ಮೂರನೇ ಮದುವೆಗೆ ಕಾಲಿಟ್ಟ ಸೈಫ್; ಕರೀನಾ ಕಡೆಯಿಂದ ಸಿಗಿತ್ತಾ Green Signal

 

ಅವರಿಬ್ಬರೂ ಹೇಳಿ ಮಾಡಿಸಿದ ಜೋಡಿ.ಬಾಲಿವುಡ್​​ನ ಅದ್ಭುತ ಜೋಡಿಗಳ ಬಗ್ಗೆ ಮಾತನಾಡುವಾಗಲೆಲ್ಲಾ, ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರ ಹೆಸರು ಇದ್ದೆ ಇರುತ್ತೆ. ಇದೀಗ ಈ ಜೋಡಿ ನಡುವೆ ಕೋಲ್ಡ್ ವಾರ್ ನಡೀತಿದ್ಯಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಇದಕ್ಕೆ ಕಾರಣ ಕೂಡ ಇದೆ. ಸೈಫ್ ಮನದಿಂದ ಅಲ್ಲ ಕೈ ಇಂದ ಕರೀನಾ ಕಪೂರ್ ಮಾಯವಾಗಿದ್ದಾಳೆ.

ಸಾಮಾನ್ಯವಾಗಿ ಈ ಜೋಡಿಯನ್ನು ಅಭಿಮಾನಿಗಳು ‘ಸೈಫಿನಾ’ ಎಂದೇ ಕರೆಯುತ್ತಾರೆ. ಇಬ್ಬರೂ ಸಾಮಾನ್ಯವಾಗಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ತಾರೆ. ಮದುವೆಯಾಗಿ ಇಷ್ಟು ವರ್ಷಗಳಾದರೂ ಇಬ್ಬರೂ ರೊಮ್ಯಾಂಟಿಕ್ ಪೋಸ್ ಕೊಡಲು ಮರೆಯುವುದಿಲ್ಲ. ಆದ್ರೆ ಇದೀಗ ಸೈಫ್ ಅಲಿ ಖಾನ್ ಅವರ ಫೋಟೋವೊಂದು ವೈರಲ್ ಆಗುತ್ತಿದೆ. ಇದನ್ನು ನೋಡಿದ ನಂತರ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಗುಸು ಗುಸು ಶುರುವಾಗಿದೆ.

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ 16 ಅಕ್ಟೋಬರ್ 2012ರಂದು ವಿವಾಹವಾದ್ರು. ಇದು ಸೈಫ್ ಅಲಿ ಖಾನ್ ಅವರಿಗೆ ಎರಡನೇ ಮದುವೆ ಆಗಿದೆ. ಈ ಮದುವೆಯ ನಂತರ ಅವರಿಗೆ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಮಕ್ಕಳ ಜೊತೆ ಸಂತೋಷವಾಗಿದ್ದ ಈ ಜೋಡಿ ನಡುವೆ ಜಗಳ ಶುರುವಾಗಿದೆ ಎನ್ನಲಾಗ್ತಿದೆ. ಈ ಡೌಟ್ ಬರಲು ಕಾರಣ ಸೈಫ್ ಕೈಯಲ್ಲಿದ್ದ ಹಚ್ಚೆ ಮಾಯವಾಗಿದೆ.

ಸೈಫ್ ತಮ್ಮ ಮಣಿಕಟ್ಟಿನ ಮೇಲೆ ಕರೀನಾಳ ಹೆಸರಿನ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಆಕೆ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ರು. ಇತ್ತೀಚೆಗೆ ಕೆಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದು, ಅದರಲ್ಲಿ ಕರೀನಾ ಹೆಸರಿನ ಹಚ್ಚೆ ಕಾಣೆಯಾಗಿದೆ. ಸೈಫ್ ಅಲಿ ಖಾನ್ ತನ್ನ ಪತ್ನಿ ಹೆಸರಿನ ಹಚ್ಚೆಯನ್ನು ಅಳಿಸಿದ್ದಾರೆ.

ಇತ್ತೀಚೆಗೆ ಸೈಫ್ ಅಲಿ ಖಾನ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ್ರು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ನಟನ ಕೈಯಲ್ಲಿ ಕರೀನಾ ಹೆಸರಿನ ಹಚ್ಚೆ ಬದಲಿಗೆ ಮತ್ತೊಂದು ಟ್ಯಾಟೂ ಕಾಣಿಸಿಕೊಂಡಿದೆ. ಇದನ್ನು ನೋಡಿದ ಅಭಿಮಾನಿಗಳು ಸೈಫ್ ಅಲಿ ಖಾನ್ ಮತ್ತು ಕರೀನಾ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುತ್ತಿದ್ದಾರೆ. ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬೇಬೋ ಡಿವೋರ್ಸ್ ಚರ್ಚೆ ಜೋರಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