ಬಿಗ್ ಬಾಸ್ ಫಿನಾಲೆಗೆ ಸುದೀಪ್ ಇರಲ್ಲ, ಅಂತಿಮವಾಗಿ ವಿದಾಯ ಹೇಳಿದ ಕಿಚ್ಚ

 
ಕಿಚ್ಚ ಅಂದ್ರೆ ಬಿಗ್ಬಾಸ್. ಬಿಗ್ಬಾಸ್ ಅಂದ್ರೆ ಕಿಚ್ಚ ಅನ್ನುವಷ್ಟರ ಮಟ್ಟಿಗೆ ಜನಪ್ರಿಯ ನಿರೂಪಕರು.ಸುದೀಪ್ ಅವರ ದೊಡ್ಡ ತೆರೆಯಲ್ಲಿ ಎಷ್ಟೋ ಹೆಸರು, ಖ್ಯಾತಿ ಪಡೆದಿದ್ದಾರೋ ಅಷ್ಟೇ ಕಿರುತೆರೆಯಲ್ಲೂ ನಾಡಿನ ಮನೆ.. ಮನೆಗಳಲ್ಲಿ ಮಾತಾಗಿದ್ದಾರೆ. ಅಭಿಮಾನಿಗಳಿಂದ ಹಿಡಿದು ಎಲ್ಲರನ್ನೂ ಪ್ರೀತಿಯಿಂದ ನೋಡುವ ಅವರು ಸದ್ಯ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇದೇ ನನ್ನ ಕೊನೆಯ ಬಿಗ್ಬಾಸ್ ಸೀಸನ್ ಎಂದು ಸ್ವತಹ ಕಿಚ್ಚ ಸುದೀಪ್ ಅವರೇ ಈ ಹಿಂದೆ ಖಚಿತ ಪಡಿಸಿದ್ದರು.
ಇದೀಗ ಮತ್ತೆ ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕಲರ್ಸ್ ಕನ್ನಡಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಕನ್ನಡದಲ್ಲಿ ಬಿಗ್ಬಾಸ್ ಶೋ ಆರಂಭದಿಂದಲೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ 11 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಬಿಗ್ ಬಾಸ್ ಶೋ ವೇಳೆ ತಮ್ಮ ಮಾತಿನ ಚಮತ್ಕಾರದಿಂದಲೇ ಇಡೀ ದೃಶ್ಯ ಗಮನ ಸೆಳೆಯುತ್ತದೆ. ಸ್ಪರ್ಧಿಗಳಿಗೆ ಯಾವುದನ್ನು ಹೇಗೆ ಹೇಳಬೇಕು ಹಾಗೇ ಹೇಳಿ, ಕೊನೆಗೆ ಉತ್ತರ ಕೊಡುವಂತೆ. <a href=https://youtube.com/embed/ReHk887qNYI?autoplay=1&mute=1><img src=https://img.youtube.com/vi/ReHk887qNYI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಸದ್ಯ ಈಗ ನಡೆಯುತ್ತಿರುವ ಬಿಗ್ಬಾಸ್ ಸೀಸನ್ 11ರ ಶೋನಲ್ಲೂ ಸುದೀಪ್ ಅಚ್ಚುಕಟ್ಟಾಗಿ ಎಲ್ಲರನ್ನು ನಿಭಾಯಿಸಿ ಯಶಸ್ವಿಯಾಗಿದ್ದಾರೆ. ಆದರೆ ಕಿಚ್ಚ ಸುದೀಪ್ ಅವರು ನನ್ನ ಕೊನೆ ಬಿಗ್ಬಾಸ್ ಶೋ ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆರಂಭದಿಂದ ಈ 11ರ ಸೀಸನ್ ವರೆಗೆ ಬಿಗ್ಬಾಸ್ ಎಂಜಾಯ್ ಮಾಡಿದ್ದೇನೆ. ಶೋನಲ್ಲಿ ಪ್ರೀತಿ, ಅಭಿಮಾನ ತೋರಿಸಿದ್ದಕ್ಕೆ ಎಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.
ಮುಂದಿನ ಶನಿವಾರ, ಭಾನುವಾರ ನಡೆಯುವ ಗ್ರ್ಯಾಂಡ್ ಫಿನಾಲೆ ನಾನು ನಡೆಸಿಕೊಡುವ ಕೊನೆಯ ಶೋ ಆಗಿರಲಿದೆ. ಎಲ್ಲರನ್ನು ಚೆನ್ನಾಗಿ ರಂಜಿಸಿದ್ದೇನೆ ಎಂದು ಭಾವಿಸುತ್ತೇನೆ. ಇದೊಂದು ಮರೆಯಲಾಗದ ಜರ್ನಿಯಾಗಿದೆ. ನನಗೆ ಸಾಧ್ಯವಾದಷ್ಟು ಎಲ್ಲವನ್ನು ನಡೆಸಿಕೊಟ್ಟಿದ್ದೇನೆಂದು ತಿಳಿಯುತ್ತೇನೆ. 
ಇಂತಹ ಒಳ್ಳೆಯ ಅವಕಾಶ ಕೊಟ್ಟಿದ್ದಕ್ಕೆ ಕಲರ್ಸ್ ಕನ್ನಡದವರಿಗೆ ಧನ್ಯವಾದಗಳು. ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ, ಗೌರವವಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.