ಕ್ರಿಕೆಟ್ ಜಗತ್ತಿಗೆ ಗುಡ್ ಬಾಯ್ ಹೇಳಿದ ರೋಹಿತ್ ಶರ್ಮಾ; ನೀತಾ ಅಂಬಾನಿ ಕಣ್ಣೀರು

 

ಈ ಬಾರಿಯ ಐಪಿಎಲ್ ಸೀಸನ್ ಮುಂಬೈ ಇಂಡಿಯನ್ಸ್ ಪರವಾಗಿಲ್ಲ. ಆರಂಭದಿಂದಲೇ ವಿವಾದ, ಮನಸ್ತಾಪ ಜೊತೆ ನಾಯಕತ್ವದ ಚರ್ಚೆಯ ಜೋರಾಗಿಯೇ ನಡೆಯುತ್ತಿದೆ. ನಾಯಕತ್ವದ ಚರ್ಚೆಯಲ್ಲೇ ಮುಳುಗಿರುವ ಮುಂಬೈಗೆ ಇದೀಗ ಬಹುದೊಡ್ಡ ಪೆಟ್ಟು ಬೀಳುವ ವಿಷಯ ಬಹಿರಂಗವಾಗಿದೆ.

ಈ ಸಲ ಮುಂಬೈ ಇಂಡಿಯನ್ಸ್ ಪ್ರದರ್ಶನ ತೀರ ಕಳಪೆಯಾಗಿದೆ. ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಮುಂಬೈ, ಬ್ಯಾಕ್ ಟು ಬ್ಯಾಕ್ ಹಿನ್ನಡೆ ಅನುಭವಿಸುತ್ತಿದೆ. ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ ನಾಯಕತ್ವ ಉತ್ತಮವಾಗಿಲ್ಲ ಎಂದು ಅನೇಕರು ದೂರುತ್ತಿದ್ದಾರೆ. ಇದರ ಹೊರತಾಗಿ ಮೈದಾನದಲ್ಲಿ ಹಾರ್ದಿಕ್ ಪಾಂಡ್ಯ ತೋರುವ ವರ್ತನೆಯನ್ನು ಅಭಿಮಾನಿಗಳು ಇಷ್ಟಪಡುತ್ತಿಲ್ಲ. <a href=https://youtube.com/embed/i5Z4RwFMkVc?autoplay=1&mute=1><img src=https://img.youtube.com/vi/i5Z4RwFMkVc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಮತ್ತೊಂದೆಡೆ ಇತ್ತೀಚೆಗೆಯಷ್ಟೇ, ಮತ್ತೆ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಗುತ್ತದೆ ಎಂಬ ವರದಿಗಳು ಭಾರೀ ಸುದ್ದಿಯಾಗಿತ್ತು. ಆದರೆ ಇದೀಗ ಅವೆಲ್ಲವನ್ನೂ ಮೀರಿದ ಸುದ್ದಿಯೊಂದು ಮುನ್ನಲೆಗೆ ಬಂದಿದೆ. ಹೌದು ಪಾಂಡ್ಯ ಬದಲಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಆಗುತ್ತಾರೆ ಎಂದು ಹೇಳುತ್ತಿದ್ದರು. ಆದರೆ ಇದೀಗ ರೋಹಿತ್ ಶರ್ಮಾ ಅದನ್ನು ಅಲ್ಲಗಳೆದಿದ್ದಾರೆ.

ಕೆಲ ವರದಿಗಳ ಪ್ರಕಾರ, ರೋಹಿತ್ ಶರ್ಮಾ ಅವರ ಪ್ರಯಾಣ ಮುಂಬೈ ಇಂಡಿಯನ್ಸ್‌ ಜೊತೆ ಅಂತಿಮ ಹಂತದಲ್ಲಿದೆ. ಅಂದರೆ ಸುದೀರ್ಘ 14 ವರ್ಷಗಳ ಸಂಬಂಧವನ್ನು ಕೊನೆಗೊಳಿಸಲು ರೋಹಿತ್ ನಿರ್ಧರಿಸಿದ್ದಾರೆ.ಗುಜರಾತ್ ವಿರುದ್ಧ ನಡೆದ ಪಂದ್ಯದ ವೇಳೆ ಮುಂಬೈ ತಂಡದಲ್ಲಿ ಸಮನ್ವಯದ ಕೊರತೆ ಸ್ಪಷ್ಟವಾಗಿ ಗೋಚರಿಸಿತ್ತು. 

ಹಾರ್ದಿಕ್ ಪಾಂಡ್ಯ ಕೋಪದಿಂದ ರೋಹಿತ್ ಶರ್ಮಾ ಅವರನ್ನು ಬೌಂಡರಿ ಕಡೆಗೆ ಕಳುಹಿಸುತ್ತಿರುವುದು ಕೂಡ ಕಂಡುಬಂದಿತ್ತು. ಈ ಎಲ್ಲಾ ವಿಡಿಯೋಗಳು ವೈರಲ್ ಆಗಿದ್ದು, ಕೋಪಗೊಂಡ ರೋಹಿತ್ ಫ್ಯಾನ್ಸ್, ಹಾರ್ದಿಕ್ ಅವರನ್ನು ಟ್ರೋಲ್ ಕೂಡಾ ಮಾಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.