ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಪೂಜಾ ಗಾಂಧಿ; ಚೆನ್ನಾಗಿಲ್ಲ ಎಂದ ನೆಟ್ಟಿಗರು

 

ಸ್ಯಾಂಡಲ್‌ವುಡ್‌ಗೆ 2006ರಲ್ಲಿ ಮುಂಗಾರು ಮಳೆ ಸಿನಿಮಾದ ಮೂಲಕ ಎಂಟ್ರಿ ಕೊಟ್ಟು, ಕನ್ನಡಿಗರಿಂದ ಮಳೆ ಹುಡುಗಿ ಅಂತ ಕರೆಸಿಕೊಂಡವರು ನಟಿ ಪೂಜಾ ಗಾಂಧಿ. 'ಮುಂಗಾರು ಮಳೆ' ರೀತಿಯ ಸೂಪರ್ ಡೂಪರ್ ಹಿಟ್ ಸಿನಿಮಾ ಕೊಟ್ಟ ಪೂಜಾ ಗಾಂಧಿ ಅವರು ಇದೀಗ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ, ಅದು ಒಂದು ಧಾರಾವಾಹಿ ಮೂಲಕ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಿನಗಾಗಿ' ಧಾರಾವಾಹಿಯಲ್ಲಿ ಪೂಜಾ ಗಾಂಧಿ ಅವರು ಒಂದು ಗೆಸ್ಟ್‌ ರೋಲ್ ಮಾಡುತ್ತಿದ್ದಾರೆ.

ಕನ್ನಡದ ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ಪೂಜಾ ಗಾಂಧಿ ಅವರು ಕಿರುತೆರೆಗೆ ಒಂಚೂರು ಡಿಫರೆಂಟ್ ಲುಕ್‌ನಲ್ಲಿ ಎಂಟ್ರಿ ನೀಡಿದ್ದಾರೆ. 'ನಿನಗಾಗಿ' ಧಾರಾವಾಹಿಯಲ್ಲಿ ಪೂಜಾ ಗಾಂಧಿ ಲುಕ್ ಬದಲಾಗಿದ್ದು, ಕೂದಲಿಗೆ ಬಣ್ಣ ಹಚ್ಚಿಕೊಂಡಿದ್ದಾರೆ. ಈ ಲುಕ್‌ನಲ್ಲಿ ವೀಕ್ಷಕರನ್ನು ವಿಶೇಷವಾಗಿ ಗಮನಸೆಳೆದಿದ್ದಾರೆ. ಈಗಾಗಲೇ ಧಾರಾವಾಹಿಯಲ್ಲಿ ಪೂಜಾ ಗಾಂಧಿ ಅವರು ಕಾಣಿಸಿಕೊಂಡಿರುವ ಪ್ರೋಮೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕಿರುತೆರೆಯಲ್ಲಿ ಹೆಸರು ಗಳಿಸಿರುವ ನಟಿ ದಿವ್ಯಾ ಉರುಡುಗ ಈಗ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿಯೂ ಫೇಮಸ್‌. ಇದರ ಜೊತೆಗೆ ಅವರು ಬಿಗ್ ಬಾಸ್‌'ಗೆ ಹೋಗಿಬಂದ ಮೇಲೆ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು. ಸದ್ಯ ಅವರು 'ನಿನಗಾಗಿ' ಧಾರಾವಾಹಿಯಲ್ಲಿ ನಾಯಕಿಯಾಗಿದ್ದು, ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿಯು ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ದಿವ್ಯಾ ಉರುಡುಗ ಅವರು ಸಿನಿಮಾ ನಟಿ ರಚ್ಚು ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಇದೀಗ ಪೂಜಾ ಗಾಂಧಿ ಅವರ ಎಂಟ್ರಿಯಿಂದಾಗಿ ಧಾರಾವಾಹಿಯ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಾಗಿದೆ.

ಪೂಜಾ ಗಾಂಧಿ ಆರಂಭದ ಒಂದೆರಡು ವರ್ಷ ಸಾಲು ಸಾಲು ಸಿನಿಮಾಗಳಲ್ಲಿ ಪೂಜಾ ಕಾಣಿಸಿಕೊಂಡರು. ನಂತರ ರಾಜಕೀಯಕ್ಕೂ ಕಾಲಿಟ್ಟರು. ಅವರ ವೃತ್ತಿ ಬದುಕಿಗೆ ತಿರುವು ಸಿಕ್ಕಿದ್ದು 'ದಂಡುಪಾಳ್ಯ' ಸಿನಿಮಾದಿಂದ. ಕಳೆದ ವರ್ಷ ವಿಜಯ್ ಘೋರ್ಪಡೆ ಎಂಬುವವರೊಂದಿಗೆ ಮದುವೆ ಆಗಿರುವ ಪೂಜಾ ಗಾಂಧಿ ಸದ್ಯ ಸಿನಿಮಾಗಳಿಂದ ದೂರವೇ ಉಳದಿದ್ದಾರೆ. ಇದರ ಜೊತೆಗೆ ಕನ್ನಡ ಭಾಷೆಯ ಕುರಿತ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.