ರಶ್ಮಿಕಾ ತುಂಬಾ ಒಳ್ಳೆಯ ಹುಡುಗಿ, ನನಿಗೆ ತುಂಬಾ ಇಷ್ಟ ಆಯ್ತು ಎಂದ ಸಲ್ಮಾನ್ ಖಾನ್
Mar 29, 2025, 18:13 IST

ರಶ್ಮಿಕಾ ಮಂದಣ್ಣ ಅವರನ್ನು ವಿನಾಕಾರಣ ಸೋಷಿಯಲ್ ಮೀಡಿಯಾದಲ್ಲಿ ಕಾಲೆಳೆಯುವವರ, ಟೀಕಿಸುವವರ, ದ್ವೇಷ ಸಾಧಿಸುವವರ ದೊಡ್ಡ ಸಂಖ್ಯೆಯೇ ಇದೆ. ಅದರ ಹೊರತಾಗಿಯೂ ರಶ್ಮಿಕಾ ತಮ್ಮ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿರುವುದರ ಜೊತೆಗೆ, ತಮ್ಮ ಕೆಲಸದ ಬಗ್ಗೆ ಹಲವರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ. ಈಗ ಸಲ್ಮಾನ್ ಖಾನ್ ಸಹ ರಶ್ಮಿಕಾರನ್ನು ಹೊಗಳಿದ್ದಾರೆ.
ಈಗ ಆ ಸಾಲಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಸಹ ಸೇರಿದ್ದಾರೆ. ಸಲ್ಮಾನ್ ಖಾನ್ ಅಭಿನಯಿಸಿರುವ ಸಿಕಂದರ್ ಚಿತ್ರವು ಮಾರ್ಚ್ 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ದೇಶಕ ಎ.ಆರ್. ಮುರುಗದಾಸ್ ನಿರ್ದೇಶನ ಮಾಡಿದ್ದಾರೆ.ಇತ್ತೀಚೆಗೆ ಈ ಚಿತ್ರದ ಪ್ರಚಾರದ ಸಲುವಾಗಿ ಸಿಕಂದರ್ ಮೀಟ್ಸ್ ಗಜನಿ ಎಂಬ ಕಾರ್ಯಕ್ರಮ ನಡೆಯಿತು. ಈ ಹಿಂದೆ ಮುರುಗದಾಸ್ ನಿರ್ದೇಶನದ ಗಜನಿ ಚಿತ್ರದಲ್ಲಿ ಆಮೀರ್ ಖಾನ್ ನಟಿಸಿದ್ದರು. ಅವರು ಸಲ್ಮಾನ್ ಖಾನ್ ಮತ್ತು ಮುರುಗದಾಸ್ ಅವರನ್ನು ಸಂದರ್ಶನ ಮಾಡಿದ್ದರು.
<a href=https://youtube.com/embed/PX5CTMHsg7c?autoplay=1&mute=1><img src=https://img.youtube.com/vi/PX5CTMHsg7c/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಈ ಸಂದರ್ಭದಲ್ಲಿ ಚಿತ್ರದ ನಾಯಕಿ ಯಾರು ಎಂದು ಅವರು ಪ್ರಶ್ನಿಸುತ್ತಾರೆ. ಆಗ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಬಗ್ಗೆ ಬಹಳ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ರಶ್ಮಿಕಾ ಒಬ್ಬ ಅದ್ಭುತ ನಟಿ ಎಂದು ಕೊಂಡಾಡಿದ್ದಾರೆ.ರಶ್ಮಿಕಾ ಅದ್ಭುತವಾದ ನಟಿ. ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಅದ್ಭುತ ಹುಡುಗಿ. ಹೈದರಾಬಾದ್‍ನಲ್ಲಿ ಚಿತ್ರೀಕರಣ ಮಾಡುವಾಗ ರಶ್ಮಿಕಾ, ಪುಷ್ಪ 2’ ಚಿತ್ರದಲ್ಲೂ ನಟಿಸುತ್ತಿದ್ದರು. ಬೆಳಿಗ್ಗೆ ಏಳು ಗಂಟೆಗೆ ನಮ್ಮ ಚಿತ್ರೀಕರಣ ಶುರುವಾಗುತ್ತಿತ್ತು. ರಾತ್ರಿ ಇಡೀ ಅಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿ ನಮ್ಮ ಸೆಟ್‍ಗೆ ಬರುತ್ತಿದ್ದರು.
ಕೆಲವೊಮ್ಮೆ ಜ್ವರ ಇದ್ದರೂ ಬಂದು ಕೆಲಸ ಮಾಡುತ್ತಿದ್ದರು. ಒಂದು ಸೆಟ್‍ನಿಂದ ಇನ್ನೊಂದು ಸೆಟ್‍ಗೆ ಬರುವ ಸಮಯದಲ್ಲಿ ನಿದ್ದೆ ಮಾಡುತ್ತಿದ್ದರು. ಪ್ರಯಾಣದಲ್ಲಷ್ಟೇ ನಿದ್ದೆ ಮಾಡುವುದಕ್ಕೆ ಅವರಿಗೆ ಸಮಯ ಸಿಗುತ್ತಿತ್ತು. ಅದರ ನಡುವೆಯೂ ರಶ್ಮಿಕಾ ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಸಿಕಂದರ್ ಚಿತ್ರದಲ್ಲಿ ಕನ್ನಡದ ನಟ ಕಿಶೋರ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಇವರ ಜತೆಗೆ ಪ್ರತೀಕ್ ಬಬ್ಬರ್ ಮತ್ತು ಬಹುಭಾಷಾ ನಟ, ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್‌ಗೂ ಇಲ್ಲಿ ನೆಗೆಟಿವ್ ಪಾತ್ರವಿದೆ. ನಾಯಕಿ ರಶ್ಮಿಕಾ ಮಂದಣ್ಣ ಈ ಹಿಂದಿನ ಸಿನಿಮಾಗಳಂತೆಯೇ ಇಲ್ಲಿಯೂ ಕಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.