ಬಿಗ್ ಬಾಸ್ ಮನೆಗೆ ರಿಷಭ್ ಶೆಟ್ಟಿ ಆಂಕರ್; ಸಂಭ್ರಮಿಸಿದ ಕರುನಾಡು
Sep 3, 2024, 08:46 IST
ಬಿಗ್ಬಾಸ್ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ.ಭಾರತದ ಬಹುತೇಕ ಭಾಷೆಗಳಲ್ಲಿರುವ ಜನಪ್ರಿಯ ಟಿವಿ ಶೋ ಬಿಗ್ ಬಾಸ್ ಬಗ್ಗೆ ಪ್ರತ್ಯೇಕವಾಗಿ ಪರಿಚಯ ಮಾಡಿಕೊಡಬೇಕಾಗಿಲ್ಲ. ನಾನಾ ಭಾಷೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತದೆ. ಆಯಾ ಭಾಗದ ಸಲೆಬ್ರಿಟಿಗಳು ಹಾಗೂ ಸೋಶಿಯಲ್ ಮೀಡಿಯಾ ತಾರೆಗಳು, ಇದರೊಂದಿಗೆ ಒಂದಷ್ಟು ವಿವಾದಗಳಿಂದ ಸುದ್ದಿಯಾಗುವವರು ಸ್ಪರ್ಧಿಗಳಾಗಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.
ಮಲಯಾಳಂನಲ್ಲೂ ಬಿಗ್ ಬಾಸ್ ಕಾರ್ಯಕ್ರಮ ಜನಪ್ರಿಯವಾಗಿದೆ. ಇದರ 6ನೇ ಸೀಸನ್ ಭಾನುವಾರ ಶುರುವಾಗಿದೆ. ಬಿಗ್ ಬಾಸ್ ಮಲಯಾಳಂ 6 ಕಾರ್ಯಕ್ರಮವನ್ನು ಮೋಹನ್ ಲಾಲ್ ಅವರು ಹಿಂದಿನ ಬಾರಿಯಂತೆ ಈ ಬಾರಿಯೂ ನಡೆಸಿಕೊಳ್ಳಲಿದ್ದಾರೆ.ಖ್ಯಾತ ನಟಿ ಅನ್ಸಿಬಾ ಹಾಸನ್ ಮಲಯಾಳಂ ಬಿಗ್ ಬಾಸ್ ಆರನೇ ಸೀಸನ್‌ನಲ್ಲಿ ಮೊದಲ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಇವರು ʼದೃಶ್ಯಂʼ ಸಿನಿಮಾದಲ್ಲಿ ಮೋಹನ್‌ಲಾಲ್ ಅವರ ಹಿರಿಯ ಮಗಳಾಗಿ ಕಾಣಿಸಿಕೊಂಡಿದ್ದರು.
ಇನ್ನು ಅಂತಾರಾಷ್ಟ್ರೀಯ ಬಾಡಿಬಿಲ್ಡರ್ ಮತ್ತು ಸೆಲೆಬ್ರಿಟಿ ವೈಯಕ್ತಿಕ ತರಬೇತುದಾರಾಗಿರುವ ಜಿಂಟೋ ಅವರು ಎರಡನೇ ಸ್ಪರ್ಧಿಯಾಗಿ ಬಿಗ್ ಬಾಸ್ ಗೆ ಎಂಟ್ರಿ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ಮೂರನೇ ಸ್ಪರ್ಧಿಯಾಗಿ ಖ್ಯಾತ ಕಿರುತೆರೆ ನಟಿ ಯಮುನಾ ರಾಣಿ ಅವರು ಪ್ರವೇಶ ಮಾಡಿದ್ದಾರೆ. ಇವರು. ‘ಇಟ್ಟಿಮನಿ ಮೇಡ್ ಇನ್ ಚೈನಾ’, ‘ಮೀಸಮಾಧವನ್’ ಮುಂತಾದ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕೇರಳ ಕಿರುತರೆಯಲ್ಲಿ ಬಹುತೇಕ ವೀಕ್ಷಕರಿಗೆ ರಿಷಿ ಕುಮಾರ್ ಮುಖ ಪರಿಚಯವಿದೆ. ಧಾರಾವಾಹಿಗಳಲ್ಲಿ ಹೆಸರು ಮಾಡಿರುವ ಅವರು ʼ ಉಪ್ಪುಂ ಮುಳಕುಂʼ ಶೋನಿಂದ ಜನಪ್ರಿಯರಾಗಿದ್ದಾರೆ.
ಬಿಗ್ ಬಾಸ್ ಮಲಯಾಳಂ ಸೀಸನ್ 6 ರಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಿ ಮತ್ತು ಸೌಂದರ್ಯ ಬ್ಲಾಗರ್ ಜಾಸ್ಮಿನ್ ಜಾಫರ್ ಐದನೇ ಸ್ಪರ್ಧಿ ಆಗಿ ಮನೆಯೊಳಗೆ ಎಂಟ್ರಿ ಆಗಿದ್ದಾರೆ. ಶಿಕ್ಷಕನಿಂದ ಯೂಟ್ಯೂಬರ್ ಆದ ಸಿಜೋ ಜಾನ್ ತನ್ನ ʼಸಿಜೋಟಾಕ್ಸ್ʼ ಯೂಟ್ಯೂಬ್ ಚಾನೆಲ್ ನಿಂದ ಫೇಮ್ ಆಗಿದ್ದಾರೆ. ಒಂದು ವೇಳೆ ಕಾರ್ಯಕ್ರಮ ಗೆದ್ದರೆ ಅದರಿಂದ ಬರುವ ಹಣದಿಂದ ಅವರು ಬ್ಯುಸಿನೆಸ್ ಆರಂಭಿಸುವುದಾಗಿ ವೇದಿಕೆಯಲ್ಲಿ ಹೇಳಿದ್ದಾರೆ.
https://youtube.com/shorts/voDzk2eW51Q?si=KU9hpbRWxX8HEt6Y
ಜನಪ್ರಿಯ ಕಿರುತೆರೆ ನಟಿಯಾಗಿರುವ ಶ್ರೀತು ಕೃಷ್ಣನ್ ಬಿಗ್ ಬಾಸ್ ಮನೆಯಲ್ಲಿ ಏಳನೇ ಸ್ಪರ್ಧಿಯಾಗಿ ಎಂಟ್ರಿ ಆಗಿದ್ದಾರೆ. ತಮಿಳು ಮತ್ತು ಮಲಯಾಳಂನಲ್ಲಿ ಕಿರುತರೆಯಲ್ಲಿ ಅವರು ಖ್ಯಾತರಾಗಿದ್ದಾರೆ. ʼಅಮ್ಮಯಾರಿಯಾತೆʼ ಧಾರಾವಾಹಿಯಿಂದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೇಗೆ ಇನ್ನೂ ಹಲವರು ಜನ ಕಲಾವಿದರು ಭಾಗವಹಿಸುತ್ತಿದ್ದಾರೆ.