ಹೊಸ ಬ್ಯುಸಿನೆಸ್ ಆರಂಭಿಸಿದ 'ಗಿಚ್ಚಿಗಿಲಿಗಿಲಿ' ಪ್ರಿಯಾಂಕಾ ಕಾಮತ್
Aug 2, 2024, 21:54 IST
ಮಜಾಭಾರತ’ ಹಾಗೂ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮಗಳ ಮೂಲಕ ನಗುವಿನ ಕಚಗುಳಿ ಇಟ್ಟ ಪ್ರತಿಭಾವಂತೆ ಪ್ರಿಯಾಂಕಾ ಕಾಮತ್. ಸದ್ಯ ‘ನಿನಗಾಗಿ’ ಸೀರಿಯಲ್‌ನಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಕಾಮತ್, ತಮ್ಮ ಪತಿ ಅಮಿತ್ ನಾಯಕ್ ಜೊತೆಗೆ ‘ರಾಜಾ ರಾಣಿ’ ರಿಯಾಲಿಟಿ ಶೋನಲ್ಲೂ ಸ್ಪರ್ಧಿಸುತ್ತಿದ್ದಾರೆ. ಇದೀಗ ಪ್ರಿಯಾಂಕಾ ಕಾಮತ್ - ಅಮಿತ್ ನಾಯಕ್ ಹೊಸ ಉದ್ಯಮ ಆರಂಭಿಸಿದ್ದಾರೆ.
ಪಿಕ್ಸೆಲ್ ಸ್ಟ್ರೀಮ್ ಸ್ಟುಡಿಯೋಸ್ ಎಂಬ ಡಿಜಿಟಲ್ ಲ್ಯಾಬ್ ಆರಂಭಿಸಿದ್ದಾರೆ ಅಮಿತ್ ನಾಯಕ್ - ಪ್ರಿಯಾಂಕಾ ಕಾಮತ್ ದಂಪತಿ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಡಿಜಿಟಲ್ ಲ್ಯಾಬ್ ತೆರೆದಿದ್ದಾರೆ ಈ ದಂಪತಿ. ‘ಪಿಕ್ಸೆಲ್ ಸ್ಟ್ರೀಮ್ ಸ್ಟುಡಿಯೋಸ್’ ಕಛೇರಿಯ ಉದ್ಘಾಟನೆ ಸಮಾರಂಭ ಅದ್ಧೂರಿಯಾಗಿ ಶಾಸ್ತ್ರೋಕ್ತವಾಗಿ ನೆರವೇರಿದೆ. ಪೂಜೆಯಲ್ಲಿ ‘ರಾಜಾ ರಾಣಿ’ ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಿರುವ ಇತರೆ ದಂಪತಿಗಳು ಹಾಜರಿದ್ದರು.
ಅಂದ್ಹಾಗೆ, ಪ್ರಿಯಾಂಕಾ ಕಾಮತ್ - ಅಮಿತ್ ನಾಯಕ್ ದಂಪತಿ ‘ಔತಣ ಕೇಟರರ್ಸ್’ ಎಂಬ ಕೇಟರಿಂಗ್ ಸರ್ವೀಸ್ ಕೂಡ ಆರಂಭಿಸಿದ್ದಾರೆ. ಈ ಮೂಲಕ ಮದುವೆ, ಕಾರ್ಪೊರೇಟ್ ಈವೆಂಟ್ ಹಾಗೂ ಪಾರ್ಟಿಗಳಿಗೆ ಕೇಟರಿಂಗ್ ಒದಗಿಸುತ್ತಿದ್ದಾರೆ. ಆತ್ಮೀಯರ ಜೊತೆಗೆ ಸಂತಸದ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಅಮಿತ್ ನಾಯಕ್.
ಅಮಿತ್ ನಾಯಕ್ ಮೂಲತಃ ಕುಂದಾಪುರದವರು. ಮೆಕ್ಯಾನಿಕಲ್ ಎಂಜಿನಿಯರ್ ಓದಿರುವ ಅಮಿತ್ ಹಾಗೂ ಪ್ರಿಯಾಂಕಾ ಅವರು ಪ್ರೀತಿ ಮಾಡಿದ್ದರು. ಮನೆಯವರ ಒಪ್ಪಿಗೆ ಪಡೆದು ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪ್ರಿಯಾಂಕಾ ಕಾಮತ್ ಕೂಡ ಮಂಗಳೂರಿನವರು. ‘ಚಾಂಪಿಯನ್’ ಎಂಬ ರಿಯಾಲಿಟಿ ಶೋನಲ್ಲಿ ಪ್ರಿಯಾಂಕಾ ಕಾಮತ್ ಆಮೇಲೆ ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.