ಮೋಹಕ ತಾರೆ ರಮ್ಯಾ ಮದುವೆ ಕೊನೆಗೂ ಫಿಕ್ಸ್ ಆಯ್ತು; ಹುಡುಗ ಮಾತ್ರ ಬೆಣ್ಣೆ

 
ಸ್ಯಾಂಡಲ್‌ವುಡ್ ಕ್ವೀನ್ ಆಗಿ ಮೆರೆದವರು ನಟಿ ರಮ್ಯಾ. ಚಂದನವನದ ಪದ್ಮಾವತಿಯಾಗಿ ತೆರೆ ಮೇಲೆ ಮಿಂಚಿದವರು. ಮೋಹಕತಾರೆ ಮದುವೆ ಯಾವಾಗ? ಅವ್ರು ಮದುವೆನೇ ಆಗಲ್ವಾ? ಒಂಟಿಯಾಗೇ ಇರೋಕೆ ನಿರ್ಧರಿಸಿಬಿಟ್ರಾ ಹೀಗೆ ಹಲವಾರು ಪ್ರಶ್ನೆಗಳು ಅವರ ಸುತ್ತ ಕಾಡ್ತಾನೆ ಇದ್ದವು. ಈ ಎಲ್ಲಾ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ತೆರೆ ಬೀಳುವ ಕಾಲ ಸನ್ನಿಹಿತವಾಗಿದೆ.
ಚಂದನವನದ ಮೋಸ್ಟ್‌ ಎಲಿಜಬಲ್‌ ಬ್ಯಾಚುಲರ್.. ದಶಕಗಳಿಗೂ ಹೆಚ್ಚು ಕಾಲ ಪಡ್ಡೆ ಹುಡುಗರ ಹಾಟ್‌ ಫೇವರಿಟ್‌ ನಟಿ ಅಂದ್ರೆ ಅದು ಮೋಹಕ ತಾರೆ ರಮ್ಯಾ. ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ತ್ರಿಪಲ್ ಆರ್‌ ಹಿರೋಯಿನ್‌ಗಳಲ್ಲಿ ಒಬ್ಬರಾಗಿದ್ದ ಆ್ಯಕ್ಟರ್‌. ಸದ್ಯ ಚಿತ್ರರಂಗದಿಂದ ದೂರ ಸರಿದಿರೋ ನಟಿಯ ಮದುವೆಯದ್ದೇ ಎಲ್ಲರಿಗೂ ಕಾಡ್ತಿದ್ದ ಪ್ರಶ್ನೆ. <a href=https://youtube.com/embed/oQ3OAVuHQnw?autoplay=1&mute=1><img src=https://img.youtube.com/vi/oQ3OAVuHQnw/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ವಯಸ್ಸು 41 ದಾಟಿದ್ರೂ ಚಂದನವನದ ಪದ್ಮಾವತಿ ಮದುವೆ ಆಗೋ ಮಾತೆ ಎತ್ತಿರಲಿಲ್ಲ. ಯಾವಾಗ ಮದುವೆ ಅಂತ ಕೇಳಿದ್ರೆ ನಗುತ್ತಲೇ ಮಾತು ಮರೆಸ್ತಿದ್ರು ರಮ್ಯಾ. ಗೌಡ್ರ ಹುಡುಗನ ಹುಡುಕಿ ಅಂತಲೇ ಟಾಪಿಕ್ ಚೇಂಜ್ ಮಾಡ್ತಿದ್ದರು. ಇದರ ಮಧ್ಯೆ ರಮ್ಯಾ ಮದುವೆ ಬಗ್ಗೆ ಕೆಲವೊಂದು ಗಾಸಿಪ್‌ಗಳು ಆಗಾಗ ಕೇಳಿ ಬರುತ್ತಿತ್ತು. ಆದ್ರೀಗ ಕನ್ನಡ ಸಿನಿ ಇಂಡಸ್ಟ್ರಿಯ ಮೋಹಕ ಬೆಡಗಿ ಹಸೆಮಣೆ ಏರುವ ದಿನ ಹತ್ತಿರವಾಗುತ್ತಿದೆ. ಮೋಹಕ ತಾರೆ ಕೊನೆಗೂ ಸಪ್ತಪದಿ ತುಳಿಯಲಿದ್ದಾರೆ ಎಂಬ ಮಾಹಿತಿ ಅವರ ಆಪ್ತ ವಲಯಗಳಿಂದ ತಿಳಿದು ಬಂದಿದೆ.
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ವಿವಾಹ ನಿಗದಿಯಾಗಿದೆ ಎಂಬ ಮಾಹಿತಿ ನ್ಯೂಸ್ ಫಸ್ಟ್ಗೆ ಲಭ್ಯವಾಗಿದೆ. ನವೆಂಬರ್ ತಿಂಗಳಲ್ಲಿ ರಮ್ಯಾ ಹಸೆಮಣೆ ಏರಲಿದ್ದಾರೆ ಅಂತ ತಿಳಿದುಬಂದಿದೆ. ಉದ್ಯಮಿಯೊಬ್ಬರನ್ನ ಮೋಹಕ ತಾರೆ ಕೈ ಹಿಡಿಯಲಿದ್ದಾರೆ ಎಂಬ ಮಾಹಿತಿ ಕೂಡಾ ಸಿಕ್ಕಿದೆ. ಸದ್ಯದಲ್ಲೇ ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆಯಂತೆ ಅನ್ನೋದು ನಟಿ ರಮ್ಯಾರ ಆಪ್ತ ವಲಯದಿಂದ ಮಾಹಿತಿ ತಿಳಿದುಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.