ಮದುವೆ ಮರುದಿನವೇ ಜೈ ಲಿಗೆ ಹೋದ ಸೋನಲ್; ಅಣ್ಣನಿಗೆ ರಾಖಿ ಕಟ್ಟಿ ಖುಷಿ ಪಟ್ಟರು

 
ಎಲ್ಲೆಡೆ 'ರಕ್ಷಾ ಬಂಧನ' ಸಂಭ್ರಮ ಮನೆ ಮಾಡಿದೆ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಹಬ್ಬ ಆಚರಿಸಿ ಶುಭಾಶಯ ಕೋರುತ್ತಿದ್ದಾರೆ. ಇಂತಹ ಸಮಯದಲ್ಲಿ ನಟಿ ಸೋನಲ್ ಮಂಥೆರೋ ತಮ್ಮ ಅಣ್ಣನ ಸಮಾನರಾದ ದರ್ಶನ್ ನೆನೆದು ಭಾವುಕ ಪೋಸ್ಟ್ ಮಾಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ 2 ತಿಂಗಳು ಕಳೆದಿದೆ. ಆಗಸ್ಟ್ 28ರವರೆಗೆ ಪ್ರಕರಣದ ಎಲ್ಲಾ ಆರೋಪಿಗಳಿಗೆ ನ್ಯಾಯಾಂಗ ಬಂಧನ ಮುಂದುವರೆದಿದೆ. ಇತ್ತೀಚಿನ ವರ್ಷಗಳಲ್ಲಿ ದರ್ಶನ್ ಅವರಿಗೆ ರಾಖಿ ಕಟ್ಟಿ ಸೋನಲ್ ರಕ್ಷಾ ಬಂಧನ ಹಬ್ಬ ಆಚರಿಸುತ್ತಿದ್ದರು. ಸಾಕಷ್ಟು ಜನ ಮಹಿಳಾ ಅಭಿಮಾನಿಗಳು ದರ್ಶನ್ ಮನೆಗೆ ಭೇಟಿ ನೀಡಿ ರಾಖಿ ಕಟ್ಟುತ್ತಿದ್ದರು. ಆದರೆ ಈ ಬಾರಿ ಎಲ್ಲದ್ದಕ್ಕೂ ಬ್ರೇಕ್ ಬಿದ್ದಿದೆ. <a href=https://youtube.com/embed/St2b_CZ8V7w?autoplay=1&mute=1><img src=https://img.youtube.com/vi/St2b_CZ8V7w/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಸೋನಲ್ ಹಾಗೂ ದರ್ಶನ್ ನಡುವೆ ಉತ್ತಮ ಒಡನಾಟವಿದೆ. ಸದಾ ಅಣ್ಣಾ ಎಂದು ಬಾಯಿತುಂಬಾ ಕರೆಯುತ್ತಾರೆ. ಆದರೆ ಇತ್ತೀಚೆಗೆ ನಡೆದ ಸೋನಲ್ ಹಾಗೂ ತರುಣ್ ಸುಧೀರ್ ಮದುವೆ ಸಮಾರಂಭದಲ್ಲಿ ಕೂಡ ದರ್ಶನ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ತರುಣ್ ಹಾಗೂ ದರ್ಶನ್ ಸ್ನೇಹ ಕೂಡ ಬಹಳ ಹಳೆಯದು. ಹೀಗೆ ಬಹಳ ಆಪ್ತರಾದ ಜೋಡಿಯ ಮದುವೆಗೆ ದರ್ಶನ್ ಭಾಗಿ ಆಗಲು ಸಾಧ್ಯವಾಗಲಿಲ್ಲ.
ಕಳೆದ ವರ್ಷ ದರ್ಶನ್‌ಗೆ ಸೋನಲ್ ರಾಖಿ ಕಟ್ಟಿದ್ದ ವೀಡಿಯೋ ಬಹಳ ವೈರಲ್ ಆಗಿತ್ತು. ಇನ್ನು ಈ ಬಾರಿ ರಕ್ಷಾ ಬಂಧನದ ದಿನ ದರ್ಶನ್ ನೆನೆನು ಸೋನಲ್ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ. ಈ ವಿಶೇಷ ದಿನದಂದು ನಾವು ಒಟ್ಟಿಗೆ ಇಲ್ಲದಿದ್ದರೂ, ನಮ್ಮ ಬಾಂಧವ್ಯ ಎಂದಿಗೂ ಮರೆಯಾಗುವುದಿಲ್ಲ. ನಾವು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಇನ್ನು ಸದಾ ಪ್ರೀತಿಸುತ್ತೇವೆ ಅಣ್ಣ. ರಕ್ಷಾಬಂಧನದ ಶುಭಾಶಯಗಳು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.