ಬಡ ಮಕ್ಕಳ ಜೊತೆ ಕ್ರಿಕೆಟ್ ಆಡಿದ ಪ್ರತಾಪ್, ಎದ್ದು ಬಿದ್ದು ನಕ್ಕ ಕನ್ನಡಿಗರು

 

ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದು ಮಿಂಚಿದ್ದಾರೆ ಡ್ರೋಣ್‌ ಪ್ರತಾಪ್‌. ಬಿಗ್‌ಬಾಸ್‌ಗೆ ಹೋಗಿ ಬಂದ ಬಳಿಕ ಪ್ರತಾಪ್‌ ಅವರ ಮೇಲಿದ್ದ ಒಂದಷ್ಟು ಅನಿಸಿಕೆ ಅಭಿಪ್ರಾಯಗಳು ಬದಲಾಗಿವೆ. ಅವರ ವಿರುದ್ಧ ಇಲ್ಲ ಸಲ್ಲದ ಮಾತುಗಳನ್ನಾಡುತ್ತಿದ್ದವರೂ ಆ ಕೆಲಸ ಕೈಬಿಟ್ಟಿದ್ದಾರೆ. ಅದರಲ್ಲೂ ಹುಟ್ಟೂರಿನಿಂದಲೂ ಸಾಕಷ್ಟು ತೆಗಳಿಕೆಗೆ ಒಳಗಾಗಿದ್ದ ಪ್ರತಾಪ್‌ಗೀಗ, ಅದೇ ಊರಿನ ಜನರಿಂದ ಸನ್ಮಾನ ಸಿಕ್ಕಿದೆ. ಕೊರಳಿಗೆ ಭಾರವಾದ ಕೂವಿನ ಹಾರ ಹಾಕಿ ಅವರನ್ನು ಖುಷಿಯಿಂದ ಸ್ವಾಗತಿಸಿದ್ದಾರೆ ಗ್ರಾಮದ ಹಿರಿಯರು.

ಬಿಗ್‌ ಬಾಸ್‌ ಮುಗಿಯುತ್ತಿದ್ದಂತೆ, ಶುಕ್ರವಾರ ಮತ್ತು ಶನಿವಾರ ಹುಟ್ಟೂರು ನೆಟ್ಕಲ್‌ ಗ್ರಾಮಕ್ಕೆ ಭೇಟಿ ನೀಡುವ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅದರಂತೆ, ಎರಡು ದಿನಗಳ ಕಾಲ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಟ್ಕಲ್‌ ಗ್ರಾಮದಲ್ಲಿ ಕಾಲ ಕಳೆದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಹುಟ್ಟೂರಿನಿಂದ ದೂರವೇ ಉಳಿದಿದ್ದ ಪ್ರತಾಪ್‌, ಕುಟುಂಬದಿಂದಲೂ ದೂರವೇ ಉಳಿದಿದ್ದರು. ಅಪ್ಪ, ಅಮ್ಮನ ಫೋನ್‌ ನಂಬರ್‌ ಬ್ಲಾಕ್‌ ಮಾಡಿದ್ದರು. ಹೊಸ ಮನೆಯನ್ನೂ ನೋಡಿರಲಿಲ್ಲ. ಇದೀಗ ನೆಟ್ಕಲ್‌ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ, ಅದ್ಧೂರಿ ಸ್ವಾಗತವೇ ಸಿಕ್ಕಿದೆ. <a href=https://youtube.com/embed/nhTMJoDFL2s?autoplay=1&mute=1><img src=https://img.youtube.com/vi/nhTMJoDFL2s/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಬಿಗ್‌ಬಾಸ್‌ ಶೋನಲ್ಲಿ ಹೇಳಿಕೊಂಡಂತೆ, ಕಳೆದ ಕೆಲ ವರ್ಷಗಳಿಂದ ಡ್ರೋಣ್‌ ಪ್ರತಾಪ್‌ ಹುಟ್ಟೂರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಟ್ಕಲ್‌ಗೆ ಭೇಟಿ ನೀಡಿರಲಿಲ್ಲ. ಇದೀಗ ಅದೇ ನೆಟ್ಕಲ್‌ ಗ್ರಾಮಕ್ಕೆ ಅದ್ಧೂರಿಯಾದ ಸ್ವಾಗತ ಅವರಿಗೆ ಸಿಕ್ಕಿದೆ. ಅಪ್ಪ ಅಮ್ಮ ಕಟ್ಟಿದ ಹೊಸ ಮನೆಯನ್ನೂ ಪ್ರತಾಪ್‌ ಕಣ್ತುಂಬಿಕೊಂಡಿದ್ದಾರೆ. ಎಲ್ಲರ ಜತೆಗೆ ಕಾಲ ಕಳೆದಿದ್ದಾರೆ ಪ್ರತಾಪ್.‌ ಮಕ್ಕಳ ಜತೆಗೆ ಬೆರೆತು ಕ್ರಿಕೆಟ್ ಆಡಿದ್ದಾರೆ. ಅವರೊಟ್ಟಿಗೆ ಸೈಕಲ್‌ ಏರಿ ಊರು ಸುತ್ತಾಡಿ ಮನಸು ಹಗುರ ಮಾಡಿಕೊಂಡಿದ್ದಾರೆ. ಅಪ್ಪನ ಜತೆ ಊರ ದೇವರು ಮಾದಪ್ಪನ ದೇವಸ್ಥಾನಕ್ಕೂ ತೆರಳಿ ಮಾಲೆ ಹಾಕಿ ನಮಿಸಿದ್ದಾರೆ.

ಇನ್ನು ಮನೆಗೆ ಮೊದಲ ಸಲ ಆಗಮಿಸುತ್ತಿದ್ದಂತೆ, ಡ್ರೋಣ್‌ ಪ್ರತಾಪ್‌ಗೆ ಬಾಗಿಲ ಬಳಿಯೇ ಕಾದಿದ್ದ ಅಮ್ಮ, ಮಗನಿಗೆ ಅರಿಶಿಣ ಕುಂಕುಮದ ನೀರಿನಿಂದ ದೃಷ್ಟಿ ತೆಗೆದಿದ್ದಾರೆ. ಬಾಗಿಲ ಬಳಿಯಲ್ಲಿ ಮೊಟ್ಟೆ ಒಡೆದು ಯಾರ ಕಣ್ಣೂ ಬೀಳದಿರಲಿ ಎಂದು ಮಗನನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಇಷ್ಟಕ್ಕೆ ಮುಗಿಯಲಿಲ್ಲ, ಅಪ್ಪನ ಜತೆ ಕೂತು ಬಿಸಿ ಬಿಸಿ ಮುದ್ದೆ ಮಾಡಿದ್ದಾರೆ ಪ್ರತಾಪ್. ಅದಾದ ಬಳಿಕ ಅಮ್ಮನೇ ಪ್ರತಾಪ್‌ಗೆ ಕೈ ತುತ್ತು ಮಾಡಿ ಊಟ ಮಾಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.