ಒಬ್ಬರನ್ನೊಬ್ಬರು ಬಿಟ್ಟಿರೋಕೆ ಆಗ್ತಾ ಇಲ್ಲ, ಕೊನೆಗೂ ಲವ್ ಸೀಕ್ರೆಟ್ ಬಿಚ್ಚಿಟ್ಟ ಸೀತಾರಾಮ ಜೋಡಿ

 
 ಕಿರುತೆರೆಯಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟಿಯರಲ್ಲಿ ವೈಷ್ಣವಿ ಗೌಡ ಕೂಡ ಒಬ್ಬರು. ಕಳೆದ ಕೆಲವು ವರ್ಷಗಳಿಂದ ವೈಷ್ಣವಿ ಗೌಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.ಸ ಸದ್ಯ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಸೀತಾರಾಮ' ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಸೀತೆಯ ಪಾತ್ರ ಕಿರುತೆರೆ ವೀಕ್ಷಕರಿಗೆ ಇಷ್ಟ ಆಗಿದೆ.
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್‌ ನಾಯಕ, ನಾಯಕಿ ತಮ್ಮ ಕ್ಯೂಟ್‌ನೆಸ್‌ನಿಂದಲೂ ಸಖತ್ ಪಾಪ್ಯುಲರ್‌. ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಈ ಕ್ಯೂಟ್ ಹೀರೋ ಹೀರೋಯಿನ್. ಇವರಿಬ್ಬರ ಕೆಮೆಸ್ಟ್ರಿ ಚೆನ್ನಾಗಿ ವರ್ಕೌಟ್ ಆಗ್ತಾ ಇದೆ. ಇಬ್ರೂ ಈ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದಾರೆ ಅಂತ ಎಲ್ಲರೂ ಕಾಮೆಂಟ್ ಮಾಡ್ತಾರೆ.  ಕೆಲ ದಿನಗಳ ಹಿಂದೆ ಇವರಿಬ್ಬರೂ ಸೇರಿ ರೀಲ್ಸ್​ ಮಾಡಿದ್ದರು. ಇದನ್ನು ನೋಡಿದವರು, ಇವರಿಬ್ಬರ ಮಧ್ಯೆ ಖಂಡಿತಾ ಕುಚ್ ಕುಚ್​ ನಡೆಯುತ್ತಿದೆ ಎಂದಿದ್ದರು.  <a href=https://youtube.com/embed/munpb2wdb4c?autoplay=1&mute=1><img src=https://img.youtube.com/vi/munpb2wdb4c/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಏಕೆಂದ್ರೆ ಇದರಲ್ಲಿ ಇಬ್ಬರೂ ಸಖತ್ ರೊಮ್ಯಾಂಟಿಕ್ ಆಗಿ  ವೀಡಿಯೋ ಮಾಡಿದ್ದರು. ಇವರಿಬ್ಬರೂ ಅವಿವಾಹಿತರಾಗಿರುವ ಹಿನ್ನೆಲೆಯಲ್ಲಿ ಈ ಜೋಡಿಯ ಮದುವೆ ಮಾಡಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ನಂತರ ರೊಮಾಂಟಿಕ್​ ಸಾಂಗ್​ನ ವಿಡಿಯೋ ನೋಡಿದ ಮೇಲಂತೂ  ಮದುವೆ ಆಗ್ಲಿ ಅನ್ನೋ ಫ್ಯಾನ್ಸ್ ಒತ್ತಡ ಮತ್ತಷ್ಟು ಹೆಚ್ಚಾಗಿದೆ.  
ಆದರೆ ಇದೀಗ ಖುದ್ದು ವೈಷ್ಣವಿಯೇ ಗಗನ್​ ಬಳಿ ಮದುವೆ, ಮಕ್ಕಳ ವಿಷಯ ತೆಗೆದಿದ್ದು, ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಎಂದೇ ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಇದೀಗ ತಮ್ಮ ಹೊಸ ವಿಡಿಯೋ ಶೇರ್​ ಮಾಡಿದ್ದಾರೆ ವೈಷ್ಣವಿ. ಇದರಲ್ಲಿ ರ್ಯಾಪಿಡ್​ ರೌಂಡ್​ ಎಂದು ಇಬ್ಬರೂ ರೀಲ್ಸ್​ ಮಾಡಿದ್ದಾರೆ. ನಿಮ್ಮ ಈಗಿನ ಇಷ್ಟದ ಹಾಡು ಯಾವುದು? ಒಂದೆರಡು ಲೈನ್​ ಹೇಳಿ ಎಂದಾಗ, ವೈಷ್ಣವಿ ಮಚಾಲೋ ಮಚಾಲೋ ಹೆಂಗೌಳೆ ನಿಮ್​ ಡವ್​ ಎಂದಿದ್ದಾರೆ.
 ಇಷ್ಟದ ಜಂಕ್​ ಫುಡ್​ ಪಾನೀಪುರಿ ಎಂದಿದ್ದಾರೆ. ನಟಿಯಾಗದೇ ಇದ್ದರೆ ಡಾನ್ಸರ್​ ಆಗುತ್ತಿದ್ದೆ ಎಂದಿದ್ದಾರೆ. ಎಲ್ಲಿಯಾದರೂ ಹೋಗಬೇಕು ಎನ್ನುವುದಾದರೆ ಎಲ್ಲಿಗೆ ಹೋಗುವಿರಿ ಕೇಳಿದ ಪ್ರಶ್ನೆಗೆ ಮಂತ್ರಾಲಯ ಎಂದಿದ್ದಾರೆ. ಇನ್ನು ಬೆಸ್ಟ್ ಫ್ರೆಂಡ್ ಗಗನ್ ಎಂದಿದ್ದಾರೆ. ಅಲ್ಲಿಗೆ ಅವರಿಬ್ಬರ ನಡುವೆ ಸಿಕ್ಕಾಪಟ್ಟೆ ಸಲಿಗೆ ಇದೆ ಅನ್ನೋದು ಅಭಿಮಾನಿಗಳ ಗಮನಕ್ಕೆ ಬಂದಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.