ಸಿಲ್ಕ್ ಸ್ಮಿತಾ ಕಚ್ಚಿದ ಸೇಬು, ಹರಾಜಾಗಿದ್ದು ಎಷ್ಟು ಕೋಟಿಗೆ ಗೊ ತ್ತಾ
Sep 17, 2024, 15:56 IST
ಸಿಲ್ಕ್ ಸ್ಮಿತಾ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.ಎಂಭತ್ತರ ದಶಕದಲ್ಲಿ ಎಲ್ಲರ ಎದೆಯಲ್ಲಿ ಮಿಂಚು ಹರಿಸಿದ್ದ ನಟಿ ಸಿಲ್ಕ್ ಸ್ಮಿತ ಯಾರಿಗೆ ಗೊತ್ತಿಲ್ಲ ಹೇಳಿ. ಬದುಕಿದ ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಪೋರಿ ಈ ನಟಿ. ಅಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಕಂಡು ಕೊಂಡ ನಟಿ ಎಂದರೆ ಸಿಲ್ಕ್‌ಸ್ಮಿತ ಎಂದರೆ ಅತಿಶಯೋಕ್ತಿಯಾಗಲಾರದು.
ಹೌದು ಸಿಲ್ಕ್ ಸ್ಮಿತಾ, 90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ ಹಾಟ್ ಬ್ಯೂಟಿ. ಮೂಲತ: ಆಂಧ್ರಪ್ರದೇಶಕ್ಕೆ ಸೇರಿದ ಈ ತೆಲುಗು ಪಿಲ್ಲ ನಂತರ ತೆಲುಗು ಚಿತ್ರರಂಗ ಮಾತ್ರವಲ್ಲದೆ ಕನ್ನಡ, ತಮಿಳು , ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ಕೂಡಾ ನಟಿಸಿ ಹೆಸರು ಮಾಡಿದರು. ಸಿನಿಮಾರಂಗದಲ್ಲಿ ಹಣ ಹೆಸರು ಸಂಪಾದಿಸಿದರೂ ವೈಯಕ್ತಿಕ ಜೀವನದಲ್ಲಿ ಕಷ್ಟಗಳು ಇವರನ್ನು ಬೆಂಬಿಡದೆ ಕಾಡಿತ್ತು.
23 ಸೆಪ್ಟೆಂಬರ್ 1996ರಲ್ಲಿ ಸಿಲ್ಕ್ ಸ್ಮಿತಾ ತಮ್ಮ 35ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡರು. ಚಿತ್ರರಂಗದಲ್ಲಿ ಇರುವಷ್ಟು ದಿನ ಸಿಲ್ಕ್ ಸ್ಮಿತಾ ಅಲಿಯಾಸ್ ವಿಜಯಲಕ್ಷ್ಮಿ ಹೀರೋ ಹೀರೋಯಿನ್‌ಗಿಂತಲೂ ಹೆಚ್ಚು ಕ್ರೇಜ್ ಸಂಪಾದಿಸಿದ್ದರು. ಯಾವ ಸಿನಿಮಾದಲ್ಲಾದರೂ ಸರಿ ಸಿಲ್ಕ್ ಸ್ಮಿತಾ ಇದ್ದಲ್ಲಿ ಆ ಸಿನಿಮಾ ಖಂಡಿತ ಸೂಪರ್ ಹಿಟ್ ಎಂದು ಚಿತ್ರರಂಗದ ಮಂದಿ ನಂಬಿದ್ದರು. ಸಿನಿಮಾದಲ್ಲಿ ಪಟ ಪಟ ಡೈಲಾಗ್ ಹೇಳಿದರೂ ನಿಜ ಜೀವನದಲ್ಲಿ ಮಾತ್ರ ಆಕೆ ಬಹಳ ಮೌನಿ. ಯಾರೊಂದಿಗೂ ಹೆಚ್ಚು ಸೇರುತ್ತಿರಲಿಲ್ಲ. ಆದರೆ ಒಮ್ಮೆ ಯಾರನ್ನಾದರೂ ನಂಬಿದರೆ ಅವರಿಗೆ ಪ್ರಾಣವನ್ನೇ ಕೊಡುವಷ್ಟು ಇಷ್ಟಪಡುತ್ತಿದ್ದ ಗುಣ ಅವರದ್ದು.
