ಕೈಯಲ್ಲಿ ದುಡ್ಡಿಲ್ಲದೆ ದಿನಾಲೂ ಬಸ್ ನಿಲ್ದಾಣದಲ್ಲಿ ಮಲಗಬೇಕು, ವೇದಿಕೆಯಲ್ಲಿ ಮೌನ ಮುರಿದ ಸಿಂಗರ್ ಸುನೀಲ್
Apr 18, 2025, 17:50 IST

ಜಗತ್ತಿನಲ್ಲಿ ಎಂತೆಂತಹ ಜನ ಇರುತ್ತಾರೆ ನೋಡಿ. ಜೀವನದುದ್ದಕ್ಕೂ ನಿನ್ನನ್ನು ಕಾಪಾಡುತ್ತೇನೆ ಎಂದು ಸಪ್ತಪದಿ ತುಳಿದು ಶಪಥ ಮಾಡಿದ ಪತಿ, ತನಗೆ ಕ್ಯಾನ್ಸರ್ ಇದೆ ಎಂಬ ಕಾರಣಕ್ಕೆ ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದರೆ ಅದನ್ನು ಬೇಜವಾಬ್ದಾರಿ ಎನ್ನದೇ ಇರಲು ಸಾಧ್ಯವಿಲ್ಲ. ಆದರೆ ಇಂತದ್ದೇ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಸಮೀಪದ ಗಾಜಿಯಾಬಾದ್‌ನ ರಿಯಲ್ ಎಸ್ಟೇಟ್ ಉದ್ಯಮಿಯೋರ್ವ, ತನಗೆ ಕ್ಯಾನ್ಸರ್ ಇದೆ ಎಂದು ತಿಳಿಯುತ್ತಿದ್ದಂತೇ, ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗಾಜಿಯಾಬಾದ್‌ನ ಕುಲ್ದೀಪ್ ತ್ಯಾಗಿ ನನಗೆ ಕ್ಯಾನ್ಸರ್ ಇದ್ದು, ಇದರ ಚಿಕಿತ್ಸೆಗೆ ಅನಗತ್ಯವಾಗಿ ಹಣ ಖರ್ಚು ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದೇನೆ ಡೆತ್ ನೋಟ್‌ನಲ್ಲಿ ತಿಳಿಸಿದ್ದಾರೆ. ಪತ್ನಿಯನ್ನು ಕೊಂದ ಪತಿಯ ಸುದ್ದಿ ಗಾಜಿಯಾಬಾದ್ ನಗರವನ್ನು ತಲ್ಲಣಗೊಳಿಸಿದೆ.
<a href=https://youtube.com/embed/8rYZ-kgkPOk?autoplay=1&mute=1><img src=https://img.youtube.com/vi/8rYZ-kgkPOk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕ್ಯಾನ್ಸರ್ ಚಿಕಿತ್ಸೆಗೆ ಅನಗತ್ಯ ಹಣ ವ್ಯಯಿಸುವುದು ಬೇಡ. ನಾನು ಗುಣಮುಖನಾಗುವ ಬಗ್ಗೆ ಖಚಿತವಿಲ್ಲ. ಹೀಗಾಗಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ ಎಂದು ಕುಲ್ದೀಪ್ ತ್ಯಾಗಿ ಬರೆದಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ನಾನು ಬದುಕು ಮತ್ತು ಸಾವಿನಲ್ಲಿ ಒಟ್ಟಿಗೆ ಇರುವುದಾಗಿ ಪತ್ನಿ ಅಂಶು ತ್ಯಾಗಿಗೆ ಪ್ರಮಾಣ ಮಾಡಿದ್ದೆ. ಆದರೀಗ ನಾನು ಸಾಯುವ ತೀರ್ಮಾನ ಮಾಡಿದ್ದೇನೆ. ಹೀಗಾಗಿ ಆಕೆಯನ್ನೂ ಅನಿವಾರ್ಯವಾಗಿ ಕೊಲೆ ಮಾಡಬೇಕಿದೆ ಎಂಬ ಕುಲ್ದೀಪ್ ತ್ಯಾಗಿ ಅರ ಡೆತ್‌ನೋಟ್ ಎಂತಹವರನ್ನೂ ಒಂದು ಕ್ಷಣ ಬೆಚ್ಚಿ ಬೀಳಿಸದೇ ಇರದು.
ಘಟನೆ ನಡೆದಾಗ ತ್ಯಾಗಿ ದಂಪತಿಯ ಇಬ್ಬರು ಗಂಡು ಮಕ್ಕಳು ಮನೆಯಲ್ಲೇ ಇದ್ದರು. ಗುಂಡಿನ ಸದ್ದು ಕೇಳುತ್ತಿದ್ದಂತೇ ಪೋಷಕರ ಕೋಣೆಗೆ ಧಾವಿಸಿ ಬಂದ ಮಕ್ಕಳು, ಕುಲ್ದೀಪ್ ಅವರ ದೇಹ ನೆಲದ ಮೇಲೆ ಮತ್ತು ಅಂಶು ಅವರ ದೇಹ ಹಾಸಿಗೆಯ ಮೇಲೆ ಬಿದ್ದಿದ್ದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಸಾಗಿಸಿದರಾದರೂ, ವೈದ್ಯರು ಇಬ್ಬರೂ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಮೂಲಗಳು ಖಚಿತಪಡಿಸಿವೆ. ಈ ಭೀಕರ ಘಟನೆ ಮಕ್ಕಳನ್ನು ಬೆಚ್ಚಿ ಬೀಳಿಸಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.