ಮಗಳಿಗೆ ಒಳ್ಳೆಯ ವರ ಸಿಗಲಿ ಎಂದು ಭಾರತದ ದೇವಾಲಯ ಸುತ್ತಾಡುತ್ತಿರುವ ಶ್ರುತಿ ಹಾಗೂ ‌ಮಗಳು

 

ಇತ್ತೀಚಿಗಷ್ಟೇ ಕನ್ನಡ ಸಿನಿಮಾದ ಹಿರಿಯ ನಟಿ ಶ್ರುತಿ ಮತ್ತು ಅವರ ಮಗಳು ಗೌರಿ ಶ್ರುತಿ ತಿರುಪತಿಗೆ ತೆರಳಿ ತಿಮ್ಮನ ದರ್ಶನ ಪಡೆದು ಬಂದಿದ್ದು, ಗೌರಿ ಸುಂದರ ಕ್ಷಣಗಳ ಫೋಟೋ ಹಂಚಿಕೊಂಡಿದ್ದಾರೆ. ಹೌದು ಕನ್ನಡ ಸಿನಿಮಾ ರಂಗದ ಜನಪ್ರಿಯ ನಟಿ ಶ್ರುತಿ ಮತ್ತು ಅವರ ಮಗಳು ಗೌರಿ ಶ್ರುತಿ ಇತ್ತೀಚೆಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದಾರೆ .

ಅಲ್ಲಿನ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ತಿರುಪತಿ ತಿಮ್ಮಪ್ಪನ ದೇಗುಲದ ಮುಂದೆ ಅಮ್ಮ ಮಗಳು ಜೊತೆಯಾಗಿ ಬಿಳಿ ಬಣ್ಣದ ಸೀರೆಯುಟ್ಟು ತೆಗೆದಿರುವ ಫೋಟೋಗಳು, ಗೌರಿ ಒಬ್ಬರೇ ನಿಂತಿರುವ ಫೋಟೋಗಳು ಮತ್ತು ದೇಗುಲದ ಒಂದಷ್ಟು ಫೋಟೋಗಳನ್ನು ಗೌರಿ ಹಂಚಿಕೊಂಡಿದ್ದಾರೆ.  

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಗೌರಿ ಹೆಚ್ಚಾಗಿ ತಮ್ಮ ಫ್ಯಾಮಿಲಿ ಫೋಟೋ, ದೇಗುಲ ದರ್ಶನ ಮತ್ತು ಟ್ರಾವೆಲ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ, ಜೊತೆಗೆ ತಮ್ಮ ಹಾಡಿನ ವಿಡೀಯೋಗಳನ್ನು ಸಹ ಹಂಚಿಕೊಳ್ಳುತ್ತಾರೆ.ಹೆಚ್ಚಾಗಿ ದೇಗುಲಗಳಿಗೆ ಭೇಟಿ ನೀಡುತ್ತಾ, ದೇವರ ದರ್ಶನಕ್ಕೆ ಹೋಗುವಾಗಲೆಲ್ಲಾ ಸೀರೆ, ಲಂಗ ದಾವಣಿ ಹಾಕಿ, ತಲೆತುಂಬಾ ಹೂವು ಮುಡಿಯುವ ಗೌರಿ ಅಂದ್ರೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ.

 ಇನ್ನು ಸಿನಿಮಾಕ್ಕೆ ಬಾರದೇ ಇದ್ದರೂ ಸಹ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ ಗೌರಿ. ಈಗಷ್ಟೇ ಡಿಗ್ರಿ ಮುಗಿಸಿರುವ ಗೌರಿ, ನಟನೆಗಿಂತ ಹೆಚ್ಚಾಗಿ ಸಂಗೀತದ ಕಡೆಗೆ ಹೆಚ್ಚಿನ ಒಲವು ತೋರಿಸಿದ್ದಾರೆ. ಹೆಚ್ಚಾಗಿ ಸಿನಿಮಾದ ಹಾಡುಗಳು, ದೇವರ ನಾಮ ಸಂಕೀರ್ತನೆ, ಇಂಗ್ಲಿಷ್ ಹಾಡುಗಳನ್ನು ಮಧುರವಾಗಿ ಹಾಡುವ ಮೂಲಕ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದಾರೆ ಗೌರಿ.