ಪೃಥ್ವಿ ಭಟ್ ಮೇಲೆ ತಂದೆಯಿಂದ ಮಾಟಮಂತ್ರ, ಕೊನೆಗೂ ಸ್ಪಷ್ಟತೆ ಕೊಟ್ಟ ಪೃಥ್ವಿ ತಂದೆ

 
Nnb
ಕಳೆದ ಕೆಲವು ದಿನಗಳಿಂದ ಜೀ ಕನ್ನಡದ ಸರಿಗಮಪ ಗಾಯಕಿ ಪೃಥ್ವಿ ಭಟ್ ಮದುವೆ ವಿಚಾರ ಬೀದಿಗೆ ಬಂದಿತ್ತು. ಗಾಯಕಿಯ ತಂದೆ ಮಗಳ ವಶೀಕರಣ ಮಾಡಿ ಮದುವೆ ಮಾಡಿಸಿದ್ದಾರೆಂದು ಆರೋಪ ಮಾಡಿದ್ದರು. ಪೃಥ್ವಿ ಭಟ್ ತಂದೆ ಹೇಳಿಕೆ ಕೊಟ್ಟ ಆಡಿಯೋ ಸೋಶಿಯಲ್ ಮೀಡಿಯದಾದಲ್ಲಿ ಸಿಕ್ಕಪಟ್ಟೆ ಸದ್ದು ಮಾಡಿತ್ತು. ಈ ಆಡಿಯೋದಲ್ಲಿ ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಜನಪ್ರಿಯ ಗಾಯಕ ಹಾಗೂ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಅವರನ್ನು ದೂಷಿಸಿದ್ದರು.
ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಅವರ ಆಡಿಯೋದಲ್ಲಿ ಸಂಗೀತ ಹೇಳಿ ಕೊಡುತ್ತಿದ್ದ ನರಹರಿ ದೀಕ್ಷಿತ್ ವಿರುದ್ಧ ಕಿಡಿಕಾಡಿದ್ದರು. ನರಹರಿ ದೀಕ್ಷಿತ್ ಅವರೇ ಮಗಳ ಮೇಲೆ ವಶೀಕರಣ ಮಾಡಿಸಿ ಮದುವೆ ಮಾಡಿಸಿದ್ದಾರೆಂದು ಆರೋಪಿಸಿದ್ದರು. ತಮ್ಮ ಮಗಳು ಬಿಟ್ಟು ಹೋಗು ಇಪ್ಪತ್ತು ದಿನಗಳು ಆಗಿದೆ. ಇಲ್ಲಿಯವರೆಗೆ ಅವಳಿಗೆ ನಮ್ಮ ನೆನಪು ಬಂದಿಲ್ಲ ಎಂದಿದ್ದರು. ಈ ಆಡಿಯೋ ವೈರಲ್ ಆಗುತ್ತಿದ್ದಂತೆ ನರಹರಿ ದೀಕ್ಷಿತ್ ಸಂಬಂಧ ಪಟ್ಟವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಹರಿದಾಡುತ್ತಿದೆ.
ನರಹರಿ ದೀಕ್ಷಿತ್ ಅವರು ಜನಪ್ರಿಯ ಗಾಯಕ ಸಂಗೀತ ಶಿಕ್ಷಕ. ಈಗ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸಂಗೀತ ಕಾರ್ಯಕ್ರಮ 'ಸರಿಗಮಪ'ದ ಜ್ಯೂರಿ ಸದಸ್ಯರಾಗಿದ್ದಾರೆ. ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಇವರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ನರಹರಿ ದೀಕ್ಷಿತ್ ಕೂಡ ತಿರುಗೇಟು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರೇ ಬರೆದಿದ್ದಾರೆ ಎನ್ನಲಾದ ಪೋಸ್ಟ್ ಒಂದು ಹರಿದಾಡುತ್ತಿದೆ. <a href=https://youtube.com/embed/LfQrrWfTZBI?autoplay=1&mute=1><img src=https://img.youtube.com/vi/LfQrrWfTZBI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪತ್ರದಲ್ಲಿ ತಮ್ಮ ಮೇಲಿನ ಗಂಭೀರ ಆರೋಪಗಳ ಬಗ್ಗೆನೂ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ತಮ್ಮ ಮಾನವನ್ನು ಹರಾಜು ಹಾಕುತ್ತಿದ್ದಾರೆಂದು ಅಳಲು ತೋಡಿಕೊಂಡಿದ್ದಾರೆ. ನಾನು ಆಗ ಹೇಳಿದ್ದನ್ನು ಅವರು ಪರಿಗಣಿಸಲಿಲ್ಲ. ಈಗ ನಾನೇ ಅವರಿಬ್ಬರನ್ನು ಮದುವೆ ಮಾಡಿಸಿದ್ದು, ಪೃಥ್ವಿಯ ತಲೆಕೆಡಿಸಿದ್ದು, ಅವರ ಬಾಳು ಹಾಳು ಮಾಡಿದ್ದು ಎಂದು ಆರೋಪಿಸಿ, ನನಗೆ ದಿನಕ್ಕೆ 25 ಬಾರಿ ಕರೆ ಮಾಡಿ ನನ್ನ ಮಾನ ಹರಾಜು ಮಾಡುತ್ತೇನೆ. 
ನನ್ನನ್ನ ಮುಗಿಸುತ್ತೇನೆ. ನನ್ನ ಶಾಲೆಯನ್ನು ಮುಚ್ಚಿಸುತ್ತೇನೆ. ನನ್ನ ಹಾಗೂ ನನ್ನ ಹೆಂಡತಿಯನ್ನು ಬೇರೆ ಮಾಡುತ್ತೇನೆ. ಇಡೀ ಹವ್ಯಕ ಪಂಗಡಕ್ಕೆ ಹಾಗೂ ಮಠದಲ್ಲಿ ಕೂಡ ನನ್ನ ಮಾನ ಮರ್ಯಾದೆ ತೆಗೆಯುತ್ತೇನೆ. ನನ್ನ ಜೀವನವನ್ನೇ ಸಂಪೂರ್ಣ ಹಾಳು ಮಾಡುತ್ತೇನೆ ಎಂದು ಗಂಡ, ಹೆಂಡತಿ, ಸೋದರ ಮಾವ ಎಲ್ಲರೂ ಫೋನ್‌ ಮಾಡಿ ಚಿತ್ರ ಹಿಂಸೆ ಕೊಡುತ್ತಿದ್ದಾರೆ ಎಂದು ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಅವರ ವಿರುದ್ಧವೇ ಆರೋಪ ಮಾಡಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.