.