ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟ ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಸ್ನೇಹಾ ಪಾತ್ರಕ್ಕೆ ಹೊಸ ನಟಿ ಎಂಟ್ರಿ
Updated: Nov 6, 2024, 07:34 IST
ಪುಟ್ಟಕ್ಕನ ಮಕ್ಕಳು ಸೀರಿಯಲ್ ವಿಚಾರದಲ್ಲಿ ಎಲ್ಲರೂ ಅಂದುಕೊಂಡಂತೆ ನಿಜವಾಗಿದೆ. ಕಂಠಿಯ ಜಂಟಿಯಾಗಿ ನಟಿಸಿದ್ದ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಸೀರಿಯಲ್‌ಗೆ ವಿದಾಯ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಉದ್ದನೆಯ ಪೋಸ್ಟ್ ಬರೆದುಕೊಂಡಿರುವ ಸಂಜನಾ ಬುರ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ವಿದಾಯ ಹೇಳುತ್ತಿರುವುದೇಕೆ ಅನ್ನೋ ಕಾರಣವನ್ನೂ ಬಹಿರಂಗ ಮಾಡಿದ್ದಾರೆ. ಇನ್ನು ಸಂಜನಾ ಬುರ್ಲಿ ಅವರ ಪಾತ್ರ ಕೊನೆಯಾಗುತ್ತಿರುವುದು ಅಭಿಮಾನಿಗಳಿಗೂ ಬೇಸರ ತರಿಸಿದೆ. ಫ್ಯಾನ್ಸ್ ಕೂಡ ಈ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸ್ನೇಹಾ ಪಾತ್ರದಲ್ಲಿ ತಾನು ನಟಿಸುತ್ತಿದ್ದೆ ಎಂದು ಸಂಜನಾ ಹೇಳಿದ್ದಾರೆ. ಸೀರಿಯಲ್‌ನಲ್ಲಿ ಡಿಸಿ ಪಾತ್ರವನ್ನು ಅವರು ಮಾಡುತ್ತಿದ್ದರು. ತನ್ನ ಕನಸನ್ನು ನನಸು ಮಾಡಿಕೊಂಡ ಬೆನ್ನಲ್ಲಿಯೇ ಅವರ ಪಾತ್ರವೂ ಕೊನೆಯಾಗಿದ್ದು, ಸೀರಿಯಲ್‌ನ ಇತ್ತೀಚಿನ ಕೆಲವು ಎಪಿಸೋಡ್‌ಗಳು ಶಾಕಿಂಗ್ ಆಗಿದ್ದವು.ಈಗಷ್ಟೇ ಜಿಲ್ಲಾಧಿಕಾರಿಯಾಗಿ ತನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿರೋ ಸ್ನೇಹಾ, ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಈ ಅನಿರೀಕ್ಷಿತ ತಿರುವು ಸೀರಿಯಲ್‌ನಲ್ಲಿ ಯಾಕೆ ತಂದಿದ್ದಾರೆ ಎನ್ನುವ ಬಗ್ಗೆ ಪ್ರೇಕ್ಷಕರಿಗೆ ಚಿಂತೆ ಶುರುವಾಗಿದೆ.
ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಸೀರಿಯಲ್ ಬಿಡುವ ಕಾರಣದಿಂದ ಏನೇನೋ ಕಥೆ ತಿರುವು ಪಡೆದುಕೊಂಡಿತಾ ಎಂಬ ಪ್ರಶ್ನೆಯನ್ನೂ ಪ್ರೇಕ್ಷಕರು ಕೇಳುತ್ತಿದ್ದಾರೆ. ಮನೆಗೆ ಬಂದಿರುವ ಸ್ನೇಹಾಳಿಗೆ ಈ ಸ್ನೇಹಾ ಹೃದಯವನ್ನು ನೀಡುತ್ತಾಳೆ ಎನ್ನುವುದು ಎಲ್ಲರಿಗೂ ಅರ್ಥವಾಗಿದೆ. ಆದರೆ ಸೀರಿಯಲ್ ಉದ್ದೇಶವನ್ನೇ ಬುಡಮೇಲು ಮಾಡಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿಯೂ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಹಾಗಾಗಿಯೇ ಸ್ನೇಹಾ ಹೆಸರಿನ ಹೊಸ ನಟಿಯನ್ನು ಮತ್ತೆ ಪರಿಚಯಿಸಲಾಗಿದೆ.
<a href=https://youtube.com/embed/zw6YCIaYMq4?autoplay=1&mute=1><img src=https://img.youtube.com/vi/zw6YCIaYMq4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹೌದು ಆಡಿಷನ್ ನಡೆಸಿ ಈ ಪಾತ್ರಕ್ಕೆ ಹೊಸ ಮುಖವನ್ನು ಪರಿಚಯಿಸಲಾಯಾಗಿದೆ. ಸ್ನೇಹಾಳ ಹೃದಯ ಇರುವುದರಿಂದ ಮುಂದಿನ ದಿನಗಳಲ್ಲಿ ಕಂಠಿಯ ಪ್ರೀತಿಸಿ ಮದುವೆಮಾಡುತ್ತಾರೆ. ಹೀಗೆ ಮುಂದಿನ ದಿನಗಳಲ್ಲಿ ಕತೆ ಸಾಗುತ್ತದೆ ಅನ್ನೊದು ಹಲವರ ಅಭಿಪ್ರಾಯ.
ಸದ್ಯ ಬೆಳ್ಳಿ ತೆರೆಯತ್ತ ಮುಖ ಮಾಡಿರುವ ಸಂಜನಾ ಬುರ್ಲಿ ಸ್ನೇಹರ್ಷಿ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಲಿದ್ದಾರೆ. ಜೊತೆಗೆ ವೀಕೆಂಡ್ ಹಾಗೂ ರಾಧಾ ಮಿಸ್ಸಿಂಗ್ ರಮಣ ಸರ್ಚಿಂಗ್ ಸಿನಿಮಾಗಳಲ್ಲಿಯೂ ಸಂಜನಾ ನಟಿಸುತ್ತಿದ್ದಾರೆ. ಕಿರುತೆರೆಯಿಂದ ಸಂಜನಾ ಬೆಳ್ಳಿತೆರೆಯಲ್ಲಿ ಮಿಂಚಲು ಸಂಪೂರ್ಣ ಸಜ್ಜಾಗಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.