ಮದುವೆಯಾಗಿ ಮಕ್ಕಳಿರುವ ವ್ಯಕ್ತಿಯೊಂದಿಗೆ ಸಾಯಿ ಪಲ್ಲವಿ ಡೇ ಟಿಂಗ್; ನೆಟ್ಟಿಗರು ಗರಂ

 
ಪುರುಷನಾಗಲಿ ಇಲ್ಲವೇ ಮಹಿಳೆಯಾಗಲಿ ಸಿನಿಮಾರಂಗಕ್ಕೆ ಕಾಲಿಟ್ಟ ಮೇಲೆ ಗಾಳಿಸುದ್ದಿಗಳ ಹೊಡೆತಕ್ಕೆ ಸಿಕ್ಕಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಲೇ ಬೇಕು. ಎಲ್ಲಾ ನಟ,ನಟಿಯರಿಗೂ ಈ ಅನುಭವ ಆಗುತ್ತಲೇ ಇರುತ್ತೆ. ವಿವಾದಗಳಿಂದ ಸದಾ ದೂರ ಇರುವ ಸಾಯಿ ಪಲ್ಲವಿಯನ್ನು ಈ ಗಾಸಿಪ್ ಅನ್ನೋದು ಬಿಟ್ಟಿಲ್ಲ. 
ಈಗ ಇವರ ಬಗ್ಗೆ ಹೊಸದೊಂದು ಗಾಳಿ ಸುದ್ದಿ ಹರಿದಾಡುತ್ತಿದೆ. ಸದ್ಯಕ್ಕೀಗ ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಷಯದ ಬಗ್ಗೆ ಚರ್ಚೆಯಾಗುತ್ತಿದೆ.ಸಾಯಿ ಪಲ್ಲವಿ ದಕ್ಷಿಣ ಭಾರತದ ಜನಪ್ರಿಯರ ನಟಿ. ಈ ನಟಿಯ ಸಿನಿಮಾಗಳಿಗಾಗಿಯೇ ಕಾದು ಕೂರುವ ಅಭಿಮಾನಿಗಳಿಗೇನು ಕಮ್ಮಿಯಿಲ್ಲ. ನಟನೆಯಲ್ಲೂ, ಸೌಂದರ್ಯದಲ್ಲೂ ಮೆಚ್ಚಿಕೊಂಡಿರುವ ಕೆಲವೇ ಕೆಲವು ನಟಿಯರಲ್ಲಿ ಈಕೆ ಕೂಡ ಒಬ್ಬರು. 
ಅದರಲ್ಲೂ ಮಲಯಾಳಂನ ಜನಪ್ರಿಯ ಸಿನಿಮಾ 'ಪ್ರೇಮಂ' ಮೂಲಕ ಹುಡುಗ ಪಾಲಿಗೆ ಡ್ರೀಮ್ ಗರ್ಲ್ ಆಗಿರೋ ಸಾಯಿಪಲ್ಲವಿ ಈಗ ಸ್ಟಾರ್ ನಟಿಯಾಗಿ ಬೆಳೆದು ನಿಂತಿದ್ದಾರೆ.
ಮಲಯಾಳಂ ಚಿತ್ರರಂಗದಿಂದ ವೃತ್ತಿ ಬದುಕು ಆರಂಭ ಮಾಡಿದ್ದರೂ, ಕನ್ನಡ ಬಿಟ್ಟು ದಕ್ಷಿಣ ಭಾರತದ ಮೂರು ಪ್ರಮುಖ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೇ 'ಗಾರ್ಗಿ' ಸಿನಿಮಾದ ಕನ್ನಡ ವರ್ಷನ್‌ಗೆ ಕನ್ನಡದಲ್ಲಿಯೇ ಡಬ್ ಮಾಡಿದ್ದು ಕನ್ನಡಿಗೆ ಒಂದಿಷ್ಟು ಸಮಾಧಾನ ಕೊಟ್ಟಿದೆ.
 ಸದ್ಯ ಈ ನಟಿ ಮದುವೆಯಾಗಿ ಮಕ್ಕಳಿರುವ ಸಹ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿಯನ್ನು ಯಾರೋ ಹಬ್ಬಿಸಿಬಿಟ್ಟಿದ್ದಾರೆ.ಅಷ್ಟಕ್ಕೂ ಸಾಯಿ ಪಲ್ಲವಿ ಸುತ್ತ ಹರಿದಾಡುತ್ತಿರುವ ಈ ಸುದ್ದಿಯಲ್ಲಿ ಎಷ್ಟು ಹುರುಳಿದೆ ಅನ್ನೋದು ಗೊತ್ತಾಗಿಲ್ಲ. ಈ ಸುದ್ದಿಯೇನೋ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಆದರೆ, ಸಾಯಿ ಪಲ್ಲವಿ ಮಾತ್ರ ಈ ಸುದ್ದಿಗೆ ಪ್ರತಿಕ್ರಿಯೆ ನೀಡಿಲ್ಲ. 
ಆದರೆ, ಅವರ ಫ್ಯಾನ್ಸ್ ಮಾತ್ರ ಇದೆಲ್ಲ ಸುಳ್ಳು ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಸದ್ಯ ಸಾಯಿ ಪಲ್ಲವಿ ಕೈಯಲ್ಲಿ ಶಿವಕಾರ್ತಿಕೇಯನ್ ಜೊತೆ ನಟಿಸುತ್ತಿರುವ ಅಮರನ್, ನಾಗಚೈತನ್ಯ ಸಿನಿಮಾ 'ತಾಂಡೇಲ್' ಹಾಗೂ ಬಾಲಿವುಡ್‌ನ 'ರಾಮಾಯಣ' ಕೈಯಲ್ಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunafu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.