6 ವರ್ಷಗಳಿಂದ ಈ ಜೋಡಿಗೆ ಮಕ್ಕಳ ಭಾಗ್ಯ ಸಿಕ್ಕಿಲ್ಲ; ಐಂದ್ರಿತಾ ರೈ ವಯಸ್ಸು ಕಾರಣವಾಯಿತಾ
Aug 26, 2024, 19:14 IST
ಮೆರವಣಿಗೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಐಂದ್ರಿತಾ ರೇ, ಮನಸಾರೆ, ಜಂಗ್ಲಿ, ಭಜರಂಗಿ ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾಗಳಲ್ಲೇ ನಟಿಸಿ ಸೈ ಎನಿಸಿಕೊಂಡಿದ್ದರು. ಒಂದು ಸಮಯದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಐಂದ್ರಿತಾ ರೇ ಸದ್ಯ ಫ್ಯಾನ್ಸ್‌ಗೆ ಎಲ್ಲಿಯೂ ಕಾಣಿಸಿಗುತ್ತಿಲ್ಲ.
2022ರಲ್ಲಿ ಬಿಡುಗಡೆಯಾದ ತಿಮ್ಮಯ್ಯ & ತಿಮ್ಮಯ್ಯ ಚಿತ್ರವೇ ಐಂದ್ರಿತಾ ರೇ ನಟನೆಯ ಕೊನೆಯ ಚಿತ್ರವಾಗಿದ್ದು, ಮದುವೆಯಾದ ಮೇಲೆ ಐಂದ್ರಿತಾ ರೇಗೆ ಕನ್ನಡ ಸಿನಿಮಾ ಆಫರ್‌ಗಳೇ ಬರುತ್ತಿಲ್ಲವೇ ಎನ್ನುವ ಪ್ರಶ್ನೆ ಅವರ ಫ್ಯಾನ್ಸ್‌ಗಳಲ್ಲಿದೆ.
ಈ ಪ್ರಶ್ನೆಗೆ ಸ್ವತಃ ಐಂದ್ರಿತಾ ರೇ ಅವರೇ ಉತ್ತರಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಟಿ ಐಂದ್ರಿತಾ, ಮದುವೆಯಾದ ಮೇಲೆ ತುಂಬಾ ಬ್ಯುಸಿಯಾಗಿದ್ದೇನೆ. ನಾನು ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದೇನೆ. ದಿಗಂತ್ ಅವರ ಬಟ್ಟೆಯನ್ನು ಮಡಚಿ ಇಡುತ್ತಿದ್ದೇನೆ. ಹೀಗೆ ಫುಲ್ ಬ್ಯೂಸಿಯಾಗಿದ್ದೇನೆ ಎಂದು ತಮಾಷೆ ಮಾಡಿದ್ದಾರೆ.
ಇದೆಲ್ಲಾ ತಮಾಷೆಗಾಗಿ ಹೇಳಿದ್ದು, ನಾನು ಕಳೆದ ವರ್ಷದವರೆಗೂ ಹಿಂದಿಯಲ್ಲಿ ಬ್ಯೂಸಿಯಾಗಿದ್ದೆ. ತುಂಬಾ ವೆಬ್ ಸೀರಿಸ್‌ಗಳನ್ನು ಮಾಡಿದ್ದೇನೆ. ಹಿಂದಿ ಸಿನಿಮಾಗಳನ್ನು ಮಾಡಿದ್ದೇನೆ. ಎರಡು ಹಿಂದಿ ಸಿನಿಮಾಗಳನ್ನು ಮಾಡಿದ್ದೇನೆ. ಅದಾದ ಮೇಲೆ ಕನ್ನಡದಲ್ಲಿ ಒಳ್ಳೆ ಅವಕಾಶ ಸಿಗಬೇಕು ಅಂತಾ ಕಾತುರದಿಂದ ಕಾಯುತ್ತಿದ್ದೇನೆ.
ಯಾವುದೂ ಸಿಗುತ್ತಿಲ್ಲ. ಮದುವೆಯಾದ ಮೇಲಂತೂ ಎಲ್ಲರೂ ನನ್ನನ್ನು ರಿಜೆಕ್ಟ್ ಮಾಡಿದ್ದಾರೆ. ಆದರೆ ನನ್ನ ಫ್ಯಾನ್ಸ್ ನನ್ನ ರಿಜೆಕ್ಟ್ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಇನ್ಸ್ಟಾಗ್ರಾಮ್‌ನಲ್ಲಿ ಫ್ಯಾನ್ಸ್ ಕಂಬ್ಯಾಕ್ ಯಾವಾಗ ಅಂತಾ ಕೇಳುತ್ತಲೇ ಇರುತ್ತಾರೆ. ಆದರೆ ಅಂತಹ ಆಫರ್ ಯಾವುದೂ ಬಂದಿಲ್ಲ ಎಂದರು. ಮಕ್ಕಳು ಬೇಡ ಏಕೆಂದರೆ ಈಗಾಗಲೇ 3 ನಾಯಿಗಳು ನಮಗೆ ಮಕ್ಕಳಂತಾಗಿವೆ.
<a href=https://youtube.com/embed/vbv1a8q-AbQ?autoplay=1&mute=1><img src=https://img.youtube.com/vi/vbv1a8q-AbQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಮದುವೆ ಆದ ಮೇಲೆ ಆಫರ್‌ಗಳೇ ಬರುತ್ತಿಲ್ಲ. ಈಗ ನಾನು ಯಾರನ್ನು ದೂಷಿಸಬೇಕು. ಪ್ರೇಕ್ಷಕರನ್ನಾ, ನಿರ್ಮಾಪಕರನ್ನಾ, ಚಿತ್ರರಂಗಕ್ಕಾ ಯಾರನ್ನು ನಾನು ಬ್ಲೇಮ್ ಮಾಡಬೇಕು..? ದಿಗಂತ್‌ಗೆ ನಾನು ಕನ್ನಡಕ್ಕೆ ಕೆಲಸ ಮಾಡಬೇಕು ಎನ್ನುವ ಆಸೆ ಇದೆ. ಈಗ ನಾನು ಪೌಡರ್ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇನೆ ಎಂದು ಹೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.