ಸೌಜನ್ಯ ಕೇಸ್ ಗೆ ಮತ್ತೆ ಮರುಜೀವ? ಸಿಎಂ ಸಿದ್ದರಾಮಯ್ಯ ಖಡಕ್ ವಾನಿ೯ಂಗ್

 

 ವಿದ್ಯೆ ಕಲಿತು ಬದುಕು ಕಟ್ಟಿಕೊಳ್ಳಬೇಕಾದ ಹೆಣ್ಣು ಮಗಳೊಬ್ಬಳು ಅತೀ ಚಿಕ್ಕ ವಯಸ್ಸಿಗೆ ಪಡಬಾರದ ಕಷ್ಟ ಪಟ್ಟು ಅಸಂಖ್ಯಾತ ನೋವು ಅನುಭವಿಸಿ ಚಿದ್ರ ಚಿದ್ರವಾಗಿ ಜೀವನ್ಮರಣದಲ್ಲಿ ನೋವಿನಲ್ಲೇ ಕೊನೆಯುಸಿರೆಳೆದಳು. ಈ ಪ್ರಕರಣ ಈಡಿ ಕರ್ನಾಟಕವನ್ನು ಬೆಚ್ಚಿ ಬೀಳಿಸಿತ್ತು. 2012 ಅಕ್ಟೋಬರ್ 9ರಂದು ನಡೆದ ಈ ಒಂದು ಘಟನೆಗೆ ಕೊನೆಗೂ ನ್ಯಾಯ ಸಿಗುವ ಸೂಚನೆಯೇ ಕಂಡು ಬಂದಿಲ್ಲ. ಹೀಗಾಗಿ ನ್ಯಾಯ ಅರಸಿ ಬಂದ ಅಸಂಖ್ಯಾತ ಸಂಘಟನೆಗಳು ಈಗ ಸಿಎಂ ಸಿದ್ದರಾಮಯ್ಯ ಅವರ ಮೊರೆ ಹೋಗಿದ್ದಾರೆ.

ಧರ್ಮಸ್ಥಳದಲ್ಲಿ ಆದ ಈ ಒಂದು ಪ್ರಕರಣಕ್ಕೆ ಆರೋಪಿ ಎಂದು ಸಂತೋಷ್ ರಾವ್ ಅವರನ್ನು ಬಂಧಿಸಲಾಗಿದ್ದು ಇತ್ತೀಚೆಗೆ ಆರೋಪಿ ಅಲ್ಲ ಎಂದು ಸಾಬೀತು ಮಾಡಿ ರಿಲೀಸ್ ಮಾಡಲಾಗಿತ್ತು. ಆದರೆ ಈ ವ್ಯಕ್ತಿ ಕೇಸ್ ನಿಂದ ಖುಲಾಸೆ ಆದರೂ ಕೂಡ ಇಷ್ಟು ವರ್ಷ ಶಿಕ್ಷೆ ಕೂಡ ಅನುಭವಿಸಬೇಕಾಗಿತ್ತು ಆದರೆ ಈಗ ನಿಜವಾದ ಅಪರಾಧಿಗಳ ಪತ್ತೆಗೆ ನ್ಯಾಯಾಲಯ ವ್ಯವಸ್ಥೆಯೆ ವಿಫಲವಾಗಿದ್ದು ಸೂಕ್ತ ತನಿಖೆ ನಡೆಸುವಂತೆ ಹಾಗೂ ಸೌಜನ್ಯಾ ಪ್ರಕರಣ ಮರುತನಿಖೆ ಮಾಡಬೇಕೆಂದು ಸಾಕಷ್ಟು ಮಂದಿ ಮನವಿ ಕೂಡ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಬಳಿ ವಿವಿಧ ಸಂಘಟನೆಯವರೂ ಕೇಸ್ ಮರು ತನಿಖೆಗೆ ಆಗ್ರಹಿಸಿ ಮನವಿ ಮಾಡಿದ್ದು ಈ ಬಗ್ಗೆ ಸಿಎಂ ಅವರು ಕೂಡ ಮಾತಾಡಿದ್ದಾರೆ. ಮರು ತನಿಖೆ ಮಾಡಲು SIT ಸಮಿತಿ ರಚನೆ ಮಾಡುವ ಬೇಡಿಕೆ ಮುಂದಿಟ್ಟಿದ್ದು ಈಗಾಗಲೇ 20ಕ್ಕೂ ಹೆಚ್ಚು ಸಂಘಟನೆ ಅವರು ಹೋರಾಟ ಕೂಡ ಮಾಡಿದ್ದಾರೆ. ಹಾಗಾಗಿ ಸಿಎಂ ಅವರು ಈ ಒಂದು ಪ್ರಕರಣದ ಬಗ್ಗೆ ಮಾತಾಡಿದ್ದಾರೆ. ಸೌಜನ್ಯಾ ಪ್ರಕರಣ ಮರು ತನಿಖೆ ಬೇಡಿಕೆಯ ಮನವಿ ಬಂದಿದೆ ಹಾಗಾಗಿ ಈ ಬಗ್ಗೆ ಅನೇಕ ಕಾನೂನು ತಜ್ಞರ ಜೊತೆಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಒಟ್ಟಾರೆಯಾಗಿ ಈ ಒಂದು ಪ್ರಕರಣವು ಕಗ್ಗಂಟ್ಟಾಗಿದ್ದು ಇನ್ನು ಕೂಡ ಸೂಕ್ತ ತನಿಖೆ ನಡೆಯಬೇಕು ಎಂಬುದು ಎಲ್ಲರ ಒಂದು ಅಪೇಕ್ಷೆಯಾಗಿದೆ. ಹಾಗಾಗಿ ತೀರ್ವ ಮಟ್ಟದ ತನಿಖೆ ನಡೆಸುವಂತೆ ಎಲ್ಲೆಡೆಯಿಂದ ಕೂಗು ಕೇಳಿಬರುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.