ಕೊರೊನಾ ವ್ಯಾಕ್ಸಿನ್ ಪಡೆದ ಜನರಿಗೆ ಶುರುವಾಯ್ತು ನಡುಕ, ಸೈಡ್ ಎಫೆಕ್ಟ್ ಪಕ್ಕನಾ?
ಕೋವಿಡ್ ವಿರುದ್ಧ ಹೋರಾಡಲು ತೆಗೆದುಕೊಳ್ಳುವ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದ ಬಳಿಕ ಪುರುಷರಲ್ಲಿ ಹಲವು ಬದಲಾವಣೆ ಆಗಿದೆ. ಹೃದಯಸ್ತಂಭನ ಜಾಸ್ತಿಯಾಗಿದೆ. ಸಕ್ಕರೆ ಖಾಯಿಲೆ ಹೆಚ್ಚಾಗಿದೆ. ವೀರ್ಯಾಣು ಶಕ್ತಿ ಕಡಿಮೆಯಾಗುತ್ತದೆ ಎಂಬೆಲ್ಲಾ ಸಂಶಯಗಳಿಗೆ ಇದೀಗ ಮತ್ತೊಮ್ಮೆ ರೆಕ್ಕೆ ಪುಕ್ಕ ಮೂಡಿದೆ.
ಕೋವಿಡ್ – 19 ವೈರಸ್ ಪ್ರತಿರೋಧಕ ಲಸಿಕೆ ಕೋವಿಶೀಲ್ಡ್ ಅಪರೂಪದ ಪ್ರಕರಣಗಳಲ್ಲಿ ಅಡ್ಡ ಪರಿಣಾಮ ಬೀರಬಲ್ಲದು ಎಂದು ಲಸಿಕೆ ತಯಾರಿಕಾ ಕಂಪನಿ ಆಕ್ಸ್‌ಫರ್ಡ್- ಆಸ್ಟ್ರಾ ಜೆನಿಕಾ ಬ್ರಿಟನ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ.ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಸ್ಟ್ರಾ ಜೆನಿಕಾ ಕಂಪನಿ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿತ್ತು.
ಲಸಿಕೆ ಪಡೆದ ಹಲವರು ಕಂಪನಿ ವಿರುದ್ಧ ಬ್ರಿಟನ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಸಾವು ಹಾಗೂ ಅಡ್ಡಪರಿಣಾಮದ ಆರೋಪಗಳನ್ನು ಕಂಪನಿ ವಿರುದ್ಧ ಮಾಡಲಾಗಿತ್ತು.ಈ ಪ್ರಕರಣದ ವಿಚಾರಣೆ ಕಂಪನಿಯು ಕೆಲವು ಅಪರೂಪದ ಪ್ರಕರಣದಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವ ಥ್ರಂಬೋಸಿಸ್ ವಿತ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಎಂಬ ಅಡ್ಡಪರಿಣಾಮದ ತೀವ್ರತೆಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿದೆ.
ಈ ಹಿನ್ನೆಲೆ ವೈದ್ಯರು ಈ ಲಸಿಕೆ ಪಡೆದ 4 ತಿಂಗಳ ನಂತರ ಅದರ ಪರಿಣಾಮ ತಿಳಿಯುತ್ತದೆ.4 ತಿಂಗಳ ನಂತರ ನಿಧಾನವಾಗಿ ಪರಿಣಾಮ ಅರಿವಾಗುತ್ತದೆ ಎಂದು ಹೇಳಿದ್ದಾರೆ.10 ಲಕ್ಷದಲ್ಲಿ ಒಬ್ಬರಿಗೆ ಈ ರೋಗ ಕಾಣಿಸಿಕೊಳ್ಳಬಹುದು ಹಾಗಾಗಿ ಯಾರೂ ಕೂಡ ಹೆದರುವ ಅಗತ್ಯವಿಲ್ಲ ಎಂದು ಧೈರ್ಯ ಹೇಳಿದ್ದಾರೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.