ರಜತ್ ಗೆ ಸರಿಯಾಗಿ ಗುನ್ನ ಇಟ್ಟ ಅಧಿಕಾರಿಗಳು, ಮತ್ತೆ ಜೈ ಲಿಗೆ ಹಾಕಿ ಸರಿಯಾಗಿ ರುಬ್ಬಿದ ಪೊ ಲೀಸರು
Apr 17, 2025, 16:07 IST

ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜನ್‌ನನ್ನು ಮತ್ತೆ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ರಜತ್‌ಗೆ ಪೊಲೀಸರು ನೋಟಿಸ್ ನೀಡಿದ್ದರು.
ರೀಲ್ಸ್‌ಗೆ ಬಳಸಿದ್ದ ಮಚ್ಚು ಸಿಗದ ಹಿನ್ನೆಲೆ 2 ಬಾರಿ ನೋಟಿಸ್ ನೀಡಿದ್ದರು. ಆದರೆ ಪೊಲೀಸ್ ವಿಚಾರಣೆಗೆ ಗೈರಾಗಿದ್ದಕ್ಕೆ ಅಸಮಾಧಾನಗೊಂಡಿದ್ದ ಕೋರ್ಟ್ ಎನ್‌ಬಿಡಬ್ಲ್ಯೂ ಜಾರಿ ಮಾಡಿತ್ತು. ಕೋರ್ಟ್ ಸೂಚನೆ ಮೇರೆಗೆ ರಜತ್‌ನನ್ನ ಬಂಧಿಸಲಾಗಿದೆ. ರಜತ್ ಬಂಧನದ ಬೆನ್ನಲ್ಲೇ ವಿನಯ್ ಗೌಡ ಬಂಧನಕ್ಕೆ ಪೊಲೀಸರು ತೆರಳಿದ್ದಾರೆ. ಬಂಧಿಸಿದ ಬಳಿಕ ಇಂದೇ 24ನೇ ಎಸಿಎಂಎಂ ಕೋರ್ಟ್‌ಗೆ ಇಬ್ಬರನ್ನೂ ಪೊಲೀಸರು ಹಾಜರುಪಡಿಸಲಿದ್ದಾರೆ.
<a href=https://youtube.com/embed/FV_WdO1-tRM?autoplay=1&mute=1><img src=https://img.youtube.com/vi/FV_WdO1-tRM/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಸದ್ಯ ಪೊಲೀಸರಿಂದ ಬಂಧನ ಭೀತಿ ಶುರುವಾಗುತ್ತಿದ್ದಂತೆ ವಿನಯ್ ಗೌಡ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸಿನಿಮಾ ಚಿತ್ರೀಕರಣದಲ್ಲಿದ್ದೇನೆ, ನಿನ್ನೆ ನಾನು ಪೊಲೀಸ್ ಸ್ಟೇಷನ್‌ಗೆ ಹೋಗಿ ಬಂದಿದ್ದೇನೆ, ವಾರೆಂಟ್ ಜಾರಿಯಾಗಿರೋದು ನನಗೆ ಗೊತ್ತಿಲ್ಲ. ಸದ್ಯ ನಾನು ಮನೆಯಲ್ಲಿಲ್ಲ, ನನಗೆ ಯಾವುದೇ ಕರೆಯೂ ಬಂದಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ
ನ್ಯಾಯಾಲಯದೆದುರು ಹಾಜರಾಗದಿದ್ದರಿಂದ ರಜತ್ ಕಿಶನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮತ್ತೊಂದೆಡೆ, ಹಾಜರಾಗದಿರುವ ಬಗ್ಗೆ ವಿನಯ್ ಗೌಡ ವಿನಾಯಿತಿ ಕೋರಿದ್ದರಿಂದ ಹಾಗೂ ಅವರ ವಿರುದ್ಧ ವಾರೆಂಟ್ ಜಾರಿಯಾಗಿರದಿದ್ದರಿಂದ 500 ರೂಪಾಯಿ ನ್ಯಾಯಾಲಯ ದಂಡ ವಿಧಿಸಿದೆ. ನ್ಯಾಯಾಲಯವು ಏಪ್ರಿಲ್ 29ರ ವರೆಗೆ ರಜತ್‌ಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಮುಂದಿನ ಎಂಟು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಬೇಕಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.