ವಿಪರೀತ ಕುಡಿತದ ಚಟ ಇದೆ, ಸಂದರ್ಶನದಲ್ಲಿ ಶಿವಣ್ಣ ಓಪನ್‌ ಟಾಕ್

 

ಹ್ಯಾಟ್ರಿಕ್‌ ಹೀರೋ  ಶಿವರಾಜ್‌ಕುಮಾರ್‌ ಅವರಿಗೆ ಈಗ 62 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ ಫಿಟ್‌ ಆಗಿದ್ದು, ನಾಯಕ ನಟನಾಗಿಯೇ ಮುಂದುವರೆಯುತ್ತಿದ್ದಾರೆ. ಸದ್ಯ ಶಿವರಾ‌ಜ್‌ ಕುಮಾರ್‌ ಇದೇ 15ರಂದು ತೆರೆಕಾಣಲಿರುವ ಭೈರತಿ ರಣಗಲ್‌ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇದೇ ವೇಳೆ, ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಅಭಿಮಾನಿಗಳು ಆತಂಕದಲ್ಲಿದ್ದಾರೆ.

ತಾವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಈಗಾಗಲೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಕನ್‌ಫರ್ಮ್ ಮಾಡಿರುವ ಶಿವರಾಜ್‌ ಕುಮಾರ್‌ ಅವರು,  ನನಗೆ ಅನಾರೋಗ್ಯ ಸಮಸ್ಯೆ ಇರುವಂಥದ್ದು ಮುಚ್ಚಿಡುವ ವಿಷಯ ಏನೂ ಅಲ್ಲ. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಹಲವು ಹಂತಗಳಲ್ಲಿ ಚಿಕಿತ್ಸೆ ನಡೆಯಲಿದೆ.  ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ. <a href=https://youtube.com/embed/ol5x5ijj7hU?autoplay=1&mute=1><img src=https://img.youtube.com/vi/ol5x5ijj7hU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇನ್ನು ಇದರ ನಡುವೆಯೇ,  ಈ ವಯಸ್ಸಿನಲ್ಲಿಯೂ ಸಕತ್‌ ಡಾನ್ಸ್‌ ಮಾಡುತ್ತಲೇ ಹಲವಾರು ಕಾರ್ಯಕ್ರಮಗಳಲ್ಲಿ ಜೋಶ್‌ನಿಂದ ತೊಡಗಿಕೊಳ್ಳುವ ಬಗ್ಗೆ ಹಲವರಿಗೆ ಕೆಲವು ಪ್ರಶ್ನೆಗಳು ಕಾಡುತ್ತಲೇ ಇವೆ. ಶಿವಣ್ಣ ಅವರು ಡ್ರಿಂಕ್ಸ್‌ ಮಾಡುತ್ತಾರೆ ಎಂದೂ  ಕೆಲವರು ಹೇಳುವುದು ಇದೆ. ಈಗ ಅದೇ ಪ್ರಶ್ನೆಯನ್ನು ಕೀರ್ತಿ ನಾರಾಯಣ್‌ ಅವರು ಶಿವರಾಜ್‌ ಕುಮಾರ್‌ ಮುಂದೆ ಇಟ್ಟಿದ್ದಾರೆ.

ಶಿವಣ್ಣ ಇಷ್ಟೊಂದು ಎನರ್ಜಿ ಮೆಂಟೇನ್‌ ಮಾಡಲು ಅವರು ಸಿಕ್ಕಾಪಟ್ಟೆ ಕುಡಿಯೋದೇ ಕಾರಣ ಎಂದು ಕೆಲವರು ಹೇಳುತ್ತಾರೆ. ಇದಕ್ಕೆ ನೀವೇನೆನ್ನುತ್ತೀರಿ, ನಿಮ್ಮ ಮಿಕ್ಸಿಂಗ್‌ ರೇಷಿಯೋ ಏನು ಎಂದು ಕೀರ್ತಿ ಅವರು ಕೇಳಿದಾಗ, ಶಿವರಾಜ್‌ ಕುಮಾರ್‌ ಸೀರಿಯಸ್‌ ಆಗಿಯೇ ಉತ್ತರ ಕೊಟ್ಟರು.ಅವರು ಹೇಳಿದ್ದು ಏನೆಂದ್ರೆ, ನಾನು ದೊಡ್ಡ ಕುಡುಕ. ಎಷ್ಟು ದೊಡ್ಡ ಎಂದರೆ ನನ್ನನ್ನು ಕಂಟ್ರೋಲ್‌ ಮಾಡಲು ಆಗುವುದಿಲ್ಲ. 

ಒಂದಿಷ್ಟು ಡಿಕಾಕ್ಷನ್‌ ಹಾಕ್ತೇನೆ ಎನ್ನುತ್ತ ಕೈಯಲ್ಲಿ ಸ್ವಲ್ಪ ಡಿಕಾಕ್ಷನ್‌ ತೋರಿಸಿದ್ದಾರೆ. ನಂತರ ಮುಕ್ಕಾಲು ಭಾಗ ಹಾಲು ಹಾಕುತ್ತೇನೆ. ಇದು ಡೇಲಿ ಮಾಡುತ್ತೇನೆ. ಬೆಳಿಗ್ಗೆನೂ ಕುಡೀತೇನೆ, ವಾಕಿಂಗ್‌ನಿಂದ ಬಂದಮೇಲೂ ಕುಡೀತೇನೆ. ಸ್ನಾನ ಮಾಡಿಕೊಂಡು ಬಂದು ಶೂಟಿಂಗ್‌ ಇಲ್ಲ ಎಂದ್ರೆ ಇನ್ನೊಂದು ಸ್ವಲ್ಪ ಕುಡಿಯುತ್ತೇನೆ. ಹೀಗೆ ದಿನಪೂರ್ತಿ ಕುಡೀತಾನೇ ಇರುತ್ತೇನೆ ಎಂದು ತಮಾಷೆ ಮಾಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.