ಕಾತಿ೯ಕ್ ಮಹೇಶ್ ಗೆ ಒಲಿದ ಅದೃಷ್ಟ, ಕಿಚ್ಚ ಇಲ್ಲದೇ ಬಿಗ್ಬಾಸ್ ನೋಡಲ್ಲ ಎಂದ ಜನ
Sep 12, 2024, 08:57 IST
ಅದೃಷ್ಟ ಕೈ ಹಿಡಿಯಿತು ಅಂದ್ರೆ ಜಾಕ್ಪಟ್ ಹೊಡೆದ ಹಾಗೆ. ಅದರಲ್ಲೂ ಚಿತ್ರರಂಗದಲ್ಲಂತೂ ಕೇಳಲೇಬೇಡಿ ಹೊಸ ಅವಕಾಶಗಳು ಒಂದಾದಮೇಲೆ ಇನ್ನೊಂದು ಹುಡುಕಿಕೊಂಡು ಬರುತ್ತಲೇ ಇರುತ್ತವೆ. ಹೌದು ಬಿಗ್ ಬಾಸ್ ಸೀಸನ್ 10ರ ವಿನ್ನರ್ ಆಗಿ, ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾರ್ತಿಕ್ ಮಹೇಶ್ ಅದರ ಜೊತೆ ಜೊತೆಗೆ ಮತ್ತೊಂದು ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ. ಅದು ಸ್ಪರ್ಧಿಯಾಗಿ ಅಲ್ಲ, ಆದರೆ ನಿರೂಪಕನಾಗಿ.
ಮನೆ ಮಗನಂತೆ ಕಾಣುವ ಕಾರ್ತಿಕ್ ಈಗಾಗಲೇ ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದ ಕಾರ್ತಿಕ್ ಮಹೇಶ್ ಬಿಬಿಕೆ10 ಗೆ ಬರೋದಕ್ಕೂ ಮೊದಲು ಅಂತರಪಟ ಧಾರವಾಹಿಯಲ್ಲಿ ನಾಯಕಿ ಆರಾಧನಾ ಗೆಳೆಯನಾಗಿ ನಟಿಸಿದ್ದರು. ಅಲ್ಲಿ ಅವರ ಪಾತ್ರದ ಅಂತ್ಯವಾದ ಬಳಿಕ ಬಿಬಿಕೆ 10ರಲ್ಲಿ ಭಾಗವಹಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು. ಇದೀಗ ಸಿನಿಮಾಗಳಲ್ಲೂ ನಟಿಸುತ್ತಿರುವ ಕಾರ್ತಿಕ್, ಅವುಗಳ ಮಧ್ಯೆ ಹೊಸ ರಿಯಾಲಿಟಿ ಶೋಗೆ ನಿರೂಪಕರಾಗಲಿದ್ದಾರೆ.
ಹೌದು, ಕಾರ್ತಿಕ್ ಮಹೇಶ್ ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸೆಲೆಬ್ರಿಟಿಗಳೇ ತುಂಬಿರುವಂತಹ, ಅದರಲ್ಲೂ ಬಿಗ್ ಬಾಸ್ ಸೀಸನ್ 10ರ ಕಂಟೆಸ್ಟ್ ಗಳೇ ತುಂಬಿರುವ ಸುವರ್ಣ ಸೆಲೆಬ್ರಿಟಿ ಲೀಗ್ ರಿಯಾಲಿಟಿ ಶೋವನ್ನು ಕಾರ್ತಿಕ್ ಮಹೇಶ್ ನಿರ್ವಹಿಸಲಿದ್ದಾರೆ. ಅಂದರೆ ಆಂಕರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸುವರ್ಣ ಸೆಲೆಬ್ರಿಟಿ ಲೀಗ್' ರಿಯಾಲಿಟಿ ಶೋ ಇದೇ ಸೆಪ್ಟೆಂಬರ್ 15 ರಿಂದ ಆರಂಭವಾಗಲಿದೆ.
ಕಳೆದ ಒಂದು ತಿಂಗಳಿನಿಂದ ಈ ರಿಯಾಲಿಟಿ ಶೋ ಪ್ರೋಮೋ ವಿಭಿನ್ನ ರೀತಿಯಲ್ಲಿ ಪ್ರಸಾರವಾಗುತ್ತಿದ್ದು, ವೀಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಯಾವ ರೀತಿಯ ಶೋ ಇದಾಗಲಿದೆ? ಇಲ್ಲೂ ಜಿದ್ದಾ ಜಿದ್ದಿ ನಡೆಯುತ್ತಾ ಎನ್ನುವ ಕುತೂಹಲ ಶುರುವಾಗಿದೆ. ಸೆಲೆಬ್ರಿಟಿ ಲೀಗ್ ನಲ್ಲಿ ಎರಡು ತಂಡಗಳಿದ್ದು, ವಿನಯ್ ಗೌಡ ಹಾಗೂ ಚಂದು ಗೌಡ ಎರಡು ತಂಡವನ್ನು ಲೀಡ್ ಮಾಡಲಿದ್ದಾರೆ. ತನಿಷಾ ಕುಪ್ಪಂಡ, ನಮ್ರತಾ ಗೌಡ, ಬುಲೆಟ್ ರಕ್ಷಕ್, ಪ್ರಿಯಾಂಕಾ ಶಿವಣ್ಣ, ಆಸೆ ಧಾರಾವಾಹಿ ನಟರಾದ ಪ್ರಿಯಾಂಕಾ, ನಿನಾದ್ ಹರಿತ್ಸ, ಗೌರಿಶಂಕರ ಧಾರಾವಾಹಿಯ ಅಭಿಜ್ಞಾ ಭಟ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.