ಬಿಗ್ ಬಾಸ್ ಮನೆಗೆ ಪೊಲೀಸ್ ಜೀಪ್ ಎಂಟ್ರಿ, ಗಡಗಡ ನಡುಗಿದ ತನಿಷಾ

 

 ಬಿಗ್​​ಬಾಸ್​​ ಶುರುವಾದಾಗಿನಿಂದ ಸ್ಪರ್ಧಿಗಳ ಒಂದಲ್ಲ ಒಂದು ವೈಯಕ್ತಿಕ ವಿಷಯಗಳು ಹೊರ ಬರುತ್ತಿವೆ. ಹುಲಿ ಉಗುರು ಧರಿಸಿದ್ದಾರೆಂದು ವರ್ತೂರು ಸಂತೋಷ್ ಅರೆಸ್ಟ್​ ಆಗಿ ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ವಿನಯ್ ಕೂಡ ಮಹಿಳೆಯರ ಬಗ್ಗೆ ಚೆನ್ನಾಗಿ ಮಾತನಾಡ್ತಿಲ್ಲ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಸದ್ಯ ಬಿಗ್​ಬಾಸ್ ಸ್ಪರ್ಧಿ ತನಿಶಾ ವಿರುದ್ಧ ಎಫ್ಐಆರ್ ದಾಖಲಾಗಿದೆ.

  ಬಿಗ್​ಬಾಸ್ ಮನೆಯಲ್ಲಿರುವ ಸ್ಪರ್ಧಿ ತನಿಶಾ ಕುಪ್ಪುಂಡ ಅವರು, ಭೋವಿ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಖಾಸಗಿ ವಾಹಿನಿಯೊಂದು ನಡೆಸಿಕೊಡುತ್ತಿರುವ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿ ಭೋವಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆಂದು ದೂರು ನೀಡಲಾಗಿದೆ.

   ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ತನಿಶಾ ಕುಪ್ಪುಂಡ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ಅನ್ನು ದಾಖಲು ಮಾಡಲಾಗಿದೆ. ಅಖಿಲ ಕರ್ನಾಟಕ ಭೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬುವರು ಈ ದೂರನ್ನು ನೀಡಿದ್ದು ತಕ್ಷಣ ಅವರು ಬಿಗ್​ ಬಾಸ್​ ಮನೆಯಿಂದ ಹೊರಬರಬೇಕು ಎಂದು ಆಗ್ರಹಿಸಿದ್ದಾರೆ. <a href=https://youtube.com/embed/7_oeafUNpeE?autoplay=1&mute=1><img src=https://img.youtube.com/vi/7_oeafUNpeE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

  ಹೀಗಾಗಿ ಬಿಗ್​​ಬಾಸ್​ ಆಡಳಿತ ಮಂಡಳಿಗೆ ಕುಂಬಳಗೋಡು ಪೊಲೀಸ್​ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ. ಇಂದು ಒರಿಜಿನಲ್ ಫೋಟೋಸ್ ಕೊಡಲು ಸೂಚನೆ ನೀಡಿದ್ದಾರೆ. ಪ್ರೋಮೋ ವಿಡಿಯೋ ಜೊತೆಗೆ ಒರಿಜಿನಲ್ ವಿಡಿಯೋವನ್ನು ಇಂದು ಸಂಜೆ ಎಫ್ಎಸ್ಎಲ್​ಗೆ ಪೊಲೀಸರು ಕಳಿಸಲಿದ್ದಾರೆ. ಎಫ್ಎಸ್ಎಲ್​ನಿಂದ ವರದಿ ಬಂದ ಬಳಿಕ ತನಿಶಾ ಅವರನ್ನು ಮಾಗಡಿ ಡಿವೈಎಸ್ಪಿ ಬಾಲಕೃಷ್ಣ ನೇತೃತ್ವದಲ್ಲಿ ವಿಚಾರಣೆ ಮಾಡಲಿದ್ದಾರೆ. ಈಗಾಗಲೇ ಪ್ರತಾಪ್ ಹಾಗೂ ತನಿಶಾ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

 ( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.