2025ಕ್ಕೆ ಮೋದಿ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ, ರಾಹುಲ್ ಗೆ ಗುರುಬಲ

 
Na
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಆರ್‌ಎಸ್‌ಎಸ್‌ ಕಚೇರಿಗೆ ಭೇಟಿ ನೀಡಿದ್ದು, ವಯಸ್ಸಿನ ಕಾರಣದಿಂದ ಅವರ ರಾಜೀನಾಮೆ ಕುರಿತು ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಇದೀಗ ಸ್ಫೋಟಕ ಭವಿಷ್ಯವೊಂದನ್ನು ಬ್ರಹ್ಮಾಂಡ ಗುರೂಜಿ ನುಡಿದಿದ್ದಾರೆ.ಬೆಂಗಳೂರಿನ ಧರ್ಮರಾಯ ದೇವಸ್ಥಾನದ ಕರಗ ಉತ್ಸವದಲ್ಲಿ ಭಾಗಿಯಾದ ಬ್ರಹ್ಮಾಂಡ ಗುರೂಜಿ ಮಾಧ್ಯಮಗಳ ಜೊತೆ ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ.
 ಒಂದೂವರೇ ವರ್ಷ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಕೊಡುತ್ತಾರೆ‌. ಹುದ್ದೆ ಬಿಟ್ಟು ಹೋಗ್ತಾರೆ. ವೈರಾಗ್ಯ ಬಂದ ಮೇಲೆ ಏನೂ ಮಾಡಲು ಸಾಧ್ಯವಿಲ್ಲ. ದೇಶವನ್ನು ನಂತರ ಆಳುವವರು ಸನ್ಯಾಸಿ ಎಂದು ಅವರು ಹೇಳಿದ್ದಾರೆ.ಇದೇ ವೇಳೆ ಗೋ ರಕ್ಷಣೆ ವಿಷಯ ಮಾತನಾಡುತ್ತಾ, ಯೋಗಿ ಆದಿತ್ಯನಾಥ ಅವರ ಹೆಸರನ್ನೂ ಉಲ್ಲೇಖಿಸಿ ಮಾತನಾಡಿದ್ದಾರೆ. ಗೋ ರಕ್ಷಾಕೇಂದ್ರವನ್ನು ದೇಶದಲ್ಲಿ ಮೋದಿಯವರು ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ಮುಂದಿನ ದಿನಗಳಲ್ಲಿ ಎಲ್ಲಾ ಧರ್ಮವನ್ನು ನಡೆಸುತ್ತಾರೆ ಎಂದು ಸುಳಿವು ನೀಡಿದ್ದಾರೆ. <a href=https://youtube.com/embed/KRfl4y-Yz_0?autoplay=1&mute=1><img src=https://img.youtube.com/vi/KRfl4y-Yz_0/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಈ ವರ್ಷದಲ್ಲಿ ಇನ್ಮುಂದೆ ಜನ ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುವ ಬಗ್ಗೆಯೂ ಭವಿಷ್ಯ ಹೇಳಿದ್ದಾರೆ. ಈ ವರ್ಷ ಗುರು ಮನೆಗೆ ಶನಿ ಪ್ರವೇಶ ಆಗಿದೆ. ೫ ವರ್ಷದ ಹಿಂದೆ ಕೊರೊನಾ ಬಂದಿತ್ತು. ಈಗ ಬಿಸಿಲು ತಾಪದಿಂದ, ಚರ್ಮ ವ್ಯಾಧಿಯಿಂದ ರೋಗ ರುಜಿನಗಳು ಹೆಚ್ಚಾಗುತ್ತವೆ.ಹೊರಗಡೆ ಊಟ ಸೇಫ್ ಅಲ್ಲ. ಬೀದಿ, ಹೋಟೆಲ್ ಗಳಲ್ಲಿ ಯಾವ ನೀರು ಬಳಸುತ್ತಾರೆ ಗೊತ್ತಿಲ್ಲ. 4 ಗ್ರಹಗಳು ಮೂರು ತಿಂಗಳಲ್ಲಿ ಬದಲಾಗುವುದರಿಂದ ಎಚ್ಚರದಲ್ಲಿರಬೇಕು. ಮಕ್ಕಳ ಬಗ್ಗೆ ಎಲ್ಲರೂ ಎಚ್ಚರ ವಹಿಸಿ. ಎಲ್ಲರೂ ವಾಹನಗಳನ್ನು ನಿಧಾನವಾಗಿ ಓಡಿಸಿ ಎಂದು ಹೇಳಿದ್ದಾರೆ.
ಈ ಕಾಲದಲ್ಲಿ ಇನ್ಮುಂದೆ ಬಹಳ ಸುದ್ದಿಗಳು ಮಾಧ್ಯಮಗಳಿಗೆ ಸಿಗಲಿವೆ. ಯಾರ್ಯಾರು ಎರಡೆರಡು ಮದುವೆ ಆಗಿರ್ತಾರೆ ಎಲ್ಲಾ ರಾಜಕಾರಣಿಗಳ ವಿಷಯ ಬಹಿರಂಗ ಆಗಲಿದೆ. ದೊಡ್ಡ ಸಚಿವರಿಂದ ಹಿಡಿದು, ಸಿನಿಮಾ ನಟರವರೆಗಿನ ವಿಷಯಗಳು ಬೀದಿಗೆ ಬರಲಿದೆ. ಲಾಯರ್ ಗಳ ಕೆಲಸವೂ ಹೆಚ್ಚಾಗಲಿದೆ. ಪೊಲೀಸ್ ಸಿಬ್ಬಂದಿ ರಕ್ತಪಾತ ಆಗದಂತೆ ತಡೆಯಬೇಕಿದೆ ಎಂದು ಹೇಳಿದ್ದಾರೆ. ಕುಜನ ಮನೆಯಲ್ಲಿ ರಾಹು ಇದ್ದಾಗ ಎಲ್ಲರ ಕೋಪ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.