ಡಿ ಬಾಸ್ ಮಾತಿಗೆ ಎದ್ದು ಬಿದ್ದು ನೆಗಾಡಿದ ಶಿವಣ್ಣ, ಪಕ್ಕದಲ್ಲಿದ್ದ ನಟರು ಶಾಕ್
ಕಾವೇರಿ ನೀರಿಗಾಗಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕನ್ನಡ ಪರ ಹೋರಾಟಗಾರರು, ರೈತರು ಪ್ರತಿಭಟನೆ ನಡೆಸಿದ್ದಾರೆ. ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಇವತ್ತು ಕನ್ನಡ ಚಿತ್ರೋದ್ಯಮ ಕೂಡ ಬೆಂಬಲ ಕೊಟ್ಟಿತ್ತು.
ಕನ್ನಡ ಫಿಲಂ ಚೇಂಬರ್ ಆಯೋಜಿಸಿದ್ದ ಕಾವೇರಿ ಪ್ರತಿಭಟನೆಯಲ್ಲಿ ಸ್ಯಾಂಡಲ್‌ವುಡ್‌ನ ಬಹಳಷ್ಟು ಕಲಾವಿದರು ಭಾಗಿಯಾಗಿದ್ದರು.ಕಾವೇರಿ ನಮ್ಮದು. ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದನ್ನ ನಿಲ್ಲಿಸಲು ಕನ್ನಡಿಗರು ರೋಡಿಗಿಳಿದಿದ್ರು. ಈ ಹೋರಾಟದ ಭಾಗವಾಗಿ ಕನ್ನಡ ಚಿತ್ರರಂಗದ ಹಲವು ನಟ, ನಟಿಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಹೋರಾಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಕಲಾವಿದರು, ಕಾವೇರಿ ಸಮಸ್ಯೆ ಬಗೆಹರಿಯಬೇಕು. ಕರ್ನಾಟಕಕ್ಕೆ ಅನ್ಯಾಯವಾಗಬಾರದು. ರೈತರ ಪರವಾಗಿ ನಾವಿದ್ದೇವೆ ಎಂದು ಬೆಂಬಲ ಘೋಷಿಸಿದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಕನ್ನಡ ಚಿತ್ರೋದ್ಯಮ ಈ ಪ್ರತಿಭಟನೆ ಹಮ್ಮಿಕೊಂಡಿತ್ತು. ಕಾವೇರಿ ಹೋರಾಟಕ್ಕೆ ಆಗಮಿಸಿದ ನಟ ದರ್ಶನ್ ವೇದಿಕೆಯಲ್ಲಿ ಭಾಗಿಯಾಗಿ ತಮ್ಮ ಬೆಂಬಲ ಸೂಚಿಸಿದರು.
ಇದೇ ವೇಳೆ ಭಾಷಣ ಮಾಡಲು ಆಹ್ವಾನಿಸಿದಾಗ ನಾವು ಆಗಲೇ ಮಾತಾಡಿ ಆಗಿದೆ. ಮತ್ತೆ ಮಾತಾಡೋದು ಬೇಡ.
ದೊಡ್ಡೋರು ಇದ್ದಾರೆ ಶಿವಣ್ಣ ಅವರು ಮಾತಾಡ್ತಾರೆ ಅಂತಾ ಹೇಳ್ತೀನಿ ಎಂದಷ್ಟೇ ಹೇಳಿದರು. ಇನ್ನು ಅಕ್ಕಪಕ್ಕದಲ್ಲಿ ಕುಳಿತಿದ್ದ ದರ್ಶನ್ ಹಾಗೂ ಶಿವಣ್ಣ ಬಹಳಷ್ಟು ಹೊತ್ತು ಸಿನಿ ರಂಗದ ಬಗ್ಗೆ ,ಕಾವೇರಿ ವಿವಾದದ ಬಗ್ಗೆ ಮಾತನಾಡಿದರು.
ಇನ್ನು ಕಾವೇರಿ ವಿವಾದ ಆರಂಭ ಆಗುತ್ತಿದ್ದಂತೆ ಸ್ಯಾಂಡಲ್‌ವುಡ್ ತಾರೆಯರ ಮೇಲೆ ಆಕ್ರೋಶ ವ್ಯಕ್ತವಾಗಿತ್ತು. ಕಾವೇರಿ ವಿವಾದದ ಬಗ್ಗೆ ಸೂಪರ್ ಸ್ಟಾರ್‌ಗಳು ಯಾಕೆ ಧ್ವನಿ ಎತ್ತಿಲ್ಲ ಅಂತ ಆಕ್ರೋಶ ವ್ಯಕ್ತವಾಗಿತ್ತು. ಹೋರಾಟದಲ್ಲಿ ಭಾಗಿಯಾಗಿದ್ದ ದರ್ಶನ್ ಕಲಾವಿದರ ಬಗ್ಗೆ ಮಾತಾಡಿದವರಿಗೆ ದರ್ಶನ್ ತಿರುಗೇಟು ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.