ದರ್ಶನ್ ನನ್ನು ಕುರಿ ಮಾಡಿಬಿಟ್ಟ ಪ ವಿತ್ರ ಗೌಡ;

 

ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ 17 ಆರೋಪಿಗಳು ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾರೆ. ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಹಿಂಸಿಸಿ ಕೊಲೆ ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ತಾಂತ್ರಿಕ ಸಾಕ್ಷ್ಯಗಳು, ವಿಧಿ ವಿಜ್ಞಾನ ಪ್ರಯೋಗಾಲಯದ  ವರದಿ ಗುರುವಾರ ಪೊಲೀಸರಿಗೆ ಸಲ್ಲಿಕೆಯಾಗಿವೆ. ಈ ಕೃತ್ಯದಲ್ಲಿ ಎಲ್ಲ ಆರೋಪಿಗಳ ಪಾತ್ರ ಏನೇನು? ಕೊಲೆ ದಿನ ಯಾರು ಏನೆಲ್ಲ ಮಾಡಿದ್ದಾರೆ?ಎಂಬುದರ ಪಿನ್ ಟು ಪಿನ್ ಕಂಪ್ಲೀಟ್ ಮಾಹಿತಿಯನ್ನು ಈ FSL ವರದಿಯಲ್ಲಿ ತಿಳಿಸಲಾಗಿದೆ.

ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಎ1 ಆರೋಪಿ ನಟಿ ಪವಿತ್ರಾ ಗೌಡ ಪಾತ್ರ ಇಲ್ಲ. ಹೆದರಿಸಲು ಹೇಳಿದ್ದೆ ಆದರೆ ಕರೆದುಕೊಂಡು ಬಂದವರೇ ಕೊಲೆ ಮಾಡಿದ್ದಾರೆ ಎಂದೆಲ್ಲ ಹೇಳಲಾಗಿತ್ತು. ಹಣ ಕೊಟ್ಟು ಕೇಸ್ ದಾರಿ ತಪ್ಪಿಸಲು ಪ್ರಯತ್ನಿಸಲಾಗಿತ್ತು. ಇದೀಗ ಪೊಲೀಸರಿಗೆ ಸಿಕ್ಕ ಸಾಕ್ಷ್ಯಾಧಾರಗಳು ಯಾರೆಲ್ಲ ಯಾವ್ಯಾವ ಹಂತದಲ್ಲಿ ಈ ಕೊಲೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಬಿಚ್ಚಿಟ್ಟಿವೆ. FSL ವರದಿಯಲ್ಲಿ ಅಂಶಗಳು ಇಲ್ಲಿವೆ.

ರೇಣುಕಾಸ್ವಾಮಿ ಹತ್ಯೆಗೆ ಮೂಲ ಕಾರಣ ಪವಿತ್ರಾ ಗೌಡ. ಕೊಲೆ ವೇಳೆ ಈಕೆ ಸ್ಥಳದಲ್ಲಿದ್ದಳು. ಕೃತ್ಯ ನಡೆದ ಸ್ಥಳದಲ್ಲಿ ನೆಟ್‌ವರ್ಕ್ ಸಾಕ್ಷ್ಯ,ಸಿಸಿ ಟಿವಿ ದೃಶ್ಯದ ಸಾಕ್ಷ್ಯಾಧಾರಗಳು ಸಿಕ್ಕಿವೆ. ಈಕೆ ಮೃತನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಇದೆಲ್ಲವು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.

ನಟ ದರ್ಶನ್ ರೇಣುಕಾಸ್ವಾಮಿ ಕಿಡ್ನಾಪ್ ಮಾಡಿಸಿ, ಕೊಲೆಯವರೆಗೆ ಇವರದ್ದು ಕೈವಾಡ ಇದೆ ಎಂದು ತಿಳಿದು ಬಂದಿದೆ. ಕೊಲೆ ಬಳಿಕ ಹಣ ನೀಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ. ಶೆಡ್ ಇರುವ ಸ್ಥಳಕ್ಕೆ ದರ್ಶನ್ ಬಂದು ಹೋಗಿದ್ದಕ್ಕೆ ಸಿಸಿಟಿವಿ ಸಾಕ್ಷ್ಯಗಳು ಲಭಿಸಿವೆ. ದರ್ಶನ್ ಬಟ್ಟೆ ಮತ್ತು ಶೂ ಮೇಲೆ ರಕ್ತ ಕಲೆಗಳು ಪತ್ತೆಯಾಗಿವೆ. ಕೊಲೆಯಲ್ಲಿ ನಟ ಭಾಗಿಯಾದ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ. <a href=https://youtube.com/embed/7s5iuE6aOZE?autoplay=1&mute=1><img src=https://img.youtube.com/vi/7s5iuE6aOZE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಈ ಪವನ್ ಪವಿತ್ರಾ ಗೌಡ ಹಾಗೂ ಚಿತ್ರದುರ್ಗದ ರಾಘವೇಂದ್ರ ಜೊತೆಗಿದ್ದ. ಫೇಕ್ ಇನ್ಸ್ಟಾಗ್ರಾಮ್ ಖಾತೆ ಮೂಲಕ ರೇಣುಕಾಸ್ವಾಮಿ ಜೊತೆ ಚಾಟಿಂಗ್ ಮಾಡಿ, ರಘುಗೆ ಕಿಡ್ನಾಪ್ ಮಾಡಲು ಈತ ಸೂಚಿದ್ದ ಎಂಬುದು ಗೊತ್ತಾಗಿದೆ. ಕಿಡ್ನಾಪ್ ಪ್ಲಾನ್ ಮಾಡಿದ ಪವನ್ ಶೆಡ್‌ಗೆ ತೆರಳಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಸಹ ಮಾಡಿದ್ದಾನೆ. ಈತನ ಬಟ್ಟೆ ಮೇಲೂ ರಕ್ತದ ಮಾದರಿ ಸಿಕ್ಕಿವೆ. ಕಿಡ್ನಾಪ್ ಸೂತ್ರಧಾರಿ ಈ ಪವನ್ ಮನೆಯಲ್ಲಿ ಒಂದಷ್ಟು ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಪವನ್ ಸೂಚನೆ ಮೇರೆಗೆ ಚಿತ್ರದುರ್ಗ ದರ್ಶನ್ ಫ್ಯಾನ್ ರಾಘವೇಂದ್ರ ಚಿತ್ರದುರ್ಗದಲ್ಲಿ ಕಾದು ನಿಂತು ರೇಣುಕಾಸ್ವಾಮಿ ಕರೆತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕೊಲೆ ನಡೆದ ಸ್ಥಳ ಶೆಡ್ ನಲ್ಲಿ ಈತ ಇದ್ದದ್ದು ಪತ್ತೆಯಾಗಿದೆ. ರೇಣುಕಾಸ್ವಾಮಿಯ ಹತ್ಯೆ ಬಳಿಕ ಆತನ ಚಿನ್ನಾಭರಣವನ್ನು ತನ್ನ ಪತ್ನಿಗೆ ನೀಡಿದ್ದ. ಆತನ ಮನೆಯಲ್ಲಿದ್ದ ಹಣ ಜಪ್ತಿ ಮಾಡಲಾಯಿತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.