ಶಿವಕುಮಾರ್ ನಮ್ಮ ಚಿಕ್ಕಪ್ಪನ ಮಗ, ನಮಗೆ ಒಂದು ರೂಪಾಯಿ ಸಹಾಯ ಮಾಡಿಲ್ಲ

 
Jz
ಆರ್‌ಸಿಬಿ ಕ್ರಿಕೆಟ್ ಮ್ಯಾಚ್‌ ಗೆದ್ದ ಸಂಭ್ರಮಾಚರಣೆ ಕಾರ್ಯಕ್ರಮ ಕ್ಷಣಮಾತ್ರದಲ್ಲಿ ಸೂತಕದ ಚಾಯೆಗೆ ಕಾರಣವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ 11 ಜನರ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ.ಈ ದುರಂತಕ್ಕೆ ಯಾರು ಕಾರಣ ಎಂದು ಅವರು ಪ್ರಶ್ನಿಸುತ್ತಿದ್ದಾರೆ. ವಿಜಯೋತ್ಸವ ಆಚರಣೆಗೆ ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸುತ್ತಿದ್ದಾರೆ.
ಕಾಲ್ತುಳಿತದಲ್ಲಿ ದಿವ್ಯಾಂಶಿ ಎಂಬ ಮಗಳನ್ನು ಕಳೆದುಕೊಂಡ ಅಶ್ವಿನಿ ಯು.ಎಲ್, "ಈ ಕಾರ್ಯಕ್ರಮ ಬೇಕಿತ್ತಾ? ಇಡೀ ನಗರವು ರಾತ್ರಿಯಿಡೀ ಸಂಭ್ರಮಿಸಿದಾಗ, ಜೂನ್ 4 ರಂದು ವಿಧಾನಸೌಧದ ಮುಂದೆ ಸನ್ಮಾನ ಸಮಾರಂಭ ಮತ್ತು ಕ್ರೀಡಾಂಗಣದಲ್ಲಿ ವಿಜಯೋತ್ಸವ ಏಕೆ ಬೇಕಿತ್ತು? ಅಭಿಮಾನಿಗಳನ್ನು ಆಹ್ವಾನಿಸುವ ಮೊದಲು ಅಧಿಕಾರಿಗಳು ವ್ಯವಸ್ಥೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಇನ್ನು ಹಿರಿಯರೊಬ್ಬರು ನನಗೆ ಡಿಕೆ ಶಿವಕುಮಾರ್ ಅತಿ ಹತ್ತಿರದ ಸಂಬಂಧಿ ಆದ್ರೂ ಕೂಡ ಒಂದು ಸಹಾಯ ಮಾಡಿಲ್ಲ. ಈ ಸರ್ಕಾರದವರು ಹಾಗೆಯೇ ಜನರಿಗೇ ಏನೂ ಮಾಡಲ್ಲ ಎಂದು ಕಿಡಿ ಕಾರಿದ್ದಾರೆ. ಕಾಲ್ತುಳಿತದಲ್ಲಿ ಮೃತಪಟ್ಟ ಇತರ 10 ಜನರ ಕುಟುಂಬಗಳೂ ಇದೇ ಪ್ರಶ್ನೆಗಳನ್ನು ಕೇಳುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸರನ್ನು ದೂಷಿಸಿದ್ದಾರೆ. ವಿಧಾನಸೌಧದ ಮುಂದೆ ನಡೆದ ಸನ್ಮಾನ ಸಮಾರಂಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ. ಆದರೆ, ಕುಟುಂಬಗಳು ಇದನ್ನು ಒಪ್ಪುತ್ತಿಲ್ಲ.  <a href=https://youtube.com/embed/tV-39XGNi5I?autoplay=1&mute=1><img src=https://img.youtube.com/vi/tV-39XGNi5I/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ವಿಧಾನಸೌಧದ ಬಳಿಯೇ ಕ್ರೀಡಾಂಗಣವಿದೆ. ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಾರೆಂದು ಅವರಿಗೆ ತಿಳಿದಿರಲಿಲ್ಲವೇ? ಯಾವುದೇ ವಿಐಪಿ ಅಥವಾ ಅವರ ಮಕ್ಕಳು ಕಾಲ್ತುಳಿತದಲ್ಲಿ ಸಿಲುಕಲಿಲ್ಲ ಏಕೆ ಎಂದು ಕುಟುಂಬ ಸದಸ್ಯರು ಪ್ರಶ್ನಿಸಿದ್ದಾರೆ. ನಾನು ನನ್ನ ಮಗಳೊಂದಿಗೆ ಎಂ.ಜಿ. ರಸ್ತೆಯವರೆಗೆ ರಾತ್ರಿಯಿಡೀ ಸಂಭ್ರಮದಲ್ಲಿ ಭಾಗವಹಿಸಿದ್ದೆ. ಲಕ್ಷಾಂತರ ಜನರು ಬೀದಿಗಿಳಿದರೂ ಯಾವುದೇ ಸಾವು ಸಂಭವಿಸಲಿಲ್ಲ. 
ಆದರೆ, ಮರುದಿನ ಆರ್‌ಸಿಬಿ ಆಟಗಾರರು ತೆರೆದ ಬಸ್‌ನಲ್ಲಿ ಬರುತ್ತಿರುವ ಸುದ್ದಿ ನೋಡಿದ ನನ್ನ ಮಗಳು ಶಾಲೆಗೆ ಹೋಗಲು ತಯಾರಾಗುತ್ತಿದ್ದಳು. ಅವಳನ್ನು ನಿರಾಸೆಗೊಳಿಸಲು ಇಷ್ಟವಿಲ್ಲದ ಕಾರಣ ನಾನು ಆ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದೆ. ನಾವು ಗೇಟ್ ನಂ. 12 ರ ಬಳಿ ಕಾದು ನಿಂತಿದ್ದೆವು. ಗೇಟ್ ನಂ. 15 ರ ಮೂಲಕ ಉಚಿತ ಪ್ರವೇಶವಿದೆ ಎಂದು ಘೋಷಿಸಿದರು. ಎಲ್ಲರೂ ಒಮ್ಮೆಲೆ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿತು ಎಂದು ಹಿಡಿ ಶಾಪ ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.