ರಾಘು ಪತ್ನಿ ಸ್ಪಂದನಾ ಕೊನೆ ಆಸೆ ಕೇಳಿ ಕಣ್ಣೀರಿಟ್ಟ ಪೋಷಕರು, ಯಾವ ಆಸೆ ಗೊತ್ತಾ

 
ರರರ

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾಗೆ ಕುಟುಂಬದ ಜೊತೆ ತುಂಬ ಚೆನ್ನಾಗಿ ಇರಬೇಕು, ಖುಷಿಯಿಂದ ಬಾಳಬೇಕು ಎನ್ನುವ ಮಹದಾಸೆಯಿತ್ತಂತೆ. ಹೀಗಂತ ನಿರ್ದೇಶಕಿ ರೇಖಾ ರಾಣಿ ಕಶ್ಯಪ್ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಸ್ಪಂದನಾ ಅವರು ಕಸಿನ್‌ ಜೊತೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದಾಗ ಆಗಸ್ಟ್ 7ರಂದು ಬೆಳಗಿನ ಜಾವ 2.30ಕ್ಕೆ ಹೃದಯಾಘಾತ ಆಗಿದೆ. 

ನಾಳೆ ಬೆಂಗಳೂರಿಗೆ ಪಾರ್ಥಿವ ಶರೀರ ಬರಬಹುದು ಎನ್ನಲಾಗುತ್ತಿದೆ. ರಾಜಕಾರಣಿಗಳು, ಮೈದುನ ಶ್ರೀಮುರಳಿ, ನಟಿ ಜಯಮಾಲಾ ಮುಂತಾದವರು ಈಗಾಗಲೇ ಸ್ಪಂದನಾ ಅವರ ತಂದೆ ಬಿಕೆ ಶಿವರಾಂ ಮನೆಗೆ ಬಂದು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಸ್ಪಂದನಾ ಅವರಿಗೆ ಹೃದಯಾಘಾತ ಆಗಿದೆ, ಮಲಗಿದವರು ಎದ್ದೇ ಇಲ್ಲ ಎಂದು ಕುಟುಂಬ ಹೇಳಿಕೊಂಡಿದೆ. ಸ್ಪಂದನಾ ಇನ್ನಿಲ್ಲ ಅನ್ನೋದನ್ನು ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. 

ಇದು ಸುಳ್ಳಾಗಲಿ ಅಂತ ಬಯಸ್ತೀನಿ, ಆದರೆ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲರಿಗೂ ಅವಳು ಸ್ಪಂದನಾ ಆದರೆ ನನಗೆ ಅವಳು ಅಚ್ಚು. ಸ್ಪಂದನಾ ಮೇಲೆ ಅವಳ ತಂದೆ ಪ್ರಾಣವನ್ನೇ ಇಟ್ಟುಕೊಂಡಿದ್ದಾರೆ. ಈ ವಿಷಯವನ್ನು ಅವರು ಹೇಗೆ ತಡೆದುಕೊಳ್ತಾರೆ ಅಂತ ಗೊತ್ತಿಲ್ಲ ಎಂದು ರೇಖಾ ರಾಣಿ ಕಶ್ಯಪ್ ಅವರು ಬೇಸರ ಹೊರಹಾಕಿದ್ದಾರೆ.

ಇನ್ನು ಕೆಲವು ದಿನಗಳ ಹಿಂದೆ ಅಷ್ಟೇ ಸ್ಪಂದನಾ ಡಿ ಬಾಸ್ ಜೊತೆ ನಟಿಸಬೇಕು ಎನ್ನುವ ಆಸೆಯನ್ನು ಕೂಡ ಹೊರಹಾಕಿದ್ದರು. ಆದರೆ ಆಸೆ ಈಡೇರುವ ಮುನ್ನವೇ ಇಹಲೋಕ ತ್ಯೆಜಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.