ಸ್ಪಂದನಾ ಮುಂದೆ ರಾಘು ಪರಿಸ್ಥಿತಿ ನೋಡಲಾಗದೆ ಬೆಚ್ಚಿಬಿದ್ದ ಶ್ರೀಮುರಳಿ, ಕರುಳು ಹಿಂಡುವ ವಿದಾಯ

 

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪುನೀತ್ ರಾಜ್ ಕುಮಾರ್ ಸಾವಿನ ದೊಡ್ಮನೆ ಕುಟುಂಬಕ್ಕೆ ಸ್ಪಂದನಾ ಅವರ ಸಾವು ಬಹು ದೊಡ್ಡ ಆಘಾತ ಅಂತ ಹೇಳಿದ್ರೆ ತಪ್ಪಾಗೋದಿಲ್ಲ. ಥೈಲಾಂಡ್ ನ ಪ್ರವಾಸಕ್ಕೆ ಹೋಗಿದ್ದ ವಿಜಯ ರಾಘವೇಂದ್ರ ಪತ್ನಿ ಅಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗುತ್ತಿದೆ. 

ಅಷ್ಟಕ್ಕೂ ರಾಜ್ ಕುಟುಂಬಕ್ಕೆ ಹೃದಯಾಘಾತ ಹೋಸದಲ್ಲ ಈಗಾಗಲೇ ಅವರು ಹಾಗೂ ಪುನೀತ್ ರಾಜ್ಕುಮಾರ ಹೀಗೆ ಹಲವಾರು ಮಂದಿ ಹೃದಯಾಘಾತದಿಂದ ಪ್ರಾಣ ಬಿಟ್ಟ ಸ್ಪಂದನಾ ಕೂಡ ಹೊರತಲ್ಲ. ಮಂಗಳೂರು ಮೂಲದವರಾದ ಸ್ಪಂದನಾ ನಿವೃತ್ತ ಪೊಲೀಸ್ ಅಧಿಕಾರಿಯಾದ ಬಿ.ಕೆ ಶಿವರಾಮ್ ಅವರ ಮಗಳು. ಸಿನಿಮಾ ರಂಗದ ಯಾವುದೇ ಹಿನ್ನಲೆ ಇರದ ಸ್ಪಂದನಾ ಹಾಗೂ ವಿಜಯ ರಾಘವೇಂದ್ರ ಪರಸ್ಪರ ಪ್ರೀತಿಸಿ ಮದುವೆಯಾಗಿದ್ರು. ವಿಜಯ ರಾಘವೇಂದ್ರ ತಮ್ಮ ಪತ್ನಿಯ ಮೇಲೆ ಜೀವಾನೆ ಇಟ್ಟುಕೊಂಡಿದ್ರು. 

ಈ ನೋವನ್ನು ನಿಜಕ್ಕೂ ಅವರಿಂದ ಅರಗಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ ಅಂತಾನೇ ಹೇಳಬಹುದು. ಇನ್ನೇನು ಕೇವಲ ಹತ್ತೊಂಬತ್ತು ದಿನದಲ್ಲಿ ತಮ್ಮ 16 ನೇ ವಾರ್ಷಿಕೋತ್ಸವವನ್ನು ಈ ದಂಪತಿ ಆಚರಿಸಿಕೊಳ್ಬೇಕಿತ್ತು. ಆದ್ರೀಗ ವಿಧಿಯ ಆಟವೇ ಬೇರೆಯಾಗಿದೆ. ಕೆಲವು ಮೂಲಗಳ ಪ್ರಕಾರ ಭಾನುವಾರ ರಾತ್ರಿ ಸ್ಪಂದನಾ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗುತ್ತಿದೆ. ಆದ್ರೆ ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಇನ್ನೂ ಸ್ಪಂದನಾ ಅವರು ರವಿಚಂದ್ರನ್ ಅವರ ಅಪೂರ್ವ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ರು. <a href=https://youtube.com/embed/AR1VKxJWLeI?autoplay=1&mute=1><img src=https://img.youtube.com/vi/AR1VKxJWLeI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸು ಅಂದ್ರೆ ನಲ್ವತ್ತರಿಂದ ಐವತ್ತರ ಆಸುಪಾಸಿನಲ್ಲಿರುವವರು ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಸ್ಪಂದನಾ ಕೂಡ ಹೃದಯಾಘಾತದಿಂದಲೇ ಕೊನೆಯುಸಿರೆಳೆದಿದ್ದು ಈ ಸುದ್ದಿ ನಿಜವಾಗಿಯೂ ಬರ ಸಿಡಿಲು ಬಡಿದಂತಾಗಿದೆ. ಅದರಲ್ಲೂ ರಾಜ್ ಕುಟುಂಬಕ್ಕಂತೂ ತುಂಬಲಾರದ ನಷ್ಟ ಉಂಟಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.