ಸಂತೋಷ್ ರಾವ್ ಮನೆಗೆ ಹೊಸ ರೂಪ, ಕಣ್ಣೀರು ತರಿಸುತ್ತೆ ಮನೆ ಸ್ಥಿತಿ
ನಿರಪರಾಧಿ ಗೆ ಬದುಕು ಕಟ್ಟಿಕೊಡುವ ಕೆಲಸ ನಡೆದಿದೆ. ಹೌದು ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನಿರ್ದೋಷಿ ಎಂದು ಸಿಬಿಐ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಕಾರ್ಕಳದ ಸಂತೋಷ್ ರಾವ್ ಮನೆಯನ್ನು ಸೌಜನ್ಯಪರ ಹೋರಾಟಗಾರರ ತಂಡವೇ ಖುದ್ದು ಮುತುವರ್ಜಿ ವಹಿಸಿ, ಅವರ ಮನೆಯನ್ನು ಬೆಳಗಿಸಿದ ಮಾನವೀಯ ಕಾರ್ಯ ನಡೆದಿದೆ.
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್ ಮತ್ತು ಸಮಾನ ಮನಸ್ಕರ ತಂಡ ಕಳೆದ ಮೂರು ದಿನಗಳಿಂದ ಸಂತೋಷ್ ರಾವ್ ಮನೆಯ ಧೂಳು ತೆಗೆಸಿ, ಸುಣ್ಣ-ಬಣ್ಣ ಬಳಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಅಲ್ಲದೇ, ನಿವೃತ್ತ ಶಿಕ್ಷಕರಾಗಿರುವ, ಸಂತೋಷ್ ರಾವ್ ತಂದೆ ಸುಧಾಕರ ರಾವ್ ಅವರಿಗೆ ಕ್ಷೌರ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಗುರುವಂದನಾ ಕಾರ್ಯಕ್ರಮ ಮಾಡಿದ್ದಾರೆ. ಬಳಿಕ ಮನೆಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಮತ್ತೆ ಮನೆಗೆ ಹೊಸ ಕಳೆಯನ್ನು ನೀಡಲು ಶ್ರಮಿಸಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿಸಲ್ಪಟ್ಟ ಬಳಿಕ, ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರಿನಲ್ಲಿರುವ ಸಂತೋಷ್ ರಾವ್ ಮನೆಯವರ ಕಡೆ ಸಂಬಂಧಿಕರೂ ಸೇರಿದಂತೆ ಗ್ರಾಮಸ್ಥರು ಕಾಲಿಡುತ್ತಿರಲಿಲ್ಲ. ಅಲ್ಲದೇ, ಮಗನ ಕೊರಗಿನಲ್ಲೇ ಸಂತೋಷ್ ತಾಯಿ ಕೂಡ 2016ರಲ್ಲಿ ನಿಧನ ಹೊಂದಿದ್ದರು. ತಾಯಿ ಹೋದ ನಂತರ ಸಂತೋಷ್ ಮನೆಯ ಧೂಳು ಹೊಡೆದು ವರ್ಷಗಳೇ ಸಂದಿತ್ತು. ಮನೆಯ ಕೋಣೆಗಳ ಗೋಡೆಗಳಲ್ಲೆಲ್ಲ ಹುತ್ತ ಬೆಳೆದಿದ್ದವು. ಸಂತೋಷ್ ರಾವ್ ತಂದೆ ಸುಧಾಕರ ರಾವ್ 38 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು. ಸಂತೋಷ್ ಮನೆಯ ಪರಿಸ್ಥಿತಿ ನಿಜಕ್ಕೂ ಬಹಳ ಕೆಟ್ಟದಾಗಿತ್ತು.
ಜ್ಯೋತಿ ಬೆಳಗಿಸಿದ ಬಳಿಕ ಮಾತನಾಡಿದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ‘ವ್ಯವಸ್ಥಿತ ಷಡ್ಯಂತ್ರದ ಮೂಲಕ ನಿಮ್ಮ ಮಗನನ್ನು ಸೌಜನ್ಯ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅದು ಆಗಬಾರದಿತ್ತು. ಒಂದಲ್ಲ ಒಂದು ದಿನ ಎಲ್ಲ ಸತ್ಯ ಹೊರಬರಲಿದೆ. ಅಮಾಯಕನಾಗಿರುವ ನಿಮ್ಮ ಮಗನಿಗೆ ಸರ್ಕಾರದಿಂದ ಪರಿಹಾರ ದೊರಕಿಸಲು ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ಇನ್ನು ಇದನ್ನೆಲ್ಲ ನೋಡಿ ಆ ಒಂದು ಪ್ರಕರಣದಿಂದ ನನ್ನ ಮಗನ ಹಾಗೂ ಈ ಮನೆಯೇ ಹಾಳಾಯ್ತು ಎಂದು ಕಣ್ಣೀರಿಡುತ್ತ ನುಡಿದ್ದಾರೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.