ವೇದಿಕೆ ಮೇಲೆ ತಾಯಿಗಾಗಿ ರಾಗಿ ಮುದ್ದೆ ಮಾಡಿದ ಪ್ರತಾಪ್; ಮೆಚ್ಚಿಕೊಂಡ ಕನ್ನಡಿಗರು

 

ನನ್ನಮ್ಮ ಸೂಪರ್ ಸ್ಟಾರ್ ಶೋ ನೋಡುವುದಕ್ಕೆ ಚೆಂದ. ಆ ಪುಟಾಣಿ ಮಕ್ಕಳ ಮಾತು, ಅಮ್ಮಂದಿರ ಮೇಲಿನ ದೂರು, ಅಮ್ಮಂದಿರನ್ನೇ ಚೇಂಜ್ ಮಾಡಿ ಬಿಡೋಣಾ ಎಂಬ ಮುದ್ದು ಮುದ್ದು ಕೋಪ. ಅಬ್ಬಬ್ಬಾ ಮಕ್ಕಳ ಬೇಡಿಕೆಗಳು, ಜಗಳಗಳು ಒಂದಾ-ಎರಡಾ. ಹೀಗಾಗಿಯೇ ನನ್ನಮ್ಮ ಸೂಪರ್ ಸ್ಟಾರ್ ಶೋ ನೋಡಲು ಖುಷಿ, ಆನಂದ.

ಈ ಬಾರಿಯೂ ಮಕ್ಕಳಿಂದ ನಕ್ಕು ನಲಿಯುವುದಕ್ಕೆ, ಅಮ್ಮಂದಿರ ಪರ್ಫಾಮೆನ್ಸ್ ನೋಡುವುದಕ್ಕೆ ತಾರಾ ಅನುರಾಧ, ಸೃಜನ್ ಲೋಕೇಶ್, ಅನು ಪ್ರಭಾಕರ್ ಗೆಸ್ಟ್ ಆಗಿ ಬಂದಿದ್ದಾರೆ. ಮಕ್ಕಳ ಜೊತೆಗೆ ಮಕ್ಕಳಾಗಿ, ಅಮ್ಮ - ಮಕ್ಕಳ ಬಾಂಧವ್ಯ ಎಷ್ಟಿದೆ ಎಂಬುದನ್ನು ಜಗತ್ತಿಗೆ ತೋರಿಸಲು ನನ್ನಮ್ಮ‌ಸೂಪರ್ ಸ್ಟಾರ್ ಶುರುವಾಗಿದೆ.ನಕ್ಕು ನಲಿಯುತ್ತ ವೀಕೆಂಡ್ ಕಳೆಯಬಹುದಾಗಿದೆ. <a href=https://youtube.com/embed/FQFbm02o2G8?autoplay=1&mute=1><img src=https://img.youtube.com/vi/FQFbm02o2G8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇನ್ನು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗೆ ಕಳೆದ ಎಪಿಸೋಡ್‌ನಲ್ಲಿ ಕಾರ್ತಿಕ್ ಮಹೇಶ್ ಅವರು ತಮ್ಮ ತಾಯಿ ಮೀನಾಕ್ಷಿ ಜೊತೆಗೆ ಬಂದಿದ್ದರು. ಕಳೆದ  ವಾರ ವರ್ತೂರು ಸಂತೋಷ್ ಅವರು ತಾಯಿ ಜೊತೆಗೆ ಬಂದಿದ್ದರು. ಆಗ ನಟಿ ತಾರಾ, ವರ್ತೂರು ಸಂತೋಷ್ ಅವರು ತಮಾಷೆಯಾಗಿ ಮಾತನಾಡಿಕೊಂಡಿದ್ದರು.

ಇನ್ನು ಈ ವಾರ ಪ್ರತಾಪ್ ತನ್ನ ತಾಯಿಯ ಜೊತೆ ಬರಲಿದ್ದು ಅಮ್ಮನಿಗೆ ಈ ಶೋ ಅಲ್ಲಿ ಅಡಿಗೆ ಕೂಡ ಮಾಡಿ ಕೊಡಲಿದ್ದಾರೆ. ಇನ್ನು ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ತುಕಾಲಿ ಸ್ಟಾರ್ ಸಂತು, ಇಶಾನಿ, ಡ್ರೋನ್ ಪ್ರತಾಪ್ ಅವರು ಭಾಗವಹಿಸುತ್ತಿದ್ದಾರೆ. ಕಾರ್ತಿಕ್, ವಿನಯ್ ಗೌಡ, ಸಂಗೀತಾ, ತುಕಾಲಿ ಸ್ಟಾರ್ ಸಂತು ಅವರು ಸಿನಿಮಾ ಕಡೆಗೆ ಹೆಚ್ಚಿನ ಗಮನ ನೀಡಿದರೆ ಡ್ರೋನ್ ಪ್ರತಾಪ್ ಮುಂದೆ ನನ್ನ ಕೆರಿಯರ್ ಬಗ್ಗೆ ಗಮನ ಕೊಡುತ್ತೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.