ಕೋಟಿ ಬೆಲೆಯ ಐಷಾರಾಮಿ ಮನೆ ನಿರ್ಮಾಣ ಮಾಡಿದ ಶ್ರೀನಗರ ಕಿಟ್ಟಿ; ರಚಿತಾ ರಾಮ್ ಫಿದಾ

 
ಇಂತಿ ನಿನ್ನ ಪ್ರೀತಿಯ,ಸಂಜು ವೆಡ್ಸ್ ಗೀತಾ,ಟೋನಿ ಮುಂತಾದ ಸೂಪರ್ ಹಿಟ್ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತಿ ಪಡೆದಿರುವ ನಟ ಶ್ರೀನಗರ ಕಿಟ್ಟಿ. ಇನ್ನೂ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ಪುತ್ರಿ, ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದವರು ಪತ್ರಕರ್ತೆ ಭಾವನಾ ಬೆಳಗೆರೆ. ಶ್ರೀನಗರ ಕಿಟ್ಟಿ - ಭಾವನಾ ಬೆಳಗೆರೆ ದಂಪತಿ ಇದೀಗ ಹೊಸ ಮನೆಗೆ ಕಾಲಿಟ್ಟಿದ್ದಾರೆ.
ಹೊಸ ಮನೆಗೆ ಮಾಲೀಕರಾಗಿರುವ ಶ್ರೀನಗರ ಕಿಟ್ಟಿ - ಭಾವನಾ ಬೆಳಗೆರೆ ದಂಪತಿ ಇತ್ತೀಚೆಗಷ್ಟೇ ತಮ್ಮ ನೂತನ ನಿವಾಸದ ಗೃಹಪ್ರವೇಶ ಕಾರ್ಯಕ್ರಮವನ್ನ ಅದ್ಧೂರಿಯಾಗಿ ನೆರವೇರಿಸಿದರು. ಸಾಂಪ್ರದಾಯಿಕವಾಗಿ, ಶಾಸ್ತ್ರೋಕ್ತವಾಗಿ ಭಾವನಾ ಬೆಳಗೆರೆ ಅವರ ನೂತನ ಮನೆಯ ಗೃಹಪ್ರವೇಶವು ನಡೆದಿದೆ. ಈ ಕಾರ್ಯಕ್ರಮಕ್ಕೆ ಎರಡು ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದವರು ಆಗಮಿಸಿದ್ದರು.
<a href=https://youtube.com/embed/L3NJC42Py40?autoplay=1&mute=1><img src=https://img.youtube.com/vi/L3NJC42Py40/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನಿನ್ನೆ ಮನೆ ಗೃಹಪ್ರವೇಶ ಆಯ್ತು, ನಮ್ಮದೇ ಸ್ವಂತ ಮನೆ ಅಂತ ಮಾಡ್ಕೊಂಡ್ವಿ.. ಅಪ್ಪ ಇರ್ಬೇಕಿತ್ತು.. ಅಮ್ಮನ ಸಮಾಧಾನ ನೋಡಿ ಅಪ್ಪ ಅಪ್ಪಿದಂತಾಯ್ತು. ಅಕ್ಕನ ಕಾಳಜಿ ನೋಡಿ ಅಮ್ಮ ಮುತ್ತಿಟ್ಟಿದಂತಾಯ್ತು.. ತಮ್ಮ ಪಿಸುಗುಟ್ಟಿದ ಅಕ್ಕ ನಿನ್ನ ಬದುಕು ಸುಂದರವಾಗಿರಲಿ, ಅದರಲ್ಲಿ ನೀನೂ ಇರಬೇಕು ಅಂದದ್ದು ತಮ್ಮನ ಮುದ್ದು ಹೆಂಡತಿ, ಲಕ್ಷ್ಮಿಗೆ ನಾನು.. ಲಕ್ಷ್ಮಿ ಹೇಳಿದ್ದು ಮನೆ ಅಂದ್ರೆ ಮನಸ್ಸಿನ ನೆಮ್ಮದಿ.. ಅದಿಕ್ಕೆ ಈ ಮನೆಯ ಹೆಸರು ಗುಡ್ಡಿ ಮನೆ ಗುಡ್ಡಿ ಅಂದ್ರೆ ಗೊಂಬೆ ಅದು ನನ್ನ ಕಿಟ್ಟಪ್ಪನಿಗೆ ಹುಟ್ಟಿದ ನೆಮ್ಮದಿ, ನಮ್ಮ ಮಗಳು ಎಂದು ಭಾವನಾ ಬೆಳಗೆರೆ ಬರೆದುಕೊಂಡಿದ್ದಾರೆ.
ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರೀನಗರ ಕಿಟ್ಟಿ ಅವರು ಈಗ ಸ್ವಂತದ ಮನೆಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿ ಬಳಿ ಇರುವ ಅಪಾರ್ಟ್‌ಮೆಂಟ್‌ ಒಂದರಲ್ಲಿ ಒಂದು ಫ್ಲ್ಯಾಟ್ ಖರೀದಿಸಿದ್ದಾರೆ ಎನ್ನಲಾಗಿದೆ. ಮನೆ ತುಂಬಾನೇ ಚೆನ್ನಾಗಿದೆ. ಎರಡು ದಿನಗಳ ಕಾಲ ಹೊಸ ಮನೆಯಲ್ಲಿ ವಿಶೇಷ ಪೂಜೆ ನಡೆದಿದೆ. ಮೊದಲ ದಿನ ನೀಲಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡ ಭಾವನಾ ಎರಡನೇ ದಿನ ಹಸಿರು-ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.