ಸೃಜನ್ ಲೋಕೇಶ್ ವಿಜಯಲಕ್ಷ್ಮಿ ಜೊತೆ ಸುತ್ತಾಡಿ ಕೊನೆಗೆ ಮದುವೆ ಬೇಡ ಅಂದಿದ್ದ: ವಿಜಯಲಕ್ಷ್ಮಿ

 
ನಾಗಮಂಡಲ, ಸೂರ್ಯವಂಶ ಅಂತಹ ಸಿನಿಮಾಗಳಲ್ಲಿ ನಟಿಸಿ ಒಂದು ಕಾಲದಲ್ಲಿ ಬಹುಬೇಡಿಕೆಯಲ್ಲಿದ್ದವರು ನಟಿ ವಿಜಯಲಕ್ಷ್ಮಿ. ಆದರೆ, ಬದುಕು ಅಂದುಕೊಂಡಂತೆ ಇರುವುದಿಲ್ಲ. ಯಶಸ್ಸು ಸದಾ ಜೊತೆಯಲ್ಲಿ ಇರುವುದಿಲ್ಲ. ವಿಜಯಲಕ್ಷ್ಮಿ ಕರಿಯರ್‌ನಲ್ಲೂ ಹೀಗೆ ನಾನಾ ರೀತಿಯ ಬದಲಾವಣೆಗಳು ಆದವು. ವೈಯಕ್ತಿಕ ಬದುಕು ಕಷ್ಟದ ಹಾದಿಯನ್ನು ಹಿಡಿದಿತ್ತು.
ವಿಜಯಲಕ್ಷ್ಮಿ ವೃತ್ತಿ ಬದುಕಿನಲ್ಲಿಯೇ ಟಾಪ್‌ನಲ್ಲಿ ಇರುವಾಗಲೇ ಮದುವೆ ಆಗಲು ನಿರ್ಧರಿಸಿದ್ದರು. ಕನ್ನಡ ಚಿತ್ರರಂಗದ ಲೆಜೆಂಡರಿ ಜೋಡಿ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಅವರನ್ನು ಮದುವೆ ಆಗಬೇಕಿತ್ತು. ಇಬ್ಬರೂ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ, ಕೊನೆಯ ಲಕ್ಷಣದಲ್ಲಿ ಅದು ಮುರಿದು ಬಿತ್ತು.
ಇನ್ನೇನು ಸೃಜನ್ ಲೋಕೇಶ್ ಹಾಗೂ ವಿಜಯಲಕ್ಷ್ಮಿ ಮದುವೆ ಆಗೇ ಬಿಟ್ಟರು ಅನ್ನುವಾಗಲೇ ಮುರಿದು ಬಿದ್ದಿತ್ತು. ಎರಡು ಒಡೆದ ಮನಸ್ಸುಗಳಾಗಿದ್ದವು. ಅಂದು ನಿಶ್ಚಿತಾರ್ಥದ ಬಳಿಕ ಏನಾಗಿತ್ತು? ಯಾಕೆ ಈ ಜೋಡಿ ಮದುವೆ ಆಗುವ ಹಂತದವರೆಗೂ ಹೋಗಿಲ್ಲ? ಈ ಎಲ್ಲಾ ಪ್ರಶ್ನೆಗಳಿಗೂ ಸೃಜನ್ ಲೋಕೇಶ್ ಉತ್ತರ ನೀಡಿದ್ದಾರೆ. ನಿಶ್ಚಿತಾರ್ಥದ ದಿನ ಅವರು ಛತ್ರಕ್ಕೆ ಬರದಿದ್ದರೆ ನಾನೇನು ಮಾಡಲಿ ಎಂದಿದ್ದಾರೆ.ಇನ್ನು, ಕೆಲವೊಂದು ಸಾರಿ ವೈಯಕ್ತಿಕ ವಿಚಾರವನ್ನು ಮಾತನಾಡುವ ಅಧಿಕಾರ ಯಾರಿಗೂ ಇರುವುದಿಲ್ಲ, ಯಾಕೆಂದರೆ ಅದರ ಹಿಂದೆ ಏನಾಗಿರುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ' ಎಂದಿರುವ ಸೃಜನ್ ಕೆಲವೊಂದು ಗೊತ್ತಿಲ್ಲದ ವಿಚಾರವನ್ನು ಇದು ಹೀಗೆ ಇರಬಹುದು ಅಂದುಕೊಂಡು ಬಿಟ್ಟರೆ ಅದಕ್ಕಿಂತ ಮೂರ್ಖತನದ ಕೆಲಸ ಇನ್ನೊಂದು ಇಲ್ಲ ಎಂದು ಹೇಳಿದ್ಧಾರೆ. 
ಮುಂದುವರೆದು ನನಗೆ ನಿನಗೆ ಸಂಬಂಧ ಕಟ್ಟಿ ಇವರೇ ಇರಬಹುದು, ಹೀಗೆ ಇರಬಹುದು ಎಂದರೆ ಹೇಗೆ ಗೊತ್ತು ಗುರು ನಿನಗೆ ಎಂದು ಪ್ರಶ್ನೆ ಮಾಡಿರುವ ಸೃಜನ್ ನನಗೇನು ಹೆಂಡತಿ ಮಕ್ಕಳು ಇಲ್ವಾ ? ಅವರಿಗೆ ಬೇಜಾರಾಗುತ್ತೆ ಎನ್ನುವ ಸಾಮಾನ್ಯ ಪರಿಜ್ಞಾನ ಕೂಡ ಬೇಡವಾ ? ಎಂದು ಕಿಡಿ ಕಾರಿದ್ದಾರೆ. 
ನನ್ನ ಬಗ್ಗೆ ನಿರ್ಧಾರ ಮಾಡಲು ನೀವು ಯಾರು? ನಿಮ್ಮ ಹತ್ತಿರ ಏನಾದರೂ ಸಾಕ್ಷಿ ಇದೆಯಾ? ಇಲ್ಲ ಅಂದ ಮೇಲೆ ಹೇಗೆ ಒಂದು ಸಂಬಂಧನಾ ಹಾಳು ಮಾಡುತ್ತೀರಾ ? ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಹೀಗಾಗಿಯೇ ನಾನು ಈ ತರಹದ ಸುದ್ದಿಗಳನ್ನೆಲ್ಲ ಇಗ್ನೋರ್ ಮಾಡುತ್ತೇನೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.