ಶಿವಣ್ಣನಿಗೆ ಗಂಭೀರ, ರಾಘವೇಂದ್ರ ರಾಜ್ ಕುಮಾರ್ ಬೇಸರದ ಮಾತು

 
ನಟ ಶಿವರಾಜ್‌ಕುಮಾರ್‌ ಅನಾರೋಗ್ಯದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ನನಗೆ ಆರೋಗ್ಯ ಸಮಸ್ಯೆ ಇದೆ. ಈಗಾಗಲೇ ಟ್ರೀಟ್‌ಮೆಂಟ್‌ ನಡೀತಿದೆ. ಇನ್ನೇನು ಅಮೆರಿಕಾದಲ್ಲಿಯೂ ಒಂದು ತಿಂಗಳು ಚಿಕಿತ್ಸೆ ನಡೆಯಲಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಭೈರತಿ ರಣಗಲ್‌ ಸಿನಿಮಾ ಮುಗಿಸಿ, ಬಳಿಕ ಚಿಕಿತ್ಸೆಗೆ ವಿದೇಶಕ್ಕೆ ತೆರಳಲಿದ್ದಾರೆ.
ಸ್ಯಾಂಡಲ್‌ವುಡ್‌ ನಟ, ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ನಟನೆಯಲ್ಲಿ ಇನ್ನೂ ಸಕ್ರಿಯರು. ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಎಲ್ಲ ಸಿನಿಮಾ, ಕಿರುತೆರೆ ಕಾರ್ಯಕ್ರಮಗಳಲ್ಲಿ ಅಷ್ಟೇ ಲವಲವಿಕೆಯಿಂದಲೇ ಓಡಾಡುತ್ತಿರುತ್ತಾರೆ. ಆದರೆ, ಇತ್ತೀಚಿನ ಕೆಲ ತಿಂಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಶಿವಣ್ಣನ ಆರೋಗ್ಯದ ಬಗ್ಗೆಯೇ ಚರ್ಚೆ ನಡೆದಿತ್ತು.
 ಈಗ ಅದೇ ಅನಾರೋಗ್ಯ ವಿಚಾರದ ಬಗ್ಗೆಯೂ ಸ್ವತಃ ಶಿವರಾಜ್‌ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸುದ್ದಿ ಮನೆ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಈ ಹಿಂದೆ ಕೂಡ ಅರೋಗ್ಯ ಹದಗೆಟ್ಟು ಅವರು ಆಸ್ಪತ್ರೆ ಸೇರಿದ್ದರು. ಈಗಾಗಲೇ ಈ ಬಗ್ಗೆ ಮಾತನಾಡಿರುವ ಶಿವಣ್ಣ, ಸುಮ್ಮನೇ ನಾನ್ಯಾಕೆ ಸುಳ್ಳು ಹೇಳಬೇಕು. ಎಲ್ಲ ಸಮಯದಲ್ಲೂ ಅಭಿಮಾನಿಗಳು ಬೇಕು.
ಈ ಸಮಯದಲ್ಲಿ ಯಾಕೆ ನಾಟಕ ಆಡಬೇಕು ಅಲ್ವಾ? ಎಲ್ಲರ ರೀತಿ ನಾನೂ ಮನುಷ್ಯನೇ. ನನಗೂ ಪ್ಲಾಬ್ಲಂ ಆಗಿದೆ. ಬಂದಿದೆ. ಟ್ರೀಟ್‌ಮೆಂಟ್‌ ತೆಗೊತಿದೀನಿ. ಒಟ್ಟು 4 ಸೆಷನ್‌ ಮೂಲಕ ಟ್ರೀಟ್‌ಮೆಂಟ್‌ ನಡಿಯುತ್ತೆ. ಜನ ತುಂಬ ಗಾಬರಿಯಾಗ್ತಿದ್ದಾರೆ. ನನಗೂ ಗಾಬರಿಯಾಯ್ತು. ನನಗೂ ಧೈರ್ಯ ತುಂಬ್ತಿದ್ದಾರೆ. 
ನಾನೂ ಧೈರ್ಯ ಕಳೆದುಕೊಂಡಿಲ್ಲ. ಹೀಗಿರುವಾಗಲೇ 45 ಸಿನಿಮಾ ಮುಗಿಸಿದೆ. ಸಿನಿಮಾದ ಸಾಹಸ ದೃಶ್ಯಗಳನ್ನು ಮಾಡಿದೆ. ಡಿಕೆಡಿ ನಡೀತಿದೆ. ಭೈರತಿ ರಣಗಲ್‌ ಪ್ರಮೋಷನ್‌ ನಡೀತಿದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.