ಸಿನಿಮಾ ನೋಡುವ ಅವಸರದಲ್ಲಿ ರಾಘು ಗರಂ, ಯಾರ ಸಿನಿಮಾ ನೋಡಲು ಇಷ್ಟು ಅವಸರ ಗೊತ್ತಾ

 

ಸ್ಯಾಂಡಲ್‌ವುಡ್‌ ಚಿನ್ನಾರಿ ಮುತ್ತ ವಿಜಯ್‌ ರಾಘವೇಂದ್ರ ನಟನೆಯ ಬಹು ನಿರೀಕ್ಷಿತ ಸಿನಿಮಾ ʼಕದ್ದ ಚಿತ್ರʼ ರಿಲೀಸ್‌ ಆಗಿದೆ. ಟೀಸರ್‌ ಮತ್ತು ಟ್ರೈಲರ್‌ನಿಂದ ಹೆಚ್ಚು ಸದ್ದು ಮಾಡಿದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.ಹೌದು.. ನಟ ವಿಜಯ್‌ ರಾಘವೇಂದ್ರ ಅಭಿನಯದ ʼಕದ್ದ ಚಿತ್ರʼ ಇಂದು ತೆರೆಗೆ ಅಪ್ಪಳಿಸಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಈ ಸಿನಿಮಾದಲ್ಲಿ ವಿಜಯ್‌ ರಾಘವೇಂದ್ರ ಬರಹಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ವಿಜಯ್‌ ಇಂತಹ ರೋಲ್ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲ ಬಾರಿಗೆ. ಹಾಗಾಗಿ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಅದರಂತೆ ಇಂದು ರಿಲೀಸ್‌ ಆದ ʼಕದ್ದ ಚಿತ್ರʼ ಪ್ರೇಕ್ಷಕರ ಮನಗೆದ್ದಿದೆ. ಸಿನಿಮಾ ವಿಚಾರವಾಗಿ ಹೇಳೋದಾದ್ರೆ, ಚಿತ್ರದಲ್ಲಿ ವಿಜಯ್‌ ಸ್ಮೋಕ್‌ ಮತ್ತು ಡ್ರಿಂಕ್ಸ್‌ಗೆ ತುಂಬಾ ಅಡಿಕ್ಟ್‌ ಆಗಿರುತ್ತಾರೆ. ಅದರಲ್ಲಿ ಅವರದೇಯಾದ ಪ್ಯಾಷನ್‌ ಇರುತ್ತದೆ. ಆ ಪ್ಯಾಷನ್‌ನ ಹೇಗೆ ಪ್ರೋಫೆಶನ್‌ ಆಗಿ ತೊಗೊಳ್ಳುತ್ತಾರೆ.  <a href=https://youtube.com/embed/h0A97t5k0i8?autoplay=1&mute=1><img src=https://img.youtube.com/vi/h0A97t5k0i8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಅಲ್ಲದೆ, ಅವರು ಬರೆದ ಒಂದು ಪುಸ್ತಕ ಕದ್ದಿದ್ದು ಅಂತ ದೊಡ್ಡ ಸುದ್ದಿಯಾಗುತ್ತದೆ. ಅದರಿಂದ ಬರುವ ಕಷ್ಟಗಳನ್ನ ಹೇಗೆ ಎದುರಿಸುತ್ತಾರೆ, ಏನೆಲ್ಲಾ ಟ್ವಿಸ್ಟ್ ಇದೆ. ಅನ್ನೋದನ್ನು ನೀವು ಸಿನಿಮಾ ನೋಡಿ ತಿಳ್ಕೊಬೇಕು..
ಕಾಪಿ ರೈಟ್‌ಗೆ ಸಂಬಂಧ ಪಟ್ಟ ಸಿನಿಮಾ ಇದಾಗಿದ್ದು, ಈ ಚಿತ್ರವನ್ನು ಸುಹಾಸ್‌ ಕೃಷ್ಣ ನಿರ್ದೇಶನ ಮಾಡಿದ್ದಾರೆ. ವಿಜಯ್‌ಗೆ ನಾಯಕಿಯಾಗಿ ನಮ್ರತಾ ಸುರೇಂದ್ರನಾಥ್ ನಟಿಸಿದ್ದು, ರಾಘು ಶಿವಮೊಗ್ಗ, ಬಾಲಾಜಿ ಮನೋಹರ್‌, ಬೇಬಿ ಆರಾಧ್ಯ ಸೇರಿದಂತೆ ಹಲವು ನಟರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಸಂದೀಪ್‌ ಹೆಚ್‌ ಕೆ ನಿರ್ಮಾಣ ಈ ಚಿತ್ರಕ್ಕೆ ಕೃಷ್ಣರಾಜ್‌ ಸಂಗೀತ ನೀಡಿದ್ದಾರೆ. ಇನ್ನು ಸ್ಪಂದನಾ ಮರಣಿಸಿದ ಮೇಲೆ ಮೊದಲ ಬಾರಿ ಚಿತ್ರ ವೀಕ್ಷಿಸಲು ಹೋದ ವಿಜಯ್ ರಾಘವೇಂದ್ರ ಅವರನ್ನು ಮಾಧ್ಯಮದವರು ಹಾಗೂ ಹಲವಾರು ಜನ ಮಾತನಾಡಿಸುತ್ತಲೇ ಇದ್ದರು ಹಾಗಾಗಿ ಕೋಪಗೊಂಡ ವಿಜಯ್ ರಾಘವೇಂದ್ರ ಏ ಸಿನಿಮಾ ನೋಡೋಕೆ ಬಿಡಿ ಎಂದು ಗರಂ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.