ವಿನಯ್ ಕುತಂತ್ರಕ್ಕೆ ಕಣ್ಣೀರಿಟ್ಟ ಸಂಗೀತ, ಕಾರ್ತಿಕ್ ಹಿಂದೆ ಹೋದ ಸಂ ಗೀತ

 

ಬಿಗ್ ಬಾಸ್ ಕನ್ನಡ ಸೀಸನ್ 10' ಶೋನಲ್ಲಿ ಈಗಾಗಲೇ ಕಾರ್ತಿಕ್ ಟೀಂ ಜೊತೆ ಮನಸ್ತಾಪ ಮಾಡಿಕೊಂಡು ಸಂಗೀತಾ ಅವರು ವಿನಯ್ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ವಿನಯ್ ತಂಡದಲ್ಲಿ ಸಂಗೀತಾರಿಗೆ ಸಾಂತ್ವನ ಹೇಳಿಕೊಂಡು ಕೂರಲು ಯಾರೂ ರೆಡಿ ಇಲ್ಲ.

ವಿನಯ್‌, ನಮ್ರತಾ, ಸ್ನೇಹಿತ್ ಅವರು ಸಂಗೀತಾ ಬೆನ್ನ ಹಿಂದೆ ಸಾಕಷ್ಟು ವಿಷಯಗಳನ್ನು ಮಾತಾಡಿಕೊಳ್ಳುತ್ತಿದ್ದಾರೆ. ವಿನಯ್ ಟೀಂನಲ್ಲಿ ಸಮಸ್ಯೆ ಆದರೆ ಸಂಗೀತಾ ಅವರಿಗೆ ಯಾವ ತಂಡದಲ್ಲಿಯೂ ಜಾಗ ಇರೋದಿಲ್ಲ. ಬಿಗ್ ಬಾಸ್' ಶೋನಲ್ಲಿ ಕಾರ್ತಿಕ್, ತನಿಷಾ ಜೊತೆ ಮನಸ್ತಾಪ ಮಾಡಿಕೊಂಡು ಸಂಗೀತಾ ಅವರು ವಿನಯ್ ತಂಡವನ್ನು ಸೇರಿಕೊಂಡಿದ್ದಾರೆ. 

ವಿನಯ್ ತಂಡದ ಮುಂದೆ ಕಾರ್ತಿಕ್, ತನಿಷಾ ಬಗ್ಗೆ ಸಂಗೀತಾ ಅವರು ಚಾಡಿ ಹೇಳುತ್ತಿದ್ದಾರೆ. ಆದರೆ ವಿನಯ್, ಸ್ನೇಹಿತ್, ನಮ್ರತಾ ಗೌಡ ಅವರು ನನ್ನ ಬೆನ್ನ ಹಿಂದೆ ಚೂರಿ ಹಾಕ್ತಿರೋದು ಸಂಗೀತಾಗೆ ಅರ್ಥ ಆಗ್ತಿಲ್ಲ.
ಇಷ್ಟು ವಾರಗಳ ಕಾಲ ಸಂಗೀತಾ, ಕಾರ್ತಿಕ್ ಮಧ್ಯೆ ಒಂದಷ್ಟು ಆತ್ಮೀಯತೆ, ಬಾಡಿಂಗ್ ಇತ್ತು. ಈಗ ಇವರಿಬ್ಬರು ಕಿತ್ತಾಡಿಕೊಳ್ಳುತ್ತಿರಬಹುದು. 

ಪ್ರತಿ ಸಲ ಮನಸ್ತಾಪ ಆದಾಗ ತಪ್ಪು ಯಾರದ್ದೇ ಆಗಿರಲಿ, ಸಂಗೀತಾ ಅವರನ್ನು ಕಾರ್ತಿಕ್ ಅವರೇ ಕ್ಷಮೆ ಕೇಳಿ ಸಮಾಧಾನ ಮಾಡುತ್ತಿದ್ದರು. ಇದೀಗ ಸಂಗೀತಾಗೆ ಕಾಡುತ್ತಿದೆ. ಸಂಗೀತಾ ಎಲ್ಲೋ ಒಂದು ಕಡೆ ಕಾರ್ತಿಕ್ ಅವರನ್ನು ಮಿಸ್ ಮಾಡಿಕೊಳ್ತಿದ್ದಾರೆ ಅಂತ ವಿನಯ್, ಸ್ನೇಹಿತ್, ನಮ್ರತಾ ಮಾತಾಡಿಕೊಂಡಿದ್ದಾರೆ.  <a href=https://youtube.com/embed/dzR-YvZzdqo?autoplay=1&mute=1><img src=https://img.youtube.com/vi/dzR-YvZzdqo/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಸಂಗೀತಾಗೆ ಆ ಟೀಂ ಜೊತೆ ಚೆನ್ನಾಗಿರಬೇಕು, ಅವರ ಜೊತೆ ಮಿಂಗಲ್ ಆಗಿರಬೇಕು ಅಂತಿದೆ, ನಾವು ಸಾಂತ್ವನ ಹೇಳೋಕೆ ಇರೋದಾ? ಅಂತೆಲ್ಲ ವಿನಯ್ ಗೌಡ ಹೇಳಿದ್ದಾರೆ. ಆಗ ನಮ್ರತಾ ಅವರು, ಸಂಗೀತಾನೇ ನನ್ನ ಹತ್ತಿರ ಕಾರ್ತಿಕ್ ಜೊತೆಗಿನ ಬಾಂಡಿಂಗ್ ಮಿಸ್ ಮಾಡಿಕೊಳ್ತೀದೀನಿ, ಆದರೆ ಮತ್ತೆ ಹೋಗಲ್ಲ ಅಂತ ಅವರು ಹೇಳಿದ್ರು. ಇದೀಗ ಸಂಗೀತಾ ವಿನಯ್ ಟೀಮ್ ಕೂಡ ಬಿಡುವ ಮಾತಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.