ದ ರ್ಶನ್ ಬಗ್ಗೆ ಮಾತಾಡಿ ಸಿದ್ದಾರೂಢಗೆ ಮತ್ತೆ ಜೈಲೂಟ ಖಾಯಂ;
Aug 1, 2024, 11:33 IST
ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರಬಂದಿದ್ದ ಮಾಜಿ ಖೈದಿ ಸಿದ್ದಾರೂಢಗೆ ಮತ್ತೆ ಜೈಲು 'ದರ್ಶನ' ಮಾಡಿಸಲು ಪೊಲೀಸರು ಸಜ್ಜಾಗಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ನಟ ದರ್ಶನ್‌ರನ್ನು ಜೈಲಿನಲ್ಲಿ ಭೇಟಿ ಮಾಡಿದ್ದೆ ಎಂದು ಸುಳ್ಳು ಹೇಳಿದ್ದೇ ಈಗ ಆತನಿಗೆ ಮುಳುವಾಗಿದ್ದು, ಮತ್ತೆ ಬಂಧನಕ್ಕೊಳಗಾಗುವ ಭೀತಿಯಲ್ಲಿದ್ದಾರೆ.
ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಸಿದ್ಧಾರೂಢ ಬಳ್ಳಾರಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದರು. ಸನ್ನಡತೆ ಆಧಾರದಲ್ಲಿ ಬಿಡುಗಡೆಯಾಗುವ ಮುನ್ನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಶಿಕ್ಷೆ ಪೂರ್ತಿಯಾಗುವ ಮುನ್ನವೇ ಸನ್ನಡತೆ ಆಧಾರದಲ್ಲಿ ಹೊರಬಂದಿದ್ದ ಸಿದ್ಧಾರೂಢ ನಟ ದರ್ಶನ್ ವಿಚಾರದಲ್ಲಿ ಸುಳ್ಳು ಹೇಳಿಕೊಂಡು ಓಡಾಡಿದ್ದರು. ಅದೇ ಈಗ ಅವರಿಗೆ ಮುಳುವಾಗಿದೆ.
ಪರಪ್ಪನ ಅಗ್ರಹಾರದಲ್ಲಿದ್ದಾಗ ನಟ ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ಅವರಿಗೆ ಧ್ಯಾನ ಮಾಡುವುದನ್ನು ಹೇಳಿಕೊಟ್ಟಿದ್ದೇನೆ ಎಂದಿದ್ದರು. ದರ್ಶನ್‌ಗೆ ವಿಐಪಿ ಸೆಲ್ ನೀಡಲಾಗಿದ್ದು, ಅಲ್ಲಿ ಟಿವಿ ಕೂಡ ಇರುತ್ತದೆ ಎಂದಿದ್ದ, ಜೊತೆಗೆ ಜೈಲು ಊಟವನ್ನು ನಾಯಿ ಕೂಡ ತಿನ್ನುವುದಿಲ್ಲ, ದರ್ಶನ್ ಹೇಗೆ ತಿನ್ನುತ್ತಾರೆ ಎಂದೆಲ್ಲಾ ಹೇಳಿದ್ದರು.
ಸಿದ್ಧಾರೂಢ ಹೇಳಿಕೆ ಜೈಲು ಅಧಿಕಾರಿಗಳಿಗೆ ಸಂಕಷ್ಟ ತಂದಿತ್ತು, ದರ್ಶನ್‌ರನ್ನು ಯಾರಿಗೂ ಭೇಟಿಯಾಗಲು ಅವಕಾಶ ಇಲ್ಲದಿದ್ದರೂ ಈತ ಭೇಟಿ ಮಾಡಿದ್ದು ಹೇಗೆ ಎಂದು ಉನ್ನತ ಅಧಿಕಾರಿಗಳು ಜೈಲು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದರು. ಸಿದ್ಧಾರೂಢ ಹೇಳಿಕೆ ಕಾರಾಗೃಹ ಅಧಿಕಾರಿಗಳಿಗೆ ಸಂಕಷ್ಟ ತಂದ ಹಿನ್ನಲೆಯಲ್ಲಿ ಕಾನೂನು ಮುಖಾಂತರವೇ ಕ್ರಮಕ್ಕೆ ಮುಂದಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.