ಮದುವೆಗೆ ತುದಿಕಾಲಿನಲ್ಲಿ ನಿಂತಿರುವ ತರುಣ್; ಮೊದಲ ಆಮಂತ್ರಣ ನನ್ನ ದೇವರಿಗೆ'

 

ಸೆಂಟ್ರಲ್‌‌ ಜೈಲಿನಲ್ಲಿರೋ ನಟ ದರ್ಶನ್ ಭೇಟಿ ಮಾಡಲು ಕಾಟೇರ ನಿರ್ದೇಶಕ ತರುಣ್ ಸುಧೀರ್‌‌ ಆಗಮಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಪರಪ್ಪನ ಅಗ್ರಹಾರದ ಜೈಲಿಗೆ ತರುಣ್ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಾರಿನಲ್ಲೇ ತರುಣ್ ಅವರು ಹಾಗೂ ಸ್ನೇಹಿತರು ಎರಡು ಕಾರಿನಲ್ಲಿ ಆಗಮಿಸಿದ್ದು, ಪರಪ್ಪನ ಅಗ್ರಹಾರ ಜೈಲಿನ ಅವರಣಕ್ಕೆ ಕಾರಿನಲ್ಲಿಯೇ ಎಂಟ್ರಿ ಕೊಟ್ಟಿದ್ದಾರೆ.

ಆಗಸ್ಟ್ 10, 11ಕ್ಕೆ ತರುಣ್, ಸೋನಾಲ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನ ದರ್ಶನ್‌ಗೆ ಕೊಡಲು ತರುಣ್ ಜೈಲಿಗೆ ಆಗಮಿಸಿದ್ದಾರೆ. ದರ್ಶನ್ ಜೈಲು ಪಾಲಾದ ನಂತರ ಮೊದಲ ಬಾರಿಗೆ ತರುಣ್ ಸುಧೀರ್ ಭೇಟಿ ನೀಡಿದ್ದು, ಸೋನಲ್ ಜೊತೆಗೂಡಿ ತರುಣ್ ದರ್ಶನ್ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ನಟ ದರ್ಶನ್ ಅವರೇ ನಿರ್ದೇಶಕ ತರುಣ್ ಹಾಗೂ ನಟಿ ಸೋನಲ್ ಮದುವೆಗೆ ಮುದ್ರೆ ಒತ್ತಿದ್ದರಂತೆ. ದರ್ಶನ್ ಇಲ್ಲದೆ ಮದುವೆಯನ್ನು ಮುಂದಕ್ಕೆ ಹಾಕಲು ತರುಣ್ ಅವರು ಕೂಡ ಸಜ್ಜಾಗಿದ್ದರಂತೆ. ಆದರೆ ಹಿರಿಯರ ಸಲಹೆ ಹಾಗೂ ದರ್ಶನ್ ಸಲಹೆ ಸಿಕ್ಕ ನಂತರ ಮದುವೆಗೆ ತರುಣ್ ಮುಂದಾಗಿದ್ದರಂತೆ. ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನ ದರ್ಶನ್ ಗೆ ಕೊಟ್ಟು ಆಶೀರ್ವಾದ ಪಡೆದುಕೊಡಲು ತರುಣ್ ಮುಂದಾಗಿದ್ದರಂತೆ.

ಇನ್ನು, ರೇಣುಕಾಸ್ವಾಮಿ ಕೊಲೆ ಕೇಸ್‌‌ನಲ್ಲಿ ಜೈಲು ಸೇರಿರುವ ದರ್ಶನ್‌‌ & ಗ್ಯಾಂಗ್‌ಗೇ ಸೆರೆವಾಸ ತಪ್ಪಿಲ್ಲ. ನಟ ದರ್ಶನ್ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಅಂತ್ಯ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್‌‌ ಮೂಲಕ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್​ ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದೆ. ಈ ಮೂಲಕ ಆಗಸ್ಟ್​ 1ರ ತನಕ ದರ್ಶನ್​ಗೆ ಜೈಲೇ ಗತಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.