ನಾಲ್ವರು ಗಂಡಸರನ್ನು ಮದುವೆಯಾದ ಮುದ್ದಾದ ಯುವತಿ, ಮೊದಲ ರಾತ್ರಿ ಆಗಿದ್ದನ್ನು ನೋಡಿ ಅಧಿಕಾರಿಗಳು ಶಾ.ಕ್

 

ಸಾಮಾನ್ಯವಾಗಿ ಗಂಡು ಮಕ್ಕಳು ಮೂರ್ನಾಲ್ಕು ಮದುವೆ ಆಗಿ ಸಂಸಾರ ಮಾಡಿ ಮೋಸ ಮಾಡಿರುವ ಘಟನೆ ಕೆಳಿರ್ತಿರಿ ಅದರೆ ಇಲ್ಲೊಬ್ಬ ಐನಾತಿ ಮಹಿಳೆ 4 ಜನರಿಗೆ ಪಂಗನಾಮ ಹಾಕಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ನಾಪತ್ತೆಯಾಗಿದ್ದ ಪತ್ನಿ ಬೇರೊಬ್ಬನನ್ನು ಮದುವೆಯಾಗಿರುವುದು ಸಾಮಾಜಿಕ ಜಾಲತಾಣದ ಪೋಸ್ಟ್‌ನಿಂದ ದಾವಣಗೆರೆ  ಮೂಲದ ವ್ಯಕ್ತಿಯೊಬ್ಬರಿಗೆ ಗೊತ್ತಾಗಿದೆ. 

ಸ್ನೇಹಾ ಅಲಿಯಾಸ್ ನಿರ್ಮಲಾ ಮತ್ತೊಂದು ಮದುವೆಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಇದರಿಂದಾಗಿ ಆಕೆ ರಘು ಎಂಬವರನ್ನು ಮದುವೆಯಾಗಿರುವುದು ಮೊದಲ ಪತಿ ಪ್ರಶಾಂತ್ ಬಿ ಎಂಬವರಿಗೆ ಗೊತ್ತಾಗಿದೆ. ಮೂರು ತಿಂಗಳ ಹಿಂದೆ ಸ್ನೇಹಾ ತಾನು ಗರ್ಭಿಣಿ ಎಂದು ಪೋಷಕರ ಮನೆಗೆ ಹೋಗಿದ್ದಳು ಆದರೆ ನಂತರ ನಾಪತ್ತೆಯಾಗಿದ್ದಳು ಎಂದು ಪ್ರಶಾಂತ್ ಹೇಳಿದ್ದಾರೆ.

ಡಿಸೆಂಬರ್ 21 ರಂದು ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ನಾಪತ್ತೆ ದೂರು ದಾಖಲಿಸಿದ್ದರು. ಇದಾದ ಕೆಲವೇ ದಿನಗಳ ನಂತರ ಆಕೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆಯಾಗಿರುವುದು ಗೊತ್ತಾಗಿದೆ.

ಹೆಂಡತಿ ತಾನು ಗರ್ಭಿಣಿ ಎಂದು ತನ್ನ ಪೋಷಕರ ಮನೆಗೆ ಹೋಗಿದ್ದಳು. ಗರ್ಭಪಾತದ ಮಾತ್ರೆ ಸೇವಿಸಿ ಮಗುವಿಗೆ ಗರ್ಭಪಾತ ಮಾಡಿಸಿ, ನನಗೆ ತಿಳಿಸದೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿದ್ದಾಳೆ. ನಾವು ಮದುವೆಯಾಗಿ ಒಂದೂವರೆ ವರ್ಷವಾಗಿತ್ತು. ಮದುವೆಯ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೋಡಿದ ನಂತರ ಆಕೆ ಮತ್ತೊಂದು ಮದುವೆಯಾಗಿರುವುದು ಗೊತ್ತಾಯಿತು ಎಂದು ಕಣ್ಣೀರು ಹಾಕಿದ್ದಾರೆ.

ಪ್ರಶಾಂತ್ 2022 ರ ಫೆಬ್ರವರಿಯಲ್ಲಿ ಸ್ನೇಹಾಳನ್ನು ವಿವಾಹವಾಗಿದ್ದು, ಒಂದೂವರೆ ವರ್ಷಗಳ ಕಾಲ ಒಟ್ಟಿಗೆ ಇದ್ದರು. ಸೋಷಿಯಲ್ ಮೀಡಿಯಾದಲ್ಲಿ ಆಕೆಯನ್ನು ಭೇಟಿಯಾದ ನಂತರ ಆಕೆಯನ್ನು ಪ್ರೀತಿಸಿ ನಂತರ ಮದುವೆಯಾಗಿದ್ದೆ ಎಂದು ಅವರು ಹೇಳಿದ್ದಾರೆ.
ಸ್ನೇಹಾ ಮಂಡ್ಯ ಜಿಲ್ಲೆಯ ನರಹಳ್ಳಿ ನಿವಾಸಿ. ಪ್ರಶಾಂತ್ ನನ್ನು ಮದುವೆಯಾಗುವ ಮುನ್ನ ಆಕೆ ಇನ್ನಿಬ್ಬರನ್ನು ಮದುವೆಯಾಗಿದ್ದಳು ಎನ್ನಲಾಗಿದೆ. ಈಗ ಬೆಂಗಳೂರಿನ ನಿವಾಸಿ ರಘು ಎಂಬಾತನನ್ನು ಮದುವೆಯಾಗಿದ್ದಾಳೆ.

ನನಗಿಂತ ಮೊದಲು ಇಬ್ಬರು ಪುರುಷರನ್ನು ಮದುವೆಯಾದ ಕಾರಣ ಆಕೆಗೆ ನಾನು ಮೂರನೇ ಪತಿಯಾಗಿದ್ದೆ. ಈಗ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ನಾನು ಅವಳನ್ನು ಮದುವೆಯಾಗುವಾಗ ಅವಳ ಹಿಂದಿನ ಮದುವೆಗಳ ಬಗ್ಗೆ ಅವಳ ಕುಟುಂಬದ ಯಾರೂ ನನಗೆ ಹೇಳಲಿಲ್ಲ. ಅವಳು ಮೊದಲು ಮದುವೆಯಾಗಿದ್ದಳು ಎಂದು ಅವಳ ಸಂಬಂಧಿಕರೊಬ್ಬರು ಇತ್ತೀಚೆಗೆ ನನಗೆ ತಿಳಿಸಿದ್ದರು ಎಂದು ಪ್ರಶಾಂತ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.