ಮೋದಿ ಹನ್ನೊಂದು ದಿನ ಉಪವಾಸ ಮಾಡಿಲ್ಲ ಎಂದವನಿಗೆ ಖಡಕ್ ವಾ.ರ್ನಿಂಗ್ ಕೊಟ್ಟ ರಂಗಣ್ಣ

 

ಮೋದಿ ಉಪವಾಸ ಮಾಡಿಲ್ಲ. ಏಳನೀರು ಮಾತ್ರ ಕುಡಿದು ಉಪವಾಸ ಮಾಡಿದ್ರೆ ಒಂದೆರೆಡು ದಿನದಲ್ಲಿ ಮನುಷ್ಯ ಬೀಳುತ್ತಾನೆ. 11 ದಿನಗಳ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಉಪವಾಸ ವ್ರತದ ಮೇಲೆ ಅನುಮಾನವನ್ನ ಮಾಜಿ ಸಿಎಂ ವೀರಪ್ಪ ಮೊಯ್ಲಿ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗುಜರಾತ್‌ನ ಹತ್ಯಾಕಾಂಡದ ವೇಳೆ ಅಂದಿನ ಮುಖ್ಯಮಂತ್ರಿ ಆಗಿದ್ದ ಮೋದಿ ರಾಜಧರ್ಮ, ಕಾನೂನು ಪರಿಪಾಲನೆ ಮಾಡಲಿಲ್ಲ. ಅಂತಹ ಮೋದಿ ಅವರಿಂದ ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿಸಿದ್ದು ಎಷ್ಟು ಸರಿ.? ಮೋದಿಯಿಂದ ದೇವಾಲಯಕ್ಕೆ ಎಷ್ಟು ಪಾವಿತ್ರತ್ಯತೆ ಬರಲಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. <a href=https://youtube.com/embed/bYYEA9e7PAc?autoplay=1&mute=1><img src=https://img.youtube.com/vi/bYYEA9e7PAc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಮೋದಿ ಉಪವಾಸ ಮಾಡಿದ್ದ ಬಗ್ಗೆ ನನಗೆ ಅನುಮಾನವಿದೆ. ಉಪವಾಸ ಮಾಡದೇ ಗರ್ಭಗುಡಿಗೆ ಹೋಗಿದ್ದರೆ ಅಪವಿತ್ರವಾಗುತ್ತದೆ, ಗರ್ಭಗುಡಿಗೆ ಹೋಗಿ ಪೂಜೆ ಮಾಡಿದ್ದರೆ ಆ ಸ್ಥಳ ಅಪವಿತ್ರವಾಗುತ್ತದೆ. ಅಪವಿತ್ರವಾಗಿ ಆ ಸ್ಥಳದಲ್ಲಿ ಯಾವುದೇ ಶಕ್ತಿ ಇರಲ್ಲ. ರಾಮಮಂದಿರ ಹೆಸರೇಳಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇನ್ಮುಂದೆ ಬಿಜೆಪಿಗೆ ಮಾತಾಡಲು ಬೇರೆ ವಿಚಾರವಿಲ್ಲ ಎಂದು ಹೇಳಿದರು.

ನರೇಂದ್ರ ಮೋದಿ ಗರ್ಭಗುಡಿಗೆ ಪ್ರವೇಶ ಮಾಡಿದೆ ತಪ್ಪು, ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಸಹ ತಪ್ಪು, ನಿಜವಾದ ಸ್ವಾಮೀಜಿಗಳು, ಬ್ರಾಹ್ಮಣರು ಆಗಿದ್ರೆ ನರೇಂದ್ರ ಮೋದಿ ಅವರನ್ನು ಗರ್ಭಗುಡಿ ಒಳಗೆ ಬಿಡಬಾರದಿತ್ತು. ಯೋಧ್ಯೆ ರಾಮಮಂದಿರ ಲೋಕಾರ್ಪಣೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಗರ್ಭಗುಡಿಗೆ ಬಿಡಬಾರದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಮಮಂದಿರ ಅಪೂರ್ಣ ಮಂದಿರ. 

ಕೇವಲ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಮಾಡಿದ್ರೆ ಸಾಲದು. ಅಲ್ಲಿ ರಾಮ ಲಕ್ಷಣ, ಸೀತಾ ಹಾಗೂ ಆಂಜನೇಯನ ವಿಗ್ರಹಗಳು ಇರಬೇಕು ಆಗಲೇ ರಾಮಮಂದಿರ ಪೂರ್ಣ ಆಗೋದು ಎಂದರು. ಇನ್ನು ಇವರ ಮಾತಿಗೆ ಟಕ್ಕರ್ ನೀಡಿರುವ ಪಬ್ಲಿಕ್ ಟಿವಿ ರಂಗಣ್ಣ ಅವರು ಗಾಂಧೀಜಿ 21ದಿನ ಅದ್ಹೇಗೆ ಉಪವಾಸ ಉಳಿದರು. ಹಾಗಿದ್ದ ಅವರು ಮಾಡಿದ್ದು ಕೂಡ ಸುಳ್ಳು ಅಲ್ವೇ ಎಂದು ಟಾಂಗ್ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.