ಆ ಸಮಯದಲ್ಲಿ ಹುಡುಗರಿಗಂತೂ ಸಿಲ್ಕ್ ಸ್ಮಿತಾ ಬಹಳ ಫೇವರೆಟ್. ಜೀವನದಲ್ಲಿ ಒಮ್ಮೆ ಆಕೆಯನ್ನು ನೋಡಿದರೆ, ಆಕೆಗೆ ಶೇಕ್ ಹ್ಯಾಂಡ್ ಮಾಡಿದರೆ ನಾವೇ ಲಕ್ಕಿ ಎಂದುಕೊಳ್ಳುತ್ತಿದ್ದರು. ಆದರೆ ಆಶ್ಚರ್ಯಕರ ವಿಚಾರವೆಂದರೆ ಸಿಲ್ಕ್ ಸ್ಮಿತಾಗೆ ಮಾತ್ರವಲ್ಲ ಆಕೆ ಕಚ್ಚಿದ ಸೇಬಿಗೂ ಡಿಮ್ಯಾಂಡ್ ಇತ್ತು ಅಂದ್ರೆ ನೀವು ನಂಬ್ತೀರಾ? ಆಕೆ ಕಚ್ಚಿದ ಸೇಬನ್ನು ಹರಾಜು ಮಾಡಲಾಗಿತ್ತಂತೆ.
<a href=https://youtube.com/embed/2cfag_CeZ4s?autoplay=1&mute=1><img src=https://img.youtube.com/vi/2cfag_CeZ4s/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆಕೆಯ ಅಭಿಮಾನಿಯೊಬ್ಬರು ಹರಾಜಿನಲ್ಲಿ ದುಬಾರಿ ಹಣ ಕೊಟ್ಟು ಆ ಸೇಬನ್ನು ಕೊಂಡುಕೊಂಡಿದ್ದರಂತೆ. ಹೀಗೆ ಒಮ್ಮೆ ಶೂಟಿಂಗ್ ಬಿಡುವಿನ ಸಮಯದಲ್ಲಿ ಸಿಲ್ಕ್ ಸ್ಮಿತಾ ಸೇಬು ತಿನ್ನುವಾಗ ನಿರ್ದೇಶಕರು ಶಾಟ್ ರೆಡಿ ಎಂದು ಕರೆದಿದ್ಧಾರೆ. ಸಮಯ ಇಲ್ಲದ್ದರಿಂದ ಸಿಲ್ಕ್ ಸ್ಮಿತಾ, ಅರ್ಧ ಕಚ್ಚಿದ ಸೇಬನ್ನು ಅಲ್ಲೇ ಇಟ್ಟು ಹೋಗಿದ್ದಾರೆ. ಸೆಟ್‌ನಲ್ಲಿದ್ದ ಆಕೆಯ ಕೆಲವು ಅಭಿಮಾನಿಗಳು ಆಕೆ ಕಚ್ಚಿದ ಆಪಲ್ ಪಡೆಯಲು ಜಗಳ ಮಾಡಿದ್ದರಂತೆ. ಕೊನೆಗೆ ಒಬ್ಬಾತ ಬರೋಬ್ಬರಿ 26 ಸಾವಿರ ಕೊಟ್ಟು ಆ ಸೇಬು ಖರೀದಿಸಿದ್ದಾರೆ. ಆಗಿನ ಸಮಯದಲ್ಲೇ ಸಿಲ್ಕ್ ಸ್ಮಿತಾಗೆ ಎಷ್ಟು ಫ್ಯಾನ್ ಫಾಲೋಯಿಂಗ್ ಇತ್ತು ನೀವೇ ಊಹಿಸಬಹುದಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.