ಮ ದುವೆಗೆ ಮುಂಚೆ ಆ ಕೆಲಸ; ಸ್ಟಾರ್ ಆಗುವ ಮುನ್ನ ಗಣೇಶ್ ಗೆ ಕಂಡೀಷನ್

 
ಚಿತ್ರರಂಗದಲ್ಲಿ ಗಾಸಿಪ್‌ಗಳಿಗೇನು ಬರವಿಲ್ಲ. ಲವ್, ಬ್ರೇಕಪ್, ಡಿವೋರ್ಸ್ ಬಗ್ಗೆ ಇವತ್ತಿಗೂ ಅಂತೆ ಕಂತೆ ಸುದ್ದಿಗಳು ಹರಿದಾಡುತ್ತಲೇ ಇರುತ್ತದೆ. ಆದರೆ ಕೆಲವೊಮ್ಮೆ ಎಲ್ಲಿಂದಲೋ ಎಲ್ಲಿಗೋ ಲಿಂಕ್ ಮಾಡಿ ಹಬ್ಬುವ ವದಂತಿಗಳು ನಾನಾ ಅನರ್ಥಗೆ ಕಾರಣವಾಗಿಬಿಡುತ್ತದೆ. ಒಂದ್ಕಾಲದಲ್ಲಿ ತಮ್ಮ ಬಗ್ಗೆ ಬಂದ ರೂಮರ್ಸ್‌ ಕೇಳಿ ನಟ ಗಣೇಶ್ ಚಿತ್ರರಂಗ ಬಿಡಲು ಮುಂದಾಗಿದ್ದರು.
ಖುದ್ದು ಗಣೇಶ್ 'ವೀಕೆಂಡ್ ವಿತ್ ರಮೇಶ್' ಶೋನಲ್ಲಿ ಈ ಬಗ್ಗೆ ಮಾತನಾಡಿದ್ದರು. ಆ ರೂಮರ್ಸ್ ಏನು ಎನ್ನುವುದನ್ನು ಮಾತ್ರ ಹೇಳಲಿಲ್ಲ. ಅದೆಲ್ಲ ಬುಲ್‌ಶಿಟ್ ಎಂದು ಗಣಿ ಶೋನಲ್ಲಿ ಹೇಳಿಕೊಂಡಿದ್ದರು. ಅಂದಹಾಗೆ ಅದು ಗೋಲ್ಡನ್ ಸ್ಟಾರ್ ಮದುವೆ ಸಮಯದಲ್ಲಿ ಕೇಳಿಬಂದಿದ್ದ ಗಾಸಿಪ್‌. ನಟ ಗಣೇಶ್‌ ಗಡಿಬಿಡಿಯಲ್ಲಿ ಶಿಲ್ಪಾ ಅವರನ್ನು ವರಸಿದ್ದರು. ಅಂತಹ ಹೊತ್ತಲ್ಲೇ ಒಂದಷ್ಟು ಗಾಳಿಸುದ್ದಿ ವೈರಲ್ ಆಗಿ ಸುದ್ದಿ ಆಗಿಬಿಟ್ಟಿತ್ತು.
ರಾತ್ರೋ ರಾತ್ರಿ ಮದುವೆ ಮಾಡಿಕೊಂಡರು. ಓಡಿ ಹೋಗಿ ಮದುವೆ ಆದ್ರೂ ಎಂದೆಲ್ಲ ಸುಳ್ಳು ಸುದ್ದಿ ಹರಡಿತ್ತು.ನನ್ನ ಮದುವೆಯನ್ನ ಮೀಡಿಯಾದಲ್ಲಿ ಬೇರೆ ಬೇರೆ ರೀತಿ ತೋರಿಸುತ್ತಾರೆ ಅಂತ ನಾನು ಅಂದುಕೊಂಡಿರ್ಲಿಲ್ಲ. ಆಗ ತುಂಬಾ ಬೇಜಾರಾಯ್ತು. ಯಾವ ಮಟ್ಟಕ್ಕೆ ಆಯ್ತು ಅಂದ್ರೆ, ನನ್ನ ಪಾಪ್ಯುಲಾರಿಟಿ ನಾನು ಇಷ್ಟ ಪಟ್ಟ ಹುಡುಗಿಗೆ ಇಷ್ಟೊಂದು ಹರ್ಟ್ ಮಾಡುತ್ತಿದ್ಯಾ? ಅಂತ ಅನ್ನಿಸಿತ್ತು ಎಂದು ಗಣೇಶ್ ಹೇಳಿಕೊಂಡಿದ್ದರು.
ನಿಜ ಹೇಳಬೇಕು ಅಂದ್ರೆ ಆ ಸಮಯದಲ್ಲಿ ನನಗೆ ತುಂಬಾ ಒತ್ತಡ ಇತ್ತು. ಜನಪ್ರಿಯತೆಯೇ ನನಗೆ ಇಷ್ಟೊಂದು ನೋವು ಕೊಡ್ತಾ ಅನಿಸಿಬಿಡ್ತು. ಟಿವಿಗಳಲ್ಲಿ ಏನೇನೋ ಹಾಕಿದರು, ಏನೇನೋ ಬಂದುಬಿಡ್ತು. ಎವೆರಿಥಿಂಗ್ ವಾಸ್ ಬುಲ್ ಶಿಟ್. ಆ ತರಹ ಏನೂ ಇರಲಿಲ್ಲ. ಥ್ಯಾಂಕ್ಸ್ ಟು ಎವೆರಿಬಡಿ. ಅದೇ ಟೈಮ್ ನಾನು ಸ್ಟ್ರಾಂಗ್ ಆಗಿದ್ದು ಎಂದು ಗಣೇಶ್ ನೆನಪಿಸಿಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.