ದರ್ಶನ್ ಇದ್ದ ಆಸ್ಪತ್ರೆಗೆ ಮಗು ತಂದ ಸುಮಲತಾ! ಮಗು ಮುಖ ನೋಡಿ ಅಪ್ಪಾಜಿ ಎಂದ ದಾಸ
Nov 16, 2024, 19:21 IST
ಬದುಕು ನಿಂತ ನೀರಲ್ಲ. ಹೌದು ಕನ್ನಡದ ಪ್ರಖ್ಯಾತ ನಟ, ರಾಜಕಾರಣಿ ಅಂಬರೀಶ್ ಅವರು ಇನ್ನಿಲ್ಲವಾಗಿ ಕೆಲ ವರ್ಷಗಳೇ ಕಳೆದಿವೆ. ಆದರೆ ಈದೀಗ ಅವರು ಮಗನ ಮಡಿಲಲ್ಲಿ ಮತ್ತೆ ಮಗುವಾಗಿ ಬಂದಿದ್ದಾರೆ. ಹೌದು ಇದು ಅಭಿಮಾನಿಗಳ ಪ್ರೀತಿಯ ಮಾತು.ರೆಬೆಲ್ ಸ್ಟಾರ್ ದಿ.ಅಂಬರೀಶ್ ಮನೆಗೆ ಈಗ ಹೊಸ ಅತಿಥಿಯ ಆಗಮನವಾಗಿದೆ. ಅಂಬರೀಶ್ ಮತ್ತು ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಅವರ ಪತ್ನಿ ಅವಿವಾ ಬಿದ್ದಪ್ಪ ಕೆಲ ದಿನಗಳ ಹಿಂದಷ್ಟೇ ಬೆಳಗ್ಗೆ 8.30ರ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಅವಿವಾ ಅವರು ಪ್ರೆಗ್ನೆಂಟ್ ಎನ್ನುವ ವಿಚಾರ ಇತ್ತೀಚೆಗೆ ರಿವೀಲ್ ಆಗಿತ್ತು. ಅದ್ಧೂರಿಯಾಗಿ ಅವರ ಸೀಮಂತಶಾಸ್ತ್ರ ಕೂಡ ನೆರವೇರಿತ್ತು. ಈಗ ಅವರು ಗಂಡು ಮಗುವಿನ ತಾಯಿ ಆಗಿದ್ದು, ಅಂಬಿ ಮತ್ತೆ ಹುಟ್ಟಿ ಬಂದಎಂದು ಅಂಬರೀಷ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.ಅವಿವಾ ಬಿದಪ್ಪ ಅವರು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದಪ್ಪ ಅವರ ಪುತ್ರಿ. ಸ್ವತಃ ಫ್ಯಾಷನ್ ಡಿಸೈನರ್ ಆಗಿರುವ ಅವಿವಾ ಬಿದಪ್ಪ ಮಾಡೆಲಿಂಗ್ನಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಇನ್ನು ತಾಯಿ ಮಗುವನ್ನು ನೋಡಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಹಾರೈಸಿದ್ದಾರೆ.
<a href=https://youtube.com/embed/n36yzaWXbts?autoplay=1&mute=1><img src=https://img.youtube.com/vi/n36yzaWXbts/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇದೀಗ ತಾಯಿ ಹಾಗು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಪ್ತಮೂಲಗಳು ತಿಳಿಸಿವೆ.ಕೆಲವು ತಿಂಗಳ ಹಿಂದೆ ಅಭಿಷೇಕ್ ಅಂಬರೀಶ್ ಅವರ ಜೆ.ಪಿ.ನಗರದ ನಿವಾಸದಲ್ಲಿ ಆಪ್ತರು ಹಾಗು ಚಿತ್ರರಂಗದ ಸ್ನೇಹಿತರ ಸಮ್ಮುಖದಲ್ಲಿ ಅವಿವಾ ಅವರ ಸೀಮಂತ ಶಾಸ್ತ್ರ ನಡೆದಿತ್ತು.2023 ಜೂನ್ 7ರಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂಬರೀಶ್ ಅವರ ಏಕೈಕ ಪುತ್ರ ಅಭಿಷೇಕ್ ಹಾಗೂ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಮದುವೆ ನಡೆದಿತ್ತು. ಸೂಪರ್ ಸ್ಟಾರ್ ರಜನಿಕಾಂತ್, ಮೆಗಾ ಸ್ಟಾರ್ ಚಿರಂಜೀವಿ, ಮೋಹನ್ ಬಾಬು, ಸೇರಿದಂತೆ ದೊಡ್ಡ ದೊಡ್ಡ ರಾಜಕೀಯ ಗಣ್ಯರು ಅದ್ಧೂರಿ ಮದುವೆಗೆ ಸಾಕ್ಷಿಯಾಗಿದ್ದರು.
2019ರ ‘ಅಮರ್’ ಚಿತ್ರದ ಮೂಲಕ ಅಭಿಷೇಕ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಅವರು ಬ್ರೇಕ್ ಪಡೆದರು. 2023ರಲ್ಲಿ ‘ಬ್ಯಾಡ್ ಮ್ಯಾನರ್ಸ್’ ಹೆಸರಿನ ಸಿನಿಮಾ ಮಾಡಿದರು. ಅವರು ಈ ಮೊದಲು ‘ಕಾಳಿ’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದರು. ಆದರೆ, ಈ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ. ಈಗ ಮನೆತುಂಬ ಮಗುವಿನ ಕಲರವವೇ ತುಂಬಿದೆ ಹಾಗಾಗಿ ಹೊಸ ಸಿನಿಮಾ ಅಪ್ಡೇಟ್ ಕೊಡೋದು ತಡವಾಗೋದಂತೂ ಖಂಡಿತ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.