ಅನಾರೋಗ್ಯದ ಬಗ್ಗೆ ಸ್ಪಷ್ಟತೆ ಕೊಟ್ಟ ರಂಗಣ್ಣ, ಕನ್ನಡಿಗರ ನೆಚ್ಚಿನ ಪತ್ರಕರ್ತನ ಕಣ್ಣೀ ರ ಮಾತು
Updated: Jan 26, 2025, 19:44 IST

ತಲೆಯ ಮೇಲೆ ಬಿಳಿ ಕೂದಲ ನಡುವೆ ಅಲ್ಲಲ್ಲಿ ಕರಿ ಕೂದಲು, ಎಂದೂ ಕೆರೆಯದ ಕುರುಚಲು ಗಡ್ಡ, ತೀಕ್ಷ್ಣ ಕಣ್ಣು, ಹೆಗಲ ಮೇಲೆ ಫ್ಲಾಪ್ ಇರುವ ಇಳಿಬಿಟ್ಟ ಅಂಗಿ, ಕಾಲಲ್ಲಿ ಸಾದಾ ಚಪ್ಪಲಿ... ಈ ನೋಟವಿರುವ ವ್ಯಕ್ತಿ ಯಾರು ಬೇಕಾದರೂ ಆಗಬಹುದು. ಆದರೆ, ಅವರೆಲ್ಲ ರಂಗಣ್ಣ ಆಗಲು ಸಾಧ್ಯವೆ? ಇಂಪಾಸಿಬಲ್. ಹೌದು ಆದರೆ ಅಂತಹ ಸರಳ ಸಾತ್ವಿಕ ಮನುಷ್ಯರಿಗೆ ಆರೋಗ್ಯ ಸಮಸ್ಯೆ ಕಾಡಿದೆ.
ಟಿವಿ ಪರದೆಯ ಮೇಲೆ ಬಂದು ಕುಳಿತರೆ ಯಾವುದೇ ವಿಷಯದ ಮೇಲೆ ಅತ್ಯಂತ ಅಧಿಕಾರಯುತವಾಗಿ, ನಿರರ್ಗಳವಾಗಿ ಮಾತನಾಡಬಲ್ಲ, ರಾಜಕಾರಣಿಗಳು ಸೇರಿದಂತೆ ತಮ್ಮ ಮಾತಿನ ಗರಗಸದಿಂದಲೇ ಕತ್ತರಿಸಿ ಹಾಕಬಲ್ಲ ತಾಕತ್ತಿರುವ, ಮಾಡಬೇಕೆಂದುಕೊಂಡದ್ದನ್ನು ಮಾಡಿಯೇ ತೀರುವ ಛಲದಂಕಮಲ್ಲ ಪತ್ರಕರ್ತ ಅಂದರೆ ಅದು ಕೂಡ ರಂಗಣ್ಣ ಮಾತ್ರವೆ.
<a href=https://youtube.com/embed/3f3X3QIL_VI?autoplay=1&mute=1><img src=https://img.youtube.com/vi/3f3X3QIL_VI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನನಗೆ ದನ ಕಾಯುವುದು ಎಂದರೆ ನನಗೆ ಬಹಳ ಅಚ್ಚುಮೆಚ್ಚು ಎಂದು ತನ್ನ ಬಾಲ್ಯದ ಜೀವನವನ್ನು ಮೆಲುಕು ಹಾಕಿದ ರಂಗನಾಥ್, ಸಣ್ಣ ವಯಸ್ಸಿನಿಂದಲೂ ತನಗೆ ಬೇಕಾದನ್ನು ಹಠ ಸಾಧಿಸಿ ಗಿಟ್ಟಿಸಿಕೊಳ್ಳುತ್ತಿದ್ದೆ ಬಿಡುತ್ತಿರಲಿಲ್ಲ, ಇಲ್ಲಿಯವರೆಗೆ ಗಡ್ಡ ಕೂಡ ಕೆರೆದಿಲ್ಲ ಎಂದು ಅನುಭವದ ಬುತ್ತಿಯನ್ನು ಬಿಚ್ಚಿಟ್ಟ ಇವರಿಗೆ ವೈದ್ಯರು 21 ದಿನಗಳ ಕಾಲ ರೆಸ್ಟ್ ಹೇಳಿದ್ದರಿಂದ ಟಿವಿ ಪರದೆಯ ಮೇಲೆ ಕಾಣಿಸಿಕೊಂಡಿರಲಿಲ್ಲ.
ನನಗೆ I have to hit back ಎನ್ನುವ ಛಲವಿತ್ತು. ಟೇಪ್ ಹಿಡಿದುಕೊಂಡು, ಇಟ್ಟಿಗೆ ಹೊತ್ತು ಪಬ್ಲಿಕ್ ಟಿವಿಯನ್ನು ಕಟ್ಟಿದ್ದೇವೆ. ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಬಳಸಿಕೊಂಡು ಪಬ್ಲಿಕ್ ಟಿವಿ ಸ್ಥಾಪಿಸಿದ್ದೇವೆ. ಈ ಉದ್ಯಮ ಸ್ಥಾಪನೆಗೆ ನೂರು ಕೋಟಿ, ಸಾವಿರ ಕೋಟಿ ಬೇಕು ಎಂದು ಹೇಳುತ್ತಿದ್ದವರಿಗೆ ಪಬ್ಲಿಕ್ ಟಿವಿ ಕಟ್ಟುವ ಮೂಲಕ ಉತ್ತರ ಕೊಟ್ಟಿದ್ದೇನೆ ಎಂದು ಹೇಳುವ ರಂಗಣ್ಣ ಇನ್ನು ಕೆಲವೇ ಕೆಲವು ದಿನಗಳಲ್ಲಿ ಮತ್ತೆ ನ್ಯೂಸ್ ಹೊತ್ತು ನಮ್ಮ ಮುಂದೆ ಬರಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.