ಅವತ್ತು ಆತನ ಮೋಸದ ಬಲೆಗೆ ಬಿದ್ದೆ; ನನಿಗೆ ಮದುವೆನೇ ಬೇಡ ಮೋಕ್ಷಿತಾ ಪೈ

 
 ಬಿಗ್ ಬಾಸ್ ಮೋಕ್ಷಿತಾ ಪೈ ಮನ ಬಿಚ್ಚಿ ಮಾತನಾಡಿದ್ದಾರೆ. ಮನದಲ್ಲಿರೋ ನೋವು ಏನಿದೆ ಅದನ್ನು ಹೇಳಿಕೊಂಡಿದ್ದಾರೆ. ಮದುವೆ ಆಗುವಂತೆ ಮನೆ ಮಂದಿ ಕೂಡ ಒತ್ತಾಯಿಸುತ್ತಿದ್ದಾರೆ. ಆದರೆ, ಮನೆಯ ಮಂದಿಯ ಒತ್ತಡದ ಮಧ್ಯೆನೂ ಮೋಕ್ಷಿತಾ ಮದುವೆ ಆಗೋಕೆ ಮನಸು ಮಾಡ್ತಿಲ್ಲ. 
ಅದಕ್ಕೆ ಏನು ಕಾರಣ ಅನ್ನೋದನ್ನ ಕೂಡ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ. ಆದರೂ ಮದುವೆ ಆಗುವಂತೆ ಒತ್ತಡ ಕಳೆದ ಒಂದು ವರ್ಷದಿಂದಲೂ ಜಾಸ್ತಿ ಆಗಿದೆ. ಈ ಬಗ್ಗೆ ಮೋಕ್ಷಿತಾ ಪೈ ಮುಕ್ತವಾಗಿಯೇ ಹೇಳಿಕೊಂಡಿದ್ದಾರೆ. ಈ ಮಾತುಗಳನ್ನ ಬಿಗ್ ಬಾಸ್ ಕೇಳಿಕೊಂಡಿದ್ದಾರೆ. ಹೀಗೆ ಮನಸು ಹಗುರವಾಗಲು ಬಿಗ್ ಬಾಸ್ ನೆರವಾಗಿದ್ದಾರೆ.  <a href=https://youtube.com/embed/j2bZxG-lfyA?autoplay=1&mute=1><img src=https://img.youtube.com/vi/j2bZxG-lfyA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹೌದು, ನನ್ನ ಮನೆಯಲ್ಲಿ ಸದ್ಯ ಮದುವೆ ಒತ್ತಡ ಇದೆ. ಮದುವೆ ಆಗುವ ಅಂತ ಕಳೆದ ಒಂದು ವರ್ಷದಿಂದ ಅಪ್ಪ ಮತ್ತು ಅಮ್ಮ ಹೇಳ್ತಾನೇ ಇದ್ದಾರೆ. ಆದರೆ, ಮದುವೆ ಆಗೋಕೆ ನನಗೆ ಭಯ ಇದೆ. ಆ ಭಯಕ್ಕೆ ಒಂದು ಕಾರಣ ಕೂಡ ಇದೆ ಅಂತ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ.ನಾನು ಮದುವೆ ಆದ್ರೆ ನನ್ನ ಅಪ್ಪ ಅಮ್ಮನನ್ನ ನೋಡೋರು ಯಾರು? ನನ್ನ ತಮ್ಮ ವಿಶೇಷ ಚೇತನನೇ ಆಗಿದ್ದಾನೆ. 
ಹಾಗಾಗಿಯೇ ನಮ್ಮ ತಂದೆ-ತಾಯಿಗೆ ನಾನು ಮಗ ಮತ್ತು ಮಗಳು ಎರಡೂ ಆಗಿದ್ದೇನೆ. ಆದರೆ, ಮದುವೆ ಒತ್ತಡ ಜಾಸ್ತಿನೇ ಆಗಿದೆ ಅಂತಲೂ ಮೋಕ್ಷಿತಾ ಹೇಳಿಕೊಂಡಿದ್ದಾರೆ.ಆದರೆ, ಈ ಮದುವೆ ಒತ್ತಡದಿಂದ ನಾನು ನನ್ನ ಅಮ್ಮ ಮತ್ತು ಅಪ್ಪನಿಗೆ ಬೈದಿರೋದು ಇದೆ. ಸಿಟ್ಟಿನಿಂದ ಕೂಗಾಡಿದ್ದು ಇದೆ. ಅದನ್ನ ನೆನಪಿಸಿಕೊಂಡ್ರೆ ತುಂಬಾನೆ ಬೇಸರ ಆಗುತ್ತದೆ ಅಂತಲೂ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.