ಸೌಜನ್ಯ ಸಾ ವಿಗೆ ಕೊನೆಗೂ ನ್ಯಾಯ ಸಿಗುತ್ತಾ, ಸಿಎಂ ಸಿದ್ದರಾಮಯ್ಯ ಹೇಳಿಕೆ ವೈರಲ್

 

 ಕಳೆದ ಹಲವು ದಿನಗಳ ಹಿಂದಷ್ಟೇ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೊಗಳಿ ಅವರು ರಾಜ್ಯದ ಮುಖ್ಯಮಂತ್ರಿ ಅವರನ್ನು ಹಾಗೂ ಈ ಬಜೆಟ್‌ನಲ್ಲಿ ಅಭಿನಂದಿಸಿ, ಬಿಡುವಿನ ವೇಳೆ ಬರುವಂತೆ ಕ್ಷೇತ್ರಕ್ಕೆ ಆಹ್ವಾನ ನೀಡಿದ ಪತ್ರವೊಂದು ಸುದ್ದಿ ಪ್ರಸಾರದ ಬಗ್ಗೆ ಈಗ ವ್ಯಾಪಕ ಟೀಕೆಗಳು ಮತ್ತು ಚರ್ಚೆಗಳು ಹುಟ್ಟಿಕೊಂಡಿವೆ. ಇದರ ಬೆನ್ನಲ್ಲೇ ಸೌಜನ್ಯ ನ್ಯಾಯದ ಪರ ಹೋರಾಟಗಾರರ ಮುಖ್ಯಮಂತ್ರಿಗಳಲ್ಲಿ ನ್ಯಾಯದ ಮೊರೆ ಹೋಗುವ ಸೂಚನೆ ಸಿಕ್ಕಿದೆ.

ಒಡನಾಡಿ ಸಂಸ್ಥೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಮೊನ್ನೆ ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮುಖಂಡ, ಸೌಜನ್ಯ ನ್ಯಾಯದ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರು, ಮಾನ್ಯ ಮುಖ್ಯಮಂತ್ರಿ ಸೌಜನ್ಯಾ ಗೌಡ ಅತ್ಯಾಚಾರ ಕೊಲೆ ಪ್ರಕರಣವನ್ನು ಮರು ತನಿಖೆಗೆ ವಹಿಸಬೇಕು ಹಾಗೂ ಆಕೆಗೆ ನ್ಯಾಯ ಒದಗಿಸಬೇಕು.

ಸೌಜನ್ಯ ಅತ್ಯಾಚಾರ ಪ್ರಕರಣ ನಡೆದ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತವಿತ್ತು. ನ್ಯಾಯಕ್ಕಾಗಿ ಅದೆಷ್ಟೇ ಹೋರಾಟ ನಡೆಸಿದ್ದರೂ ನ್ಯಾಯದ ಕದ ತಟ್ಟುವಲ್ಲಿ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಧೋರಣೆ ನಡೆಸಿತ್ತು. ಆ ಬಳಿಕ ಬಂದ ಕಾಂಗ್ರೆಸ್ ಸರ್ಕಾರವು ತಾಲೂಕಿನ ಶಾಸಕ ವಸಂತ ಬಂಗೇರ ಅವರ ಸತತ ಪ್ರಯತ್ನದಿಂದ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು.ಅದು ಸಂತೋಷ್ ರಾವ್ ಅಪರಾಧಿ ಎಂದು ಬಿಂಬಿಸಿ ಕಾರ್ಯಮುಗಿಸಿತ್ತು. ಆದರೆ ಇದೀಗ ಸಂತೋಷ್ ರಾವ್ ನಿರಪರಾಧಿ ಎನ್ನುವ
ಕಾರಣಕ್ಕಾಗಿ, ಸೌಜನ್ಯ ಗೌಡ ಪ್ರಕರಣದಲ್ಲಿ ಮರು ತನಿಖೆ ನಡೆಯುತ್ತಿದೆ, ಯಾವುದಕ್ಕೂ ಯಾರಿಗೂ ಕೇರ್ ಮಾಡದ ನಾಸ್ತಿಕ ಮನಸ್ಸಿನ, ಸಮಾಜ ನಾಯಕ, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪ್ರಕರಣವನ್ನು ತನಿಖೆಗೆ ಒಳಪಡಿಸುತ್ತಾರೆ, ಅವರು ಮತ್ತೆ ಭಯಪಡುವ ಮುಖ್ಯಮಂತ್ರಿಗಳನ್ನು ಆಹ್ವಾನಿಸುತ್ತಾರೆ, ಅವರ ಕಾರ್ಯವನ್ನು ಮೆಚ್ಚುವ ಮಾತುಗಳನ್ನು ಹೆಗ್ಗಡೆಯವರು ಆಡುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ಈ ಕುರಿತಾಗಿ ಸಿದ್ದರಾಮಯ್ಯ ಅವರು ಯಾವುದೇ ಹೇಳಿಕೆ ನೀಡಿಲ್ಲ.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.