ಸಿಹಿಸುದ್ದಿ ಕೊಟ್ಟ ಸಚಿನ್ ತೆಂಡೂಲ್ಕರ್ ಪುತ್ರಿ, ಶುಭಂ ಗಿಲ್ ಪ್ರೀತಿಗೆ ಗ್ರೀನ್ ಸಿಗ್ನಲ್?
Jan 21, 2025, 13:15 IST
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ ಮಗಳು ಸಾರಾ ತೆಂಡುಲ್ಕರ್ ಯಾವ ಹೀರೋಯಿನ್ ಗೂ ಕಡಿಮೆ ಏನೆಲ್ಲ. ಅತ್ಯಂತ ಸುಂದರವಾಗಿರುವ ಸಾರಾ, ತಮ್ಮ ಸೌಂದರ್ಯದಿಂದಲೇ ಲಕ್ಷಾಂತರ ಫ್ಯಾನ್ಸ್ ಹೊಂದಿದ್ದಾರೆ. ಸಾರಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡ್ತಾ, ಫಾಲೋವರ್ಸ್ ಕಣ್ಣು ತಂಪು ಮಾಡ್ತಿರುತ್ತಾರೆ.
ಈಗ ಸಾರಾ ಅವರ ಮತ್ತೊಂದಿಷ್ಟು ಫೋಟೋ ಸದ್ದು ಮಾಡಿದೆ. ಸಾರಾ ತೆಂಡುಲ್ಕರ್ ಅವರ ಲೆಟೆಸ್ಟ್ ಫೋಟೋ, ವಿಡಿಯೋಗಳು ವೈರಲ್ ಆಗ್ತಿವೆ. ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಸಾರಾ, ನೆಟ್ಟಿಗರ ಗಮನ ಸೆಳೆದಿದ್ದಾರೆ. ಹಾಗೆಯೇ ಟ್ರೋಲರ್ ಬಾಯಿಗೂ ಆಹಾರವಾಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಅರ್ಜುನ್ ಕುರಿತಾಗಿ ಕೂಡಾ ಮಾತನಾಡಿದ್ದಾರೆ. ತಮ್ಮನ ಎಲ್ಲ ರಹಸ್ಯಗಳು ನನಗೆ ಗೊತ್ತು. ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ರೀತಿಯಲ್ಲಿ ಇರ್ತೀವಿ ಎಂದಿದ್ದಾರೆ.
ಸಾರಾ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಅವರು ಲಿಜರ್ಡ್ ಐಲ್ಯಾಂಡ್ ನಲ್ಲಿ ಫೋಟೋಕ್ಕೆ ಪೋಸ್ ನೀಡಿದ್ದಾರೆ. ಸಾರಾ ತೆಂಡುಲ್ಕರ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಒಂದಿಷ್ಟು ಫೋಟೋವನ್ನು ಪೋಸ್ಟ್ ಮಾಡಿ, ಲಿಜರ್ಡ್ ಐಲ್ಯಾಂಡ್ ಎಂದು ಶೀರ್ಷಿಕೆ ಹಾಕಿದ್ದಾರೆ. ಈ ಫೋಟೋದಲ್ಲಿ ಸಾರಾ ತೆಂಡುಲ್ಕರ್, ಗ್ರೀನ್ ಬಣ್ಣದ ಸಿಲ್ಕ್ ಡ್ರೆಸ್ ಧರಿಸಿದ್ದಾರೆ. ಸಮುದ್ರದ ನೀರಿನಲ್ಲಿ ಮಿಂದೇಳುವ ಸಾರಾ, ಸಮುದ್ರದ ಕಿನಾರೆಯಲ್ಲಿ ಒಂದಿಷ್ಟು, ನೀರು, ಮರಳಿನ ಮಧ್ಯೆ ಒಂದಿಷ್ಟು ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಟೋನ್ಡ್ ಲೆಗ್ ಫೋಟೋ ಜೊತೆ ಚರ್ರಿ ಹಣ್ಣು ತಿನ್ನಲು ಪ್ರಯತ್ನಿಸುತ್ತಿರುವ ವಿಡಿಯೋ ಕೂಡ ಹಾಕಿದ್ದಾರೆ. ಸಾರಾ ಈ ಫೋಟೋಗಳನ್ನು ಫ್ಯಾನ್ಸ್ ಮೆಚ್ಚಿಕೊಂಡ್ರೆ ಕೆಲವರು ಟ್ರೋಲ್ ಮಾಡಿದ್ದಾರೆ.
<a href=https://youtube.com/embed/t1vdWxBqtSc?autoplay=1&mute=1><img src=https://img.youtube.com/vi/t1vdWxBqtSc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಸಾರಾ ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿದ್ದು, 6.6 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಸಾರಾ ತೆಂಡೂಲ್ಕರ್, ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ವೈದ್ಯಕೀಯ ಶಿಕ್ಷಣ ಮುಗಿಸಿದ್ರು ಸಾರಾ ಆಯ್ದುಕೊಂಡಿದ್ದು ಫ್ಯಾಶನ್ ಲೋಕವನ್ನು. ಗ್ಲಾಮರ್ ಜಗತ್ತಿಗೆ ಪದಾರ್ಪಣೆ ಮಾಡಿರುವ ಸಾರಾ, 26ನೇ ವಯಸ್ಸಿನಲ್ಲಿ ಕೋಟಿಗಳ ಒಡತಿಯಾಗಿದ್ದಾರೆ. ಪೌಷ್ಟಿಕಾಂಶದ ತರಬೇತುದಾರರಾಗಿ ಮತ್ತು ಮಾಡೆಲ್ ಆಗಿ ಹಣ ಸಂಪಾದನೆ ಮಾಡ್ತಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.